For Quick Alerts
  ALLOW NOTIFICATIONS  
  For Daily Alerts

  ಅಂಬಿ 65ನೇ ಹುಟ್ಟುಹಬ್ಬಕ್ಕೆ ಯಾರೆಲ್ಲಾ ತಾರೆಯರು ಶುಭ ಕೋರಿದ್ದಾರೆ ನೋಡಿ..

  By Suneel
  |

  ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ರವರಿಗಿಂದು(ಮೇ 29) 65ನೇ ಹುಟ್ಟುಹಬ್ಬದ ಸಂಭ್ರಮ. ನಟ ಅಂಬರೀಶ್ ಅವರು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ರಾಜಕೀಯ ರಂಗದಲ್ಲೂ ತೊಡಗಿಕೊಂಡು ತಮ್ಮ ಸೇವೆಯ ಮೂಲಕ ಕಲಿಯುಗದ ಕರ್ಣ ಎಂದು ಬಿಂಬಿತರಾಗಿದ್ದಾರೆ.

  ತಮ್ಮ ನೇರನುಡಿಯಿಂದಲೇ ಎಲ್ಲರಿಗೂ ಇಷ್ಟವಾಗುವ ಅಂಬಿರೀಶ್ ರವರು ಇಂದು 65ನೇ ವರ್ಷವನ್ನು ಪೂರೈಸಿದ್ದು, ತಮ್ಮ ಹುಟ್ಟುಹಬ್ಬವನ್ನು ಇಂದು ಜೆ.ಪಿ.ನಗರದ ತಮ್ಮ ಮನೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ.[ರೆಬೆಲ್ ಸ್ಟಾರ್ ಅಂಬಿಗೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

  ಅಂದಹಾಗೆ ಸ್ಯಾಂಡಲ್ ವುಡ್ ನ 'ಒಂಟಿಸಲಗ' ಅಂಬರೀಶ್ ರವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಚಂದನವನದ ಹಲವು ತಾರೆಯರು ಪ್ರೀತಿಯಿಂದ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಯಾರ್ಯಾರು ಹೇಗೆಲ್ಲಾ ಅಂಬರೀಶ್ ಅವರಿಗೆ ವಿಶ್ ಮಾಡಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ..

  ಅಣ್ಣನಿಗೆ ಶುಭಾಶಯ ಕೋರಿದ ನಟ ಜಗ್ಗೇಶ್

  ಅಣ್ಣನಿಗೆ ಶುಭಾಶಯ ಕೋರಿದ ನಟ ಜಗ್ಗೇಶ್

  ತಮ್ಮ ಹಿರಿಯಣ್ಣ ಎಂತಲೇ ಸಂಬೋಧಿಸುವ ನವರಸನಾಯಕ ನಟ ಜಗ್ಗೇಶ್ ತಾವು ಅಂಬರೀಶ್ ರೊಂದಿಗೆ ಇರುವ ಫೋಟೋ ಸಹಿತ ಟ್ವಿಟ್ಟರ್ ನಲ್ಲಿ " ಹಿರಿಯಣ್ಣ ಆತ್ಮೀಯ ಮಾರ್ಗದರ್ಶಕ, ನೇರನುಡಿ ಒಂಟಿಸಲಗ, ಮಗುವಿನಂತ ಗುಣ, ಸಹಾಯ ಹಸ್ತ ಮಾತೃಹೃದಯಿ, ಕೋಪದಲ್ಲಿ ರುದ್ರಮುನಿ, ಯಾರಿಗೂ ಬಗ್ಗದ ಶುದ್ಧ ಆತ್ಮ ಈ ಗುಣಗಳ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ" ಎಂದು ಬರೆದು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

  ಆರೋಗ್ಯ ಭಾಗ್ಯ ಕೋರಿದ ಚಿರಂಜೀವಿ ಸರ್ಜಾ

  ಆರೋಗ್ಯ ಭಾಗ್ಯ ಕೋರಿದ ಚಿರಂಜೀವಿ ಸರ್ಜಾ

  "ಹ್ಯಾಪಿ ಬರ್ತ್ ಡೇ ಅಂಬರೀಶ್ ಮಾಮ. ದೇವರು ನಿಮಗೆ ಹೆಚ್ಚು ಸಂತೋಷ, ಆರೋಗ್ಯ ಭಾಗ್ಯ ನೀಡಲಿ. ಲವ್ ಯು ಮಾಮ" ಎಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಶುಭಾಶಯ ತಿಳಿಸಿದ್ದಾರೆ.

  ಸಂತೋಷ್ ಆನಂದ್ ರಾಮ್

  ಸಂತೋಷ್ ಆನಂದ್ ರಾಮ್

  'ರಾಜಕುಮಾರ' ಚಿತ್ರದ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್, "ಸ್ನೇಹದ ಅರ್ಥಕ್ಕೆ ಮರುವ್ಯಾಖ್ಯಾನ ನೀಡಿದ, ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನಿಗೆ ಹ್ಯಾಪಿ ಬರ್ತ್ ಡೇ. ದೀರ್ಘಕಾಲ ಬಾಳಿ ಅಣ್ಣ' ಎಂದು ಶುಭಕೋರಿದ್ದಾರೆ.

  ಹರ್ಷಿಕಾ ಪೂಣಚ್ಚ

  ಹರ್ಷಿಕಾ ಪೂಣಚ್ಚ

  "ಅಂಬರೀಶ್ ಅಂಕಲ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಸದಾ ನಮಗೆ ಪ್ರೀತಿ ತೋರಿಸುತ್ತೀರಿ. ನೀವು ಸದಾ ಸರಿಯಾದ ನಿರ್ಧಾರಗಳಿಂದ ನಿಲ್ಲುತ್ತೀರಿ. ಸಮಸ್ಯೆಗಳು ಎದುರಾದಲ್ಲಿ ನಿಮ್ಮ ಅಗತ್ಯ ಇದೆ." - ಎಂದು ನಟಿ ಹರ್ಷಿಕಾ ಪೂಣಚ್ಚ ತಾವು ಅಂಬರೀಶ್ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋ ಹಾಕಿ ವಿಶ್ ಮಾಡಿದ್ದಾರೆ.

  ಸಂಜನಾ ಗಲ್ರಾನಿ

  ಸಂಜನಾ ಗಲ್ರಾನಿ

  ನಟಿ ಸಂಜನಾ ಗಲ್ರಾನಿ ರವರು ಟ್ವಿಟ್ಟರ್ ಮೂಲಕ ಅಂಬರೀಶ್ ಅವರಿಗೆ, ' ಸೂಪರ್ ಸ್ಟಾರ್ ಅಂಬರೀಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅಂಬರೀಶ್ ಅವರ ಹಲವು ಚಿತ್ರಗಳ ಹಾಡುಗಳು ಸದಾ ನನಗೆ ಇಷ್ಟವಾಗುತ್ತವೆ.' ಎಂದು ಅಂಬರೀಶ್ ರವರ ಸಿನಿಮಾ ಹಾಡುಗಳ ಯೂಟ್ಯೂಬ್ ಲಿಂಕ್ ಹಾಕಿ ಟ್ವೀಟ್ ಮಾಡಿದ್ದಾರೆ.

  English summary
  Rebel star Ambareesh has been Celebrating his 65th birthday today(may 29). Here is Sandalwood Celebrities who are Wishes to Ambareesh 65th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X