For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಅನುಶ್ರೀ ಬಂಡವಾಳ ಬಯಲು ಮಾಡಿದ ಗೆಳೆಯನ ಹೇಳಿಕೆ

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ, ನಿರೂಪಕಿ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಕೇಳಿ ಬಂದಿತ್ತು. ಅವರು ವಿಚಾರಣೆಯನ್ನೂ ಎದುರಿಸಿದ್ದರು. ಆ ನಂತರ ಆ ಪ್ರಕರಣ ಬಹುತೇಕ ತಣ್ಣಗಾಗಿತ್ತು. ಇದೀಗ ಪ್ರಕರಣ ಕುರಿತಾದ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದು, ಬಂಧಿತ ಅನುಶ್ರೀಯ ಗೆಳೆಯ ಅನುಶ್ರೀ ಮೇಲೆ ಮಾಡಿರುವ ಆರೋಪಗಳು ಹೊರಬಂದಿವೆ.

  ಅನುಶ್ರೀ ಗೆ ಬಂತು ಆಪತ್ತು, ಯಾರನ್ನು ಸುಮ್ಮನ್ನೆ ಬಿಡಲ್ಲ ಎಂದ ಹೋಂ ಮಿನಿಸ್ಟರ್

  ಮಂಗಳೂರು ಪೊಲೀಸರು ತರುಣ್ ಹಾಗೂ ಕಿಶೋರ್ ಅಮನ್ ಶೆಟ್ಟಿ ಅವರಿಬ್ಬರನ್ನು ಮಾದಕ ವಸ್ತುವಿನ ಸಮೇತ ಬಂಧಿಸಿದ್ದರು. ಅವರಿಬ್ಬರ ವಿಚಾರಣೆಯಿಂದ ಅನುಶ್ರೀ ಹೆಸರು ಹೊರಗೆ ಬಂದಿತ್ತು. ಹಾಗಾಗಿ ಅನುಶ್ರೀಯ ವಿಚಾರಣೆಯನ್ನು ಪೊಲೀಸರು ನಡೆಸಿದ್ದರು.

  ಕಿರೋಶ್ ಅಮನ್ ಶೆಟ್ಟಿ ನೀಡಿರುವ ಹೇಳಿಕೆಗಳನ್ನು ದಾಖಲಿಸಿ ದೋಷಾರೋಪ ಪಟ್ಟಿಯನ್ನು ಮಂಗಳೂರು ಪೊಲೀಸರು ಸಲ್ಲಿಸಿದ್ದು, ಅನುಶ್ರೀ ಬಗ್ಗೆ ಕಿಶೋರ್ ಹೇಳಿರುವ ಮಾತುಗಳುಳ್ಳ ಪ್ರತಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಗೆಳೆಯ ತರುಣ್ ನನ್ನನ್ನು ಅನುಶ್ರೀಗೆ ಪರಿಚಯ ಮಾಡಿಸಿದ: ಕಿಶೋರ್

  ಗೆಳೆಯ ತರುಣ್ ನನ್ನನ್ನು ಅನುಶ್ರೀಗೆ ಪರಿಚಯ ಮಾಡಿಸಿದ: ಕಿಶೋರ್

  ''ಬೆಂಗಳೂರಿನ ಸಂಜಯ್ ಮಾಲಿಕತ್ವದ ಡ್ಯಾನ್ಸ್ ಅಕಾಡೆಮಿಯಲಿದಾಗ ಟಿವಿ ಆಂಕರ್ ಆಗಿರುವ ಅನುಶ್ರೀ ರವರಿಗೆ ಕುಣಿಯೋಣು ಬಾರ ಡಾನ್ಸ್ ರಿಯಾಲಿಟಿ ಶೋನಲ್ಲಿದ್ದರು. ಅವರಿಗೆ ನನ್ನ ಸ್ನೇಹಿತ ತರುಣ್ ಕೋರಿಯೊಗ್ರಫಿ ಮಾಡುತ್ತಿದ್ದ. ಈತನು ನನ್ನನ್ನು ಅನುಶ್ರೀ ರವರಿಗೆ ಪರಿಚಯ ಮಾಡಿ ಕುಣಿಯೋಣ ಬಾರ ಡಾನ್ಸ್‌ನ ಫೈನಲ್ ನಲ್ಲಿ ನನಗೂ ಸಹ ಕೊರಿಯೋಗ್ರಾಫಿ ಮಾಡುವಂತೆ ತಿಳಿಸಿದ್ದರಿಂದ ನಾನು ಮತ್ತು ತರುಣ್ ಇಬ್ಬರು ಕೂಡಿ ಅನುಶ್ರೀ ಅವರಿಗೆ ಡಾನ್ ಕೊರಿಯೋಗ್ರಾಫಿ ಮಾಡಿರುತ್ತೇವೆ'' ಎಂದು ಅನುಶ್ರೀ ಅವರ ಪರಿಚಯ ಹೇಗಾಯಿತು ಎಂದು ಹೇಳಿದ್ದಾನೆ ಕಿಶೋರ್.

  ಬಾಡಿಗೆ ರೂಮ್‌ಗೆ ಅನುಶ್ರೀ ಬರುತ್ತಿದ್ದರು: ಕಿಶೋರ್

  ಬಾಡಿಗೆ ರೂಮ್‌ಗೆ ಅನುಶ್ರೀ ಬರುತ್ತಿದ್ದರು: ಕಿಶೋರ್

  ''ಕುಣಿಯೋಣು ಬಾರಾ ರಿಯಾಲಿಟಿ ಶೋ ನಡೆಯುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಆ ಸಮಯದಲ್ಲಿ ಅಲ್ಲಿಯೇ ಅನುಶ್ರೀ ತಡರಾತ್ರಿ ವರೆಗೆ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ನಾನು ಸಹ ಆಗಾಗ್ಗೆ ತರುಣ್ ಮನೆಗೆ ಹೋಗಿ ಮೂವರು ಡ್ಯಾನ್ಸ್ ಮಾಡುತ್ತಿದ್ದೆವು. ಅಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆ ವೇಳೆಗೆ ಎಕ್ಸ್‌ಟಿ ಎಂಬ ಮಾದಕ ವಸ್ತು ಸೇವನೆ ಮಾಡುತ್ತಿದ್ದೆವು. ಕೆಲವು ದಿನಗಳ ಕಾಲ ತರುಣ್ ಹಾಗೂ ಅನುಶ್ರೀ ಇಬ್ಬರೇ ಮನೆಯಲ್ಲಿಯ ಉಳಿದಿರುತ್ತಿದ್ದರು'' ಎಂದು ಕಿಶೋರ್, ಪೊಲೀಸರ ಎದುರು ಹೇಳಿದ್ದಾರೆ.

  ಅನುಶ್ರೀಗೆ ಹಲವು ಪೆಡ್ಲರ್‌ಗಳ ಪರಿಚಯ ಇತ್ತು: ಕಿಶೋರ್

  ಅನುಶ್ರೀಗೆ ಹಲವು ಪೆಡ್ಲರ್‌ಗಳ ಪರಿಚಯ ಇತ್ತು: ಕಿಶೋರ್

  ''ಅನುಶ್ರೀ ಅವರಿಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುವ ಸಮಯದಲ್ಲಿ ಹಲವು ಬಾರಿ ನಾವು ಎಕ್ಸ್‌ಟಸಿ ಸೇವನೆ ಮಾಡಿದ್ದೆವು. ಎಕ್ಸ್ಟಸಿ ಸೇವಿಸುವುದರಿಂದ ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ. ದಣಿವಾಗುವುದಿಲ್ಲ. ಖುಷಿಯಿಂದ ಡ್ಯಾನ್ಸ್ ಮಾಡಬಹುದು ಎಂದೆಲ್ಲ ನಾವು ಆಗ ಮಾತನಾಡಿ ಕೊಂಡಿದ್ದೆವು. ಬಳಿಕ ಅನುಶ್ರೀ ಕುಣಿಯೋಣು ಬಾರಾ ರಿಯಾಲಿಟಿ ಶೋನಲ್ಲಿ ವಿಜೇತರಾದರು ಆಗ ನಾನು, ತರುಣ್ ಹಾಗು ಅನುಶ್ರೀ ಬೆಂಗಳೂರಿನಲ್ಲಿ ಎಕ್ಸ್‌ಟಸಿ ಸೇವಿಸಿ, ಮದ್ಯ ಕುಡಿದು ಪಾರ್ಟಿ ಮಾಡಿದ್ದೆವು. ಅನುಶ್ರೀ ನಮ್ಮ ರೂಮ್‌ಗೆ ಬರುವಾಗ ಎಕ್ಸ್ಟಸಿ ಮಾತ್ರೆಗಳನ್ನು ತೆಗೆದುಕೊಂಡು ಬರುತ್ತಿದ್ದರು. ಅನುಶ್ರೀಗೆ ಹಲವು ಪೆಡ್ಲರ್‌ಗಳ ಪರಿಚಯವಿತ್ತು, ಅವರಿಗೆ ಯಾರು ಮಾತ್ರೆಗಳನ್ನು ತಂದು ಕೊಡುತ್ತಿದ್ದರು ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಅವರೇ ಮಾತ್ರೆಗಳನ್ನು ತೆಗೆದುಕೊಂಡು ಬಂದು ನಮಗೆ ಕೊಡುತ್ತಿದ್ದರು. ಅವರು ಬಹಳ ಸುಲಭವಾಗಿ ಡ್ರಗ್ಸ್ ತರಿಸುತ್ತಿದ್ದರು ಅದು ಹೇಗೆ ಎಂಬುದು ನನಗೆ ಗೊತ್ತಿಲ್ಲ'' ಎಂದಿದ್ದಾರೆ ಕಿಶೋರ್.

  ಡಾನ್ಸ್ ಕ್ಲಾಸ್ ಉದ್ಘಾಟನೆಗೆ ಬಂದಿದ್ದ ಅನುಶ್ರೀ

  ಡಾನ್ಸ್ ಕ್ಲಾಸ್ ಉದ್ಘಾಟನೆಗೆ ಬಂದಿದ್ದ ಅನುಶ್ರೀ

  ''ನನ್ನ ಗೆಳೆಯ ತರುಣ್ ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ 'ಕ್ರೂಸ್ ಇನ್ ಕ್ರೂಸ್' ಹೆಸರಿನ ನೃತ್ಯ ತರಬೇತಿ ಶಾಲೆ ತೆರೆದ ಆ ಶಾಲೆಯ ಓಪನಿಂಗ್‌ಗೆ ಅನುಶ್ರೀ ಬಂದಿದ್ದರು. ನಾನು ಸಹ ಅಂದಿನ ದಿನ ಅಲ್ಲಿಯೇ ಇದ್ದೆ. ಆದರೆ ಆ ದಿನ ನಾವು ಮಾದಕ ವಸ್ತು ಸೇವನೆ ಮಾಡಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ಅನುಶ್ರೀ ಅಲ್ಲಿಂದ ಹೊರಟು ಹೋದರು'' ಎಂದಿದ್ದಾರೆ ಕಿಶೋರ್.

  English summary
  Sandalwood Drug Case: TV Anchor Anushree Name Mentioned in CCB Charge sheet by accused Kishore Aman Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X