For Quick Alerts
  ALLOW NOTIFICATIONS  
  For Daily Alerts

  BREAKING: ವಿದೇಶದಲ್ಲಿ ನಡೆಯಬೇಕಿದ್ದ ಸ್ಟಾರ್ ನಟರ ಶೂಟಿಂಗ್ ರದ್ದು

  |

  ವಿದೇಶದಲ್ಲಿ ಚಿತ್ರೀಕರಣ ನಡೆಸಲು ಸಜ್ಜಾಗಿದ್ದ ಕನ್ನಡದ ಮೂರು ಚಿತ್ರಗಳ ಶೂಟಿಂಗ್ ರದ್ದಾಗಿದೆ.

  Darshan , Puneeth movie shooting stopped .. why ? | Yuvarathna | Robert | Filmibeat Kannada

  ಪುನೀತ್ ರಾಜ್‌ಕುಮಾರ್ ಅವರ ಯುವರತ್ನ, ದರ್ಶನ್ ಅಭಿನಯದ ರಾಬರ್ಟ್, ಅರ್ಜುನ್ ಗೌಡ ಚಿತ್ರದ ಚಿತ್ರೀಕರಣ ವಿದೇಶಗಳಲ್ಲಿ ನಡೆಯುವುದರಲ್ಲಿತ್ತು, ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಚಿತ್ರಗಳ ಚಿತ್ರೀಕರಣ ಹಠಾತ್ತನೆ ರದ್ದಾಗಿದೆ.

  ಯುವರತ್ನ ತಂಡ ಹಾಡಿನ ಚಿತ್ರೀಕರಣಕ್ಕೆ ನಿನ್ನೆ ರಾತ್ರಿಯೇ ಯೂರೋಪ್‌ ಗೆ ತೆರಳಬೇಕಾಗಿತ್ತು. ದರ್ಶನ್ ಅಭಿನಯದ ರಾಬರ್ಟ್ ಚಿತ್ರೀಕರಣಕ್ಕೆ ಸ್ಪೇನ್‌ ಗೆ ತೆರಳಬೇಕಿತ್ತು. ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರೀಕರಣ ಸಹ ವಿದೇಶದಲ್ಲಿಯೇ ನಡೆಯಬೇಕಿತ್ತು.

  ಮೂರು ಚಿತ್ರಗಳ ವಿದೇಶ ಚಿತ್ರೀಕರಣ ರದ್ದು

  ಮೂರು ಚಿತ್ರಗಳ ವಿದೇಶ ಚಿತ್ರೀಕರಣ ರದ್ದು

  ಕೊರೊನಾ ವೈರಸ್ ಭೀತಿಯಿಂದಾಗಿ ಈ ಮೂರು ಚಿತ್ರಗಳ ಚಿತ್ರೀಕರಣ ರದ್ದು ಮಾಡಲಾಗಿದೆ. ರಾಬರ್ಟ್ ಮತ್ತು ಅರ್ಜುನ್ ಗೌಡ ಹಾಡಿನ ಚಿತ್ರೀಕರಣ ದೇಶದಲ್ಲೇ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಯುವರತ್ನ ತಂಡ ಇನ್ನಷ್ಟೆ ಚಿತ್ರೀಕರಣದ ಮಾಹಿತಿ ಪ್ರಕಟಿಸಬೇಕಿದೆ.

  ಆಸ್ಟ್ರೇಲಿಯಾ, ಸ್ಲೊವೇನಿಯಾಕ್ಕೆ ತೆರಳಬೇಕಿದ್ದ ಚಿತ್ರತಂಡ

  ಆಸ್ಟ್ರೇಲಿಯಾ, ಸ್ಲೊವೇನಿಯಾಕ್ಕೆ ತೆರಳಬೇಕಿದ್ದ ಚಿತ್ರತಂಡ

  ಯುವರತ್ನ ಚಿತ್ರದ ನಿರ್ಮಾಣ ಸಂಸ್ಥೆಯ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ನ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಯುವರತ್ನ ಹಾಡಿನ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾ ಮತ್ತು ಸ್ಲೊವೇನಿಯಾಕ್ಕೆ ತೆರಳಬೇಕಿತ್ತು, ಆದರೆ ಕೊರೊನಾ ವೈರಸ್ ಭಿತಿಯಿಂದ ಪ್ರವಾಸ ರದ್ದು ಮಾಡಲಾಗಿದೆ ಎಂದಿದ್ದಾರೆ.

  ಸ್ಪೇನ್ ಗೆ ತೆರಳಬೇಕಿದ್ದ ಡಿ-ಬಾಸ್ ರಾಬರ್ಟ್

  ಸ್ಪೇನ್ ಗೆ ತೆರಳಬೇಕಿದ್ದ ಡಿ-ಬಾಸ್ ರಾಬರ್ಟ್

  ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಚಿತ್ರೀಕರಣ ಬಹುತೇಕ ಅಂತ್ಯಗೊಂಡಿದ್ದು, ಹಾಡಿನ ಚಿತ್ರೀಕರಣವಷ್ಟೆ ಬಾಕಿ ಇದೆ. ನಾಯಕಿ ಆಶಾ ಭಟ್ ಜೊತೆ ಹಾಡಿನ ಚಿತ್ರೀಕರಣಕ್ಕೆ ಸ್ಪೇನ್‌ ಗೆ ಹೋಗಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಹಾಡಿನ ಚಿತ್ರೀಕರಣ ರದ್ದಾಗಿದೆ. ನಮ್ಮ ದೇಶದಲ್ಲೇ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ.

  'ಅರ್ಜುನ್ ಗೌಡ' ಗೂ ತಟ್ಟಿದ ಕೊರೊನಾ ಭೀತಿ

  'ಅರ್ಜುನ್ ಗೌಡ' ಗೂ ತಟ್ಟಿದ ಕೊರೊನಾ ಭೀತಿ

  ಇನ್ನು ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ಹಾಡಿನ ಚಿತ್ರೀಕರಣವನ್ನೂ ವಿದೇಶದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಇದಕ್ಕೂ ಕೊರೊನಾ ವೈರಸ್ ಭೀತಿ ಅಡ್ಡಗಾಲು ಹಾಕಿದೆ. ಪ್ರಜ್ವಲ್ ಅಭಿನಯದ ಈ ಚಿತ್ರದಲ್ಲಿ ಪ್ರಿಯಾಂಕಾ ನಾಯಕ ನಟಿ ಆಗಿದ್ದಾರೆ. ಚಿತ್ರ ಕೆಲವೇ ದಿನಗಳಲ್ಲಿ ಪ್ರೇಕ್ಷರ ಎದುರು ಬರಲಿದೆ.

  English summary
  Sabdalwood movies Yuvarathna, Robert, Arjun Gowda movies forign shooting due to coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X