»   » ಪೂಜಾಗಾಂಧಿಗಿರುವಷ್ಟು ಎದೆಗಾರಿಕೆ ಇನ್ಯಾರಿಗಿದೆ?

ಪೂಜಾಗಾಂಧಿಗಿರುವಷ್ಟು ಎದೆಗಾರಿಕೆ ಇನ್ಯಾರಿಗಿದೆ?

By: ಜೀವನರಸಿಕ
Subscribe to Filmibeat Kannada

ಆ ನಟಿಯ ಬಗ್ಗೆ ಗೊತ್ತಿದ್ರೆ ಆಕೆಯೂ ಒಬ್ಬ ನಟಿಯಾ ಅಂತ ಮೂಗು ಮುರಿದವರಿದ್ರು. ಆದರೆ ಅದೆಲ್ಲಿಂದಲೋ ಉತ್ತರಪ್ರದೇಶದಿಂದ ಬಂದು ಕನ್ನಡ ಕಲಿತು ಅದನ್ನ ಪ್ರೂವ್ ಕೂಡ ಮಾಡಿಬಿಟ್ಟರು. ನಾನು ಪವರ್ ಫುಲ್ ಅಲ್ಲದಿರಬಹುದು ನಾನು ಮಾಡೋ ಪಾತ್ರಗಳು ಪವರ್ ಫುಲ್ ಅಂತ ತೋರಿಸಿಕೊಟ್ಟರು.

ಬಹುಶಃ ಅಂತಹ ಪಾತ್ರ ಮಾಡ್ಬೇಕು ಅಂತ ಕನ್ನಡದಲ್ಲಿ ಹುಡುಕಿದ್ರೂ ಮತ್ತೊಂದು ಆಪ್ಶನ್ ಸಿಕ್ಕೋದಿಲ್ಲ. 'ದಂಡುಪಾಳ್ಯ' ಅನ್ನೋ ಸಿನಿಮಾ ನೋಡಿದಾಗ್ಲೇ ಹಾಗನ್ನಿಸಿತ್ತು. ಕನ್ನಡದ ಹುಡುಗಿಯರಿಗೆ ಅಂತಹಾ ಎದೆಗಾರಿಕೆ ಇರೋದು ಕಷ್ಟ. 'ದಂಡುಪಾಳ್ಯ'ದ ಪೂಜಾಗಾಂಧಿಯಷ್ಟು ಒರಟು ಒರಟಾಗಿ ಅಭಿನಯಿಸೋಕೆ ಕನ್ನಡದ ಚೆಂದುಳ್ಳಿ ಚೆಲುವೆಯರು ಅಷ್ಟಾಗಿ ಒಪ್ಪೋದಿಲ್ಲ. [ನಟಿ ಪೂಜಾಗಾಂಧಿ ಶೇಪ್ ಈ ಪಾಟಿ ಬದಲಾಯ್ತಾ?]

ಆದರೆ ಪೂಜಾ ಮಾತ್ರ ಪಾತ್ರದೊಳಗೆ ಬೆನ್ನು ತೋರಿಸಿದ್ರೂ ಪಾತ್ರ ಮಾಡೋಕೆ ಬೆನ್ನು ತೋರಿಸಲಿಲ್ಲ. ಅದೊಂದು ಪಾತ್ರದಲ್ಲಿ ಪ್ರೂವ್ ಮಾಡಿಕೊಂಡ ನಂತರ ಕನ್ನಡದಲ್ಲೊಬ್ಬ ಡರ್ಟಿ ಗರ್ಲ್ ಹವಾ ಶುರುವಾಗಿದೆ. ಅದು ಮಳೆಹುಡುಗಿ ಪೂಜಾಗಾಂಧಿ. ಬೇರ್ಯಾರು ಮಾಡದಂತಹ ಪೂಜಾ ಪಾತ್ರದ ಪವರ್ ಫುಲ್ ಝಲಕ್ ಗಳನ್ನ ನೋಡ್ತಾ ಹೋಗೋಣ.

ಪೂಜಾ ಈಗ ಮುತ್ತುಲಕ್ಷ್ಮಿ

ವೀರಪ್ಪನ್ ಅನ್ನೋ ನರಹಂತಕನ ಕಥೆ ಸಿನಿಮಾ ಆಗಿ ಗೆಲುವಿನ ಅಟ್ಟಹಾಸ ಮೆರೀತು. ಈಗ ಮತ್ತೊಂದು ಸಿನಿಮಾ 'ಮುತ್ತುಲಕ್ಷ್ಮಿ'. ಈ ಸಿನಿಮಾ ವೀರಪ್ಪನ್ನ ಪತ್ನಿಯಾಗಿ ನರಹಂತಕನ ಅಂತರಂಗವನ್ನ ತೆರೆದಿಡುತ್ತಂತೆ. ಇಲ್ಲಿ ಪೂಜಾಗಾಂಧಿ ಮುತ್ತುಲಕ್ಷ್ಮಿಯಾಗಿ ಕಾಣಿಸಲಿದ್ದಾರೆ. ಮುತ್ತುಲಕ್ಷ್ಮಿ ಪಾತ್ರ ಮಾಡೋಕೆ ಧಮ್ ಬೇಕು ಅಂತಾರೆ.

ತಿಪ್ಪಜ್ಜಿ ಸರ್ಕಲ್ ನ ತಿಪ್ಪಜ್ಜಿ

ತಿಪ್ಪಜ್ಜಿ ಸರ್ಕಲ್ ಅನ್ನೋ ಪರ್ಫಾಮೆನ್ಸ್ ಓರಿಯಂಟೆಡ್ ಸಿನಿಮಾದಲ್ಲಿ ಪೂಜಾಗಾಂಧಿ ಮೂರು ಗೆಟಪ್ ಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಇಲ್ಲಿ ಪೂಜಾರದ್ದು ವೇಶ್ಯೆಯ ಪಾತ್ರ. ರಫ್ ಅಂಡ್ ಟಫ್ ಬೋಲ್ಡ್ ಪಾತ್ರ.

ದಂಡುಪಾಳ್ಯದ ಧಮ್ ಲಕ್ಷ್ಮಿ

ದಂಡುಪಾಳ್ಯ ಸಿನಿಮಾಗೆ ಆಫರ್ ಬಂದಾಗ ಪಾತ್ರವನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡ ಪೂಜಾ ತನ್ನ ಅಭಿನಯದ ಶಕ್ತಿ ಏನು ಅನ್ನೋದನ್ನ ತೋರಿಸಿದ್ರು. ಆ ಪಾತ್ರ ಅಸಹ್ಯ ಹುಟ್ಟಿಸಿದ್ರು ಅಭಿನಯ ಅದ್ಭುತ ಅನ್ನಿಸಿಕೊಳ್ತು. ಪೂಜಾಗೆ ಸೈಮಾ ಅವಾರ್ಡ್ ಕೂಡ ಒಲಿದು ಬಂತು.

2009ರಲ್ಲಿ ಅನು ಪಾತ್ರದಲ್ಲಿ ಪೂಜಾ

2009ರಲ್ಲಿ ಬಂದ ಸೈಕೋಪಾಥ್ ಒಬ್ಬನನ್ನ ಕೇಂದ್ರೀಕರಿಸಿದ 'ಅನು' ಸಿನಿಮಾದಲ್ಲಿ ಕೂಡ ಪೂಜಾ ಅಭಿನಯ ಇಷ್ಟವಾಗಿತ್ತು. ಸಿನಿಮಾ ಗೆಲ್ಲದಿದ್ರೂ ಪೂಜಾ ಪವರ್ ಫುಲ್ ಪಾತ್ರ ಮಾಡೋ ನಟಿ ಅನ್ನಿಸಿತ್ತು.

ಅಭಿನೇತ್ರಿಯ ಅಂತರಂಗ

ತನ್ನನ್ನ ತಾನೇ ಪೂಜಾಗಾಂಧಿ ಇಂತಹಾ ಪಾತ್ರಗಳತ್ತ ಒಗ್ಗಿಸಿಕೊಳ್ತಿದ್ದಾರೆ ಅನ್ನಿಸ್ತಿದೆ. ಪೂಜಾ ಮಾಡ್ತಿರೋ ಅಭಿನೇತ್ರಿಯಲ್ಲೂ ಅವರೇ ಹೀರೋ ಅವರೇ ಹೀರೋಯಿನ್. ಇಂತಹ ಪಾತ್ರಗಳು ಪೂಜಾಗೆ ಹೇಳಿ ಮಾಡಿಸಿದ್ದು ಅನ್ನಿಸ್ತಿದೆ.

ಪೂಜಾ ಲಿಸ್ಟ್ ನಲ್ಲಿ ರಂಗನಾಯಕಿ

ಅಭಿನೇತ್ರಿ ಸಿನಿಮಾದ ನಂತರ ಪೂಜಾ ಲಿಸ್ಟ್ ನಲ್ಲಿರೋದು ರಂಗನಾಯಕಿ. ಕಲ್ಪನ ಜೀವನದ ಕಲ್ಪನೆಯಲ್ಲಿರೋ 'ಅಭಿನೇತ್ರಿ' ಪೂಜಾ ಆರತಿ ಜೀವನಕ್ಕೆ ಕಾಲಿಟ್ಟು ರಂಗನಾಯಕಿಯಾದ್ರೂ ಅಚ್ಚರಿಯಿಲ್ಲ.

English summary
After played different roles in movies like Dandupalya, Anu, Thippajji Circle now actress Pooja Gandhi is all set to play a another daring and dashing role in her upcoming movie 'Muthulakshmi', the movie is all about forest brigand Veerappan's wife Muttulakshmi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada