»   » ರೆಬೆಲ್ ಸ್ಟಾರ್ ಅಂಬಿಗೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ರೆಬೆಲ್ ಸ್ಟಾರ್ ಅಂಬಿಗೆ ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರಿಗಿಂದು 65ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ, ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗದ ನಟ-ನಟಿಯರು ಕೂಡ ರೆಬೆಲ್ ಸ್ಟಾರ್ ಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.[ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು]

ಇನ್ನು ಬರ್ತ್ ಡೇ ಖುಷಿಯಲ್ಲಿರುವ 'ಆಂಗ್ರಿ ಯಂಗ್ ಮ್ಯಾನ್' ಗೆ ನಟ ದರ್ಶನ್ ಕೂಡ ವಿಶ್ ಮಾಡಿದ್ದಾರೆ. ಅಂದ್ಹಾಗೆ, ಅಂಬರೀಶ್ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಒಂದು ರೀತಿಯ ಅಭಿಮಾನ, ಪ್ರೀತಿ. ಚಿತ್ರರಂಗದಲ್ಲಿ ಅಂಬಿಗೆ ದರ್ಶನ್ ಅವರು ಕೊಡುವ ಗೌರವ ಅಪಾರ. ಯಾರ ಮಾತಿಗೆ ತಲೆತಗ್ಗಿಸಿದ ದಾಸ, ಅಂಬಿ ಮಾತಿಗೆ ತಲೆಬಾಗುತ್ತಾರೆ ಎಂಬ ಮಾತು ಚಿತ್ರವಲಯದಲ್ಲಿದೆ. ಮುಂದೆ ಓದಿ.....

ಅಂಬಿಗೆ ದಾಸನ ಶುಭಾಶಯ

ರೆಬೆಲ್ ಸ್ಟಾರ್ ಅಂಬರೀಶ್ ಅವರ 65 ನೇ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.[ಇಂದು ಅಂಬರೀಶ್ ಹುಟ್ಟುಹಬ್ಬ, ನ್ಯೂಸ್ ಅದಲ್ಲ! ]

ಸದಾ ಸಂತೋಷವಾಗಿರಿ

''ಪ್ರೀತಿಯ ಅಪ್ಪಾಜಿಗೆ ನನ್ನ ಪ್ರೀತಿಯ ಶುಭಾಶಯಗಳು. ಆರೋಗ್ಯದ ಜೊತೆಗೆ ಸಂತೋಷ ಸದಾ ನಿಮ್ಮ ಜೊತೆಯಲ್ಲಿರಲಿ. ನೀವು ತಂಬಾ ಸ್ಪೆಷಲ್'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಅಂಬಿ ಅಂದ್ರೆ ದಚ್ಚುಗೆ ಅಭಿಮಾನ

ನಟ ದರ್ಶನ್ ಅವರಿಗೆ ಅಂಬರೀಶ್ ಅವರಂದ್ರೆ ತುಂಬಾ ಅಭಿಮಾನ ಮತ್ತು ಪ್ರೀತಿ. ಇಂದಿಗೂ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರು ಹೆಚ್ಚು ಇಷ್ಟ ಪಡುವ ವ್ಯಕ್ತಿ ಅಂದ್ರೆ ಅದು ಅಂಬರೀಶ್.

ದಚ್ಚು-ಅಂಬಿ ಜೋಡಿ

ತೆರೆ ಹಿಂದೆ ಉತ್ತಮ ಬಾಂಧವ್ಯ ಹೊಂದಿರುವ ದರ್ಶನ್ ಮತ್ತು ಅಂಬರೀಶ್ ತೆರೆ ಮೇಲೆ ಕೂಡ ಮಿಂಚಿದ್ದಾರೆ. ಆರಂಭದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ದೇವರ ಮಗ' ಚಿತ್ರದಲ್ಲಿ ಅಂಬರೀಶ್ ಅವರ ಜೊತೆ ದರ್ಶನ್ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ 'ಅಣ್ಣಾವ್ರು' ಚಿತ್ರದಲ್ಲಿ ಅಂಬಿ ಮತ್ತು ದರ್ಶನ್ ನಾಯಕರಾಗಿ ಮಿಂಚಿದ್ದರು.

ತಂದೆ-ಮಗ

ದರ್ಶನ್ ತೂಗುದೀಪ ಅವರ ಬ್ಯಾನರ್ ನಲ್ಲಿ ನಿರ್ಮಾಣವಾದ 'ಬುಲ್ ಬುಲ್' ಚಿತ್ರದಲ್ಲಿ ಅಂಬರೀಶ್ ಹಾಗೂ ದರ್ಶನ್ ತಂದೆ-ಮಗನಾಗಿ ಕಾಣಿಸಿಕೊಂಡು ಕಲಾಭಿಮಾನಿಗಳನ್ನ ರಂಜಿಸಿದ್ದರು.

ದರ್ಶನ್ ಗಾಗಿ 'ಅಂಬರೀಶ'

ಇನ್ನು ಅಂಬರೀಶ್ ಅವರ ಹೆಸರಿನಲ್ಲಿ 'ಅಂಬರೀಶ' ಎಂಬ ಚಿತ್ರವನ್ನ ಕೂಡ ದರ್ಶನ್ ಮಾಡಿದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿ, ನಾಡಪ್ರಭು ಕೆಂಪೇಗೌಡರಾಗಿ ಘರ್ಜಿಸಿದ್ದರು.

ಗುರು-ಶಿಷ್ಯರು

ಇನ್ನು ಎಲ್ಲ ಅಂದುಕೊಂಡಂತೆ ಆದರೇ, ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ದರ್ಶನ್ ಹಾಗೂ ಅಂಬಿ ಗುರು-ಶಿಷ್ಯರಾಗಿ ಬಣ್ಣ ಹಚ್ಚಲಿದ್ದಾರೆ. 'ಕುರುಕ್ಷೇತ್ರ'ದಲ್ಲಿ ದರ್ಶನ್ 'ದುರ್ಯೋಧನ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೇ, ಅಂಬರೀಶ್ ಅವರು 'ಭೀಷ್ಮ'ನ ಪಾತ್ರ ಮಾಡುವ ಸಾಧ್ಯತೆಯಿದೆ ಅಂತೆ.

English summary
Kannada Actor Challenging Star Darshan Wish to Rebel Star Ambarish for his 65th Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada