For Quick Alerts
  ALLOW NOTIFICATIONS  
  For Daily Alerts

  'ರವಿಮಾಮ'ನಿಗೆ ವಿಭಿನ್ನವಾಗಿ ಶುಭಕೋರಿದ ದರ್ಶನ್, ಮನೋರಂಜನ್, ಸುನಿ

  By Bharath Kumar
  |

  ಕನ್ನಡದ 'ಕನಸುಗಾರ', ಸ್ಯಾಂಡಲ್ ವುಡ್ 'ಕ್ರೇಜಿಸ್ಟಾರ್' ನಮ್ ಇಂಡಸ್ಟ್ರಿಯ ರಿಯಲ್ ಶೋ ಮ್ಯಾನ್ ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡಿದ್ದಾರೆ.

  ರವಿಚಂದ್ರನ್ ಅವರನ್ನ ಚಂದನವನದಲ್ಲಿ ಇಷ್ಟಪಡುವ ಅನೇಕ ಕಲಾವಿದರಿದ್ದಾರೆ. ರವಿ ಸರ್, ರವಿಮಾಮ ಎಂದು ಪ್ರೀತಿಯಿಂದ ಕರೆಯುವ ಸ್ಟಾರ್ ಗಳು ಟ್ವಿಟ್ಟರ್ ಮೂಲಕ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

  ರವಿಚಂದ್ರನ್ ಅವರ ಮಗ ಮನೋರಂಜನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ರಮೇಶ್ ಅರವಿಂದ್, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಟಿ ಮಾನ್ವಿತಾ ಹರೀಶ್ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ. ಹಾಗಿದ್ರೆ, ಯಾರು ಹೇಗೆ ವಿಶ್ ಮಾಡಿದ್ದಾರೆ ಎಂದು ಮುಂದೆ ನೋಡಿ...

  ತಂದೆಗೆ ಮಗನ ಶುಭಾಶಯ

  ಕ್ರೇಜಿಸ್ಟಾರ್ ಅವರ ಪುತ್ರ ಮನೋರಂಜನ್ ತಮ್ಮ ಟ್ವಿಟ್ಟರ್ ಖಾತೆಯನ್ನ ಬಳಿಸಿ ಪ್ರೀತಿಯ ಅಪ್ಪನ ಜನುಮದಿನಕ್ಕೆ ಶುಭಕೋರಿದ್ದಾರೆ. ಸದ್ಯ, ಮನೋರಂಜನ್ 'ಚಿಲ್ಲಂ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಶ್ರೀಕೃಷ್ಣನಿಗೆ ಶುಭಕೋರಿದ ದುರ್ಯೋಧನ

  ಕ್ರೇಜಿಸ್ಟಾರ್ ಹುಟ್ಟುಹಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ಇತ್ತೀಚಿಗಷ್ಟೆ 'ಕುರುಕ್ಷೇತ್ರ'ದಲ್ಲಿ ಈ ಇಬ್ಬರು ಒಟ್ಟಿಗೆ ನಟಿಸಿದ್ದರು. ದರ್ಶನ್ ದುರ್ಯೋಧನನಾಗಿದ್ರೆ, ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ.

  ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ 'ಪಡ್ಡೆಹುಲಿ'ಯಿಂದ ಭರ್ಜರಿ ಗಿಫ್ಟ್ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ 'ಪಡ್ಡೆಹುಲಿ'ಯಿಂದ ಭರ್ಜರಿ ಗಿಫ್ಟ್

  ಸಿಂಪಲ್ ಸುನಿ ಟ್ವೀಟ್

  ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಅವರು ಸ್ಯಾಂಡಲ್ ವುಡ್ ನ ಲೆಜೆಂಡ್ ನಿರ್ದೇಶಕ ರವಿಚಂದ್ರನ್ ಅವರಿಗೆ ಬರ್ತಡೇ ವಿಶ್ ಮಾಡಿದ್ದಾರೆ. ''ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕವನ್ನು ಸೃಷ್ಟಿ ಮಾಡಿದ..ರೂಪದಲ್ಲಿ ಚೆಲುವ ಅದ್ದೂರಿತನದಲ್ಲಿ ರಣಧೀರ ದೃಶ್ಯಚೌಕಟ್ಟಿನಲ್ಲಿ ಕನಸುಗಾರ ಕ್ರೇಜಿಸ್ಟಾರ್ "ರವಿಚಂದ್ರನ್"ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ..'' ಎಂದು ಟ್ವೀಟ್ ಮಾಡಿದ್ದಾರೆ.

  ಅಜನೀಶ್ ಲೋಕನಾಥ್

  ಕನ್ನಡದ ಯುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸ್ಯಾಂಡಲ್ ವುಡ್ ಶೋ ಮ್ಯಾನ್ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇನ್ನು ರವಿಂದ್ರನ್ ಮತ್ತು ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದ 'ಪಡ್ಡೆಹುಲಿ' ಚಿತ್ರದ ಮೋಷನ್ ಪೋಸ್ಟರ್ ಉಡುಗೊರೆಯಾಗಿ ನೀಡಿದ್ದಾರೆ.

  ಅಂಬಿ-ರವಿ ಸರ್ ಗೆ ಶುಭಕೋರಿದ ರಮೇಶ್

  ನಿನ್ನೆ (ಮೇ 29) ರೆಬಲ್ ಸ್ಟಾರ್ ಅಂಬರೀಶ್ ಅವರ ಬರ್ತಡೇ, ಇಂದು (ಮೇ 30) ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ. ಹೀಗಾಗಿ, ಇಬ್ಬರು ದಿಗ್ಗಜರಿಗೂ ನಟ-ನಿರ್ದೇಶಕ ರಮೇಶ್ ಅರವಿಂದ್ ಒಟ್ಟಿಗೆ ಶುಭ ಕೋರಿದ್ದಾರೆ.

  ಕ್ರೇಜಿ ಕಲಾವಿದನಿಗೆ ವಿಶ್ ಮಾಡಿದ ಮಾನ್ವಿತಾ

  ಕನ್ನಡದ ಯುವ ನಟಿ ಮಾನ್ವಿತಾ ಹರೀಶ್ ಲೆಜೆಂಡ್ ನಟನಿಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

  English summary
  Crazy Star Ravichandran celebrated his 57th birthday today (May 30) with family, friends and fans in Bengaluru. Several Kannada film personalities visited Ravichandran to personally greet him on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X