Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಜಯಂತಿ ನಿಧನ: ದರ್ಶನ್, ಉಪೇಂದ್ರ ಸೇರಿದಂತೆ ಸಿನಿತಾರೆಯರು ಸಂತಾಪ
ಕನ್ನಡದ ಹಿರಿಯ ನಟಿ, ಅಭಿನಯ ಶಾರದೆ, 'ಬೋಲ್ಡ್ ಅಂಡ್ ಬ್ಯೂಟಿಫುಲ್' ಖ್ಯಾತಿಯ ಜಯಂತಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 76 ವರ್ಷದ ಜಯಂತಿ ನಿಧನಕ್ಕೆ ಅಭಿಮಾನಿ ಬಳಗ, ಚಿತ್ರರಂಗ ಗಣ್ಯರು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಜಯಂತಿ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ಉಪೇಂದ್ರ, ಸತೀಶ್ ನೀನಾಸಂ, ನಿಖಿಲ್ ಕುಮಾರ್, ಶರಣ್, ಅಮೂಲ್ಯ ಸೇರಿದಂತೆ ಹಲವು ಸಿನಿತಾರೆಯರು ಜಯಂತಿ ಅವರನ್ನು ಸ್ಮರಿಸಿದ್ದಾರೆ. ಮುಂದೆ ಓದಿ...

ನಟ ದರ್ಶನ್ ಸಂತಾಪ
''ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ಅಮ್ಮಾವ್ರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ'' ಎಂದು ನಟ ದರ್ಶನ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
'ಅಭಿನಯ
ಶಾರದೆ'
ನಿಧನಕ್ಕೆ
ಯಡಿಯೂರಪ್ಪ,
ಸಿದ್ದರಾಮಯ್ಯ,
ಕುಮಾರಸ್ವಾಮಿ
ಸಂತಾಪ

ಅಭಿನೇತ್ರಿಗೆ ಉಪೇಂದ್ರ ನಮನ
''ಖ್ಯಾತ ಅಭಿನೇತ್ರಿ, ಅಭಿನಯ ಶಾರದೆ ಜಯಂತಿ ಅಮ್ಮ ಅವರು ವಿಧಿವಶರಾಗಿದ್ದಾರೆ. ನಿಮ್ಮ ದೊಡ್ಡ ಅಭಿಮಾನಿಯಾಗಿ, ಆರಾಧಕನಾಗಿ ಬೆಳೆದವನು ನಾನು. ನೀವು ಎಂದೆಂದೂ ಎಲ್ಲ ಕಲಾವಿದರಿಗೂ ಉದಾಹರಣೆಯಾಗಿ ಓಬವ್ವನಂತೆ ನಿಲ್ಲುತ್ತೀರಿ. ನೀವು ಎಲ್ಲ ಕನ್ನಡ ಚಿತ್ರಾಭಿಮಾನಿಗಳ ಮನಸಲ್ಲಿ ಎಂದೆಂದೂ ಅಮರರಾಗಿರುತ್ತೀರಿ ಮತ್ತೆ ಹುಟ್ಟಿ ಬರಲೇಬೇಕು ನೀವು'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ನಿಖಿಲ್ ಸಂತಾಪ
''ಅಭಿನಯ ಶಾರದೆ, ಹಿರಿಯ ನಟಿ ಜಯಂತಿರವರು ವಿಧಿವಶರಾಗಿರುವ ವಿಷಯ ತಿಳಿದು ಬಹಳ ಬೇಸರವಾಯಿತು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ, ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ನಟ-ರಾಜಕಾರಣಿ ನಿಖಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಜಯಂತಿ
ಕೊನೆ
ದಿನಗಳ
ಹೇಗಿದ್ದವು?
ಮಗ
ಕೃಷ್ಣಕುಮಾರ್
ಹೇಳಿದ್ದು
ಹೀಗೆ

ಅಭಿಮಾನಿಗಳ ಹೃದಯಲ್ಲಿ ಎಂದೂ ಕರಗದ ಆಸ್ತಿ
''ಹಚ್ಚೋ ಬಣ್ಣಕ್ಕೆ ಕೊಟ್ಟು ಮರ್ಯಾದೆ, ನಟನೆಯಲ್ಲಿ ಶಾರದೆ, ಕನ್ನಡ ಚಿತ್ರ ರಸಿಕರಿಗೆ ಬೆಳ್ಳಿ ಪರೆದೆಯ ಸರ್ವಕಾಲಿಕ ಚಿತ್ರದುರ್ಗದ ಓಬವ್ವ.. ಅಭಿನಯ ಶಾರದೆ ಜಯಂತಿ ನೀವು ಚಿತ್ರ ಪ್ರೇಮಿಗಳ ಹೃದಯದಲ್ಲಿ ಎಂದು ಕರಗದ ಆಸ್ತಿ'' ಎಂದು ನಟ-ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿದ್ದಾರೆ.

ಶಾರದೆಯಲ್ಲಿ ಲೀನ
ಜಯಂತಿ ಅವರ ನಿಧನಕ್ಕೆ ನಟ ಶರಣ್ ಸಂತಾಪ ವ್ಯಕ್ತಪಡಿಸಿದ್ದು, ''ಅಭಿನಯ ಶಾರದೆ, ಶಾರದೆಯಲ್ಲಿ ಲೀನ'' ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ನಟ ಶರಣ್ ಸಹ ಟ್ವಿಟ್ಟರ್ ಮೂಲಕ ಜಯಂತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ''ಕನ್ನಡ ಚಿತ್ರರಂಗದ 'ಅಭಿನಯ ಶಾರದೆ' ಜಯಂತಿ ಅಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ..ಓಂ ಶಾಂತಿ'' ಎಂದಿದ್ದಾರೆ.

ಆರ್ ಚಂದ್ರು ಸಂತಾಪ
''ಭೌತಿಕವಾಗಿ ನೀವು ನಮ್ಮನ್ನು ಅಗಲಿದ್ದರು ನಿಮ್ಮ ಸಿನಿಮಾಗಳ ಮೂಲಕ ನಮ್ಮ ಹೃದಯದಲ್ಲಿ ನೀವು ಶಾಶ್ವತವಾಗಿ ನೆಲೆಸಿದ್ದೀರಿ ಅಮ್ಮ ನಿಮ್ಮ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ಮತ್ತು ನಿಮ್ಮ ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರಿಗೆ ನಿಮ್ಮ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ನಿರ್ದೇಶಕ ಚಂದ್ರು ಟ್ವೀಟ್ ಮಾಡಿದ್ದಾರೆ.
Recommended Video

ನಮ್ಮೆಲ್ಲರ ಮನದಲ್ಲಿ ನೀವು ಅಜರಾಮರ
''ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿ ಅವರು ನಮ್ಮನ್ನಗಲಿದ್ದಾರೆ...ಅಮ್ಮ ನಿಮ್ಮ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ನೀವು ಅಜರಾಮಾರ ...ಓಂ ಶಾಂತಿ'' ಎಂದು ನಟಿ ಅಮೂಲ್ಯ ಸಂತಾಪ ಸೂಚಿಸಿದ್ದಾರೆ.