For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದ ಖ್ಯಾತ ಕಾಸ್ಟ್ಯೂಮ್ ಡಿಸೈನರ್, ಹಾಸ್ಯ ನಟ ಗಂಡಸಿ ನಾಗರಾಜ್(57) ನಿಧನ

  |

  ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಪದ್ಮಾನಾಭ ನಗರದಲ್ಲಿರುವ ದೇವೆಗೌಡ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಡಿಸೆಂಬರ್ 11) ರಾತ್ರಿ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬರೀ ಕಾಸ್ಟ್ಯೂಮ್ ಡಿಸೈನರ್ ಆಗಿ ಮಾತ್ರವಲ್ಲದೇ ಹಾಸ್ಯ ಕಲಾವಿದರಾಗಿಯೂ ಸಾಕಷ್ಟು ಸಿನಿಮಾಗಳಲ್ಲಿ ಗಂಡಸಿ ನಾಗರಾಜ್ ನಟಿಸಿದ್ದರು.

  ಗಂಡಸಿ ನಾಗರಾಜ್ ಅವರು ನವರಸ ನಾಯಕ ಜಗ್ಗೇಶ್ ಅವರ ಆಪ್ತ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಜಗ್ಗಣ್ಣನ ಜೊತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 2004ರಿಂದ 2016ರ ನಡುವೆ 15 ವರ್ಷಗಳ ಕಾಲ ಗಂಡಸಿ ನಾಗರಾಜ್ ಹೆಚ್ಚು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಇವರು ಸಿನಿಮಾ ನಟನಾಗಬೇಕು ಎಂದುಕೊಂಡಿದ್ದರು. ಆದರೆ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್ ಕೈ ಹಿಡಿದಿತ್ತು. ಇದೇ ಮುಂದೆ ಚಿತ್ರರಂಗದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಲು ಸಹಾಯ ಮಾಡಿತ್ತು. 35 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

  ಅವರು ಕನ್ನಡವನ್ನೇ ಮಾತನಾಡಲ್ಲ; ಬೇರೆ ರಾಜ್ಯಗಳಿಗೆ ಹೋಗಿ ಕನ್ನಡ ಮರೆತವರಿಗೆ ಚಾಟಿ ಬೀಸಿದ ದರ್ಶನ್!ಅವರು ಕನ್ನಡವನ್ನೇ ಮಾತನಾಡಲ್ಲ; ಬೇರೆ ರಾಜ್ಯಗಳಿಗೆ ಹೋಗಿ ಕನ್ನಡ ಮರೆತವರಿಗೆ ಚಾಟಿ ಬೀಸಿದ ದರ್ಶನ್!

  ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಗಂಡಸಿ ನಾಗರಾಜ್ ಪತ್ನಿ ಕೂಡ ಕೊನೆಯುಸಿರೆಳೆದಿದ್ದರು. ಪುತ್ರ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 'ಭಂಡ ನನ್ನ ಗಂಡ', 'ಸರ್ವರ್ ಸೋಮಣ್ಣ', 'ಹಬ್ಬ', 'ಶ್ರೀ ಮಂಜುನಾಥ', 'ರಾಜಹುಲಿ', 'ಮಾತಾಡ್ ಮಾತಾಡ್ ಮಲ್ಲಿಗೆ', 'ಶಿಕಾರಿ' ಗಂಡಸಿ ನಾಗರಾಜ್ ನಟನೆಯ ಕೆಲ ಹಿಟ್ ಸಿನಿಮಾಗಳು. 'ಕೋಟಿಗೊಬ್ಬ- 3' ಚಿತ್ರದಲ್ಲಿ ಕೊನೆಯ ಬಾರಿ ಅವರು ಬಣ್ಣ ಹಚ್ಚಿದ್ದರು. ಇಂದು ಮಧ್ಯಾಹ್ನ 3.30ರ ವೇಳೆಗೆ ಬನಶಂಕರಿಯ ಚಿತಾಗಾರದಲ್ಲಿ ಗಂಡಸಿ ನಾಗರಾಜ್ ಅಂತ್ಯ ಸಂಸ್ಕಾರ ನಡೆಯಲಿದೆ.

  English summary
  Sandalwood costume designer and actor Gandasi Nagaraj Passes Away. he was 57. The actor breathed his last at a Devegowda Hospital in Padmanabanagar where he was undergoing treatment for the last Few Days.
  Monday, December 12, 2022, 12:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X