For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ನೋಡೋಕೆ ಶಿವಣ್ಣ, ಸುದೀಪ್, ಯಶ್, ಉಪ್ಪಿ ರೆಡಿ

  By Bharath Kumar
  |
  NAGARAHAAVU : ನಾಗರಹಾವು ಸಿನಿಮಾ ಬಗ್ಗೆ ಶಿವಣ್ಣ, ಸುದೀಪ್, ಯಶ್ ಹೇಳಿದ್ದೇನು..? | Filmibeat Kannada

  ದಿವಂಗತ ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ 'ನಾಗರಹಾವು' ಈಗ 7.1 ಸಿನಿಮಾಸ್ಕೋಪ್ ನಲ್ಲಿ ಆಧುನಿಕ ತಂತ್ರಜ್ಙಾನದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ.

  ಕನ್ನಡದ ಸಾರ್ವಕಾಲಿಕ ಎವರ್ ಗ್ರೀನ್ ಸಿನಿಮಾಗೆ ಒಳ್ಳೆಯದಾಗಲಿ ಹಾಗೂ ಈ ಸಿನಿಮಾವನ್ನ ಹೊಸ ರೂಪದಲ್ಲಿ ನೋಡಬೇಕೆಂದು ಇಂದಿನ ಸ್ಯಾಂಡಲ್ ವುಡ್ ಸ್ಟಾರ್ ಗಳು ಕಾಯುತ್ತಿದ್ದಾರೆ. ಈ ಬಗ್ಗೆ ಕನ್ನಡ ನಟರು ಮಾತನಾಡಿದ್ದು, ಈ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ ಲೌಡ್ ಮಾಡಲಾಗಿದೆ.

  ಸೆಂಚುರಿಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ನಿರ್ದೇಶಕ ಯೋಗರಾಜ್ ಭಟ್, ನಟಿ ಸುಹಾಸಿನಿ, ವಿನೋದ್ ರಾಜ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಎಲ್ಲರೂ ಈ ಚಿತ್ರವನ್ನ ನೋಡಲು ಸಜ್ಜಾಗಿದ್ದಾರೆ.

  ಟಿಕೆಟ್ ತಗೊಂಡು 'ನಾಗರಹಾವು' ಸಿನಿಮಾ ನೋಡ್ತಿನಿ ಎಂದ ಅಂಬಿ ಟಿಕೆಟ್ ತಗೊಂಡು 'ನಾಗರಹಾವು' ಸಿನಿಮಾ ನೋಡ್ತಿನಿ ಎಂದ ಅಂಬಿ

  ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಅವರು ಈಶ್ವರಿ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಇದೀಗ, ಕ್ರೇಜಿಸ್ಟಾರ್ ಸಹೋದರ ಬಾಲಾಜಿ ಈ ಚಿತ್ರಕ್ಕೆ ಹೊಸ ತಂತ್ರಜ್ಙಾನದ ಟಚ್ ಕೊಟ್ಟು, ಮತ್ತೆ ತರ್ತಿದ್ದಾರೆ. ಇದೇ ತಿಂಗಳು 20 ರಂದು ನಾಗರಹಾವು ಸಿನಿಮಾ ರಿ-ರಿಲೀಸ್ ಆಗುತ್ತಿದ್ದು,

  'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ 'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ

  ಡಾ ವಿಷ್ಣುವರ್ಧನ್, ಕೆ.ಎಸ್ ಅಶ್ವತ್ಥ್, ಶುಭ, ಲೀಲಾವತಿ, ಆರತಿ, ಅಂಬರೀಶ್, ಜಯಂತಿ, ಶಿವರಾಂ, ಎಂ.ಪಿ ಶಂಕರ್, ಲೋಕನಾಥ್, ವಜ್ರಮುನಿ ಸೇರಿದಂತೆ ಹಲವರು ಅಭಿನಯಿಸಿದ್ದರು. ವಿಜಯ ಬಾಸ್ಕರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಮೂಲ ಸಿನಿಮಾ 1972 ರಲ್ಲಿ ಬಿಡುಗಡೆಯಾಗಿತ್ತು. ಇದೀಗ, 46 ವರ್ಷಗಳ ನಂತರ ಮತ್ತೆ ನಾಗರಹಾವು ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲು ಸಿದ್ಧವಾಗ್ತಿದೆ.

  English summary
  Kannada actor shiva rajkumar, sudeep, yash, upendra, ambareesh Wishes For naagarahavu movie re release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X