twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಂಬರೀಶ್

    |

    ಸುಖಧರೆ ಪಿಕ್ಟರ್ಸ್ ಲಾಂಛನದಲ್ಲಿ ಖ್ಯಾತ ನಿರ್ದೇಶಕ ಕೆ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಭೂಮಿಕೆಯಲ್ಲಿರುವ 'ಅಂಬರೀಶ್' ಚಿತ್ರ, ಇದೀಗ ರೆಬೆಲ್‍ಸ್ಟಾರ್ ಡಾ. ಅಂಬರೀಶ್ ಅವರ ಆಗಮನದೊಂದಿಗೆ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿದೆ.

    ಅತ್ಯಂತ ಅದ್ದೂರಿ ವೆಚ್ಚದ ಈ ಚಿತ್ರದಲ್ಲಿ ಅಂಬರೀಶ್, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೆಂಪೇಗೌಡರ ಸಾಹಸ ಸಾಧನೆಯನ್ನು ಸಾರುವ "ಕೋಡುಗಲ್ಲ ನೆತ್ತಿ ಮೇಲೆ ಬಿಚ್ಚುಗತ್ತಿ ಯೋಧಾ ನಿಂತಾ" ಎನ್ನುವ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ನಗರದ ಅಬ್ಬಯ್ಯ ನಾಯ್ಡು ಸ್ಟುಡಿಯೊದಲ್ಲಿ ಹಾಕಲಾದ ಭವ್ಯವಾದ ದರ್ಬಾರ್ ಸೆಟ್ಟಿನಲ್ಲಿ ನಿರ್ದೇಶಕ ಮಹೇಶ್ ಸುಖಧರೆ ಸೂಚನೆಯಂತೆ, ಭಾರತೀಯ ಚಿತ್ರರಂಗದ ಪ್ರಖ್ಯಾತ ನೃತ್ಯ ನಿರ್ದೇಶಕ ಚೆನ್ನಿ ಪ್ರಕಾಶ್ ಈ ಹಾಡನ್ನು ಚಿತ್ರಿಸಿದರು. ತೆಲುಗಿನ ಖ್ಯಾತ ನಟ ಸುಮನ್, 200 ಜನ ನರ್ತಕ-ನರ್ತಕಿಯರು, 500 ಸಹ ಕಲಾವಿದರು ಹಾಡಿನ ಸನ್ನಿವೇಶದಲ್ಲಿ ಅಂಬರೀಶ್ ಅವರಿಗೆ ಸಹಭಾಗಿಗಳಾದರು.

    ಹಂಪೆಯ ಗತ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಕೃಪ್ಣದೇವರಾಯ ಮತ್ತು ಕೆಂಪೇಗೌಡರ ಸ್ನೇಹವನ್ನು ಮನ ಮುಟ್ಟುವಂತೆ, ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನಕ್ಕೆ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ಸಾಹಿತಿ ನಾಗೇಂದ್ರ ಪ್ರಸಾದ್ ಕೈಜೋಡಿಸಿದ್ದಾರೆ. ಒಳಾಂಗಣವಲ್ಲದೆ ದೇವನಹಳ್ಳಿಯ ಸುತ್ತಮುತ್ತಲಿನ ಸುಂದರ ಹೊರಾಂಗಣದಲ್ಲಿಯೂ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ.

    ಅಂಬರೀಶ್, ದರ್ಶನ್ ಜೊತೆಗೆ ಬಹುಭಾಷಾ ತಾರೆ ಪ್ರಿಯಾಮಣಿ, ಬುಲ್ ಬುಲ್ ಖ್ಯಾತಿಯ ರಚಿತಾ ರಾಮ್, ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ ಲ ನೆರೇಂದ್ರಬಾಬು, ಮೊದಲಾದವರ ಭರ್ಜರಿ ತಾರಾಗಣ ಚಿತ್ರಕ್ಕಿದೆ.

    ತಂತ್ರಜ್ಞರಾಗಿ ಸತ್ಯ ನಾರಾಯಣ್ ಛಾಯಾಗ್ರಹಣ, ಚಿಂತನ್ ಸಂಭಾಷಣೆ, ಕೆ.ಎಂ ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ಮತ್ತು ಅನಿಲ್ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಒಟ್ಟಿನಲ್ಲಿ ಹಂತ ಹಂತದಲ್ಲೂ ಕೂತುಹಲ ಮೂಡಿಸುತ್ತಿರುವ ಅಂಬರೀಶ ಚಿತ್ರದ ಮೂರನೇ ಹಂತದ ಚಿತ್ರೀಕರಣವು ಈಗ ನಗರದ ಸುತ್ತಮುತ್ತ ಭರದಿಂದ ಸಾಗಿದೆ.

    ಸ್ಯಾಂಡಲ್ ವುಡ್ ರೌಂಡ್ ಅಪ್ ಸ್ಲೈಡಿನಲ್ಲಿ...

    ಉಳಿದವರು ಕಂಡಂತೆ ಎಲ್ಲಿಗೆ ಬಂತು

    ಉಳಿದವರು ಕಂಡಂತೆ ಎಲ್ಲಿಗೆ ಬಂತು

    ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಯಶಸ್ವಿ ಚಿತ್ರದ ನಂತರ ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಅಭಿ, ಸುನಿ, ಕೂಡಿ ನಿರ್ಮಿಸುತ್ತಿರುವ, ‘ಉಳಿದವರು ಕಂಡಂತೆ' ಚಿತ್ರಕ್ಕೆ ಡಿಟಿಎಸ್ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ರಕ್ಷಿತ್ ಶೆಟ್ಟಿ ಅವರದ್ದು. ಕರಂ ಚಾವ್ಲ ಛಾಯಾಗ್ರಾಹಣ ಮತ್ತು ಸಂಗೀತ ಅಜಿನೀಷ್ ಅವರದ್ದು. ಚಿತ್ರದ ಪ್ರಮುಖ ತಾರಾಗಣದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್, ತಾರಾ, ಗೌರಿಶ್ ಅಕ್ಕಿ, ಚಿತ್ರಾ, ರಿಷಬ್, ಮುಂತಾದವರಿದ್ದಾರೆ.

     ಅಂಜದ ಗಂಡು ಬಿಡುಗಡೆ ಯಾವಾಗ?

    ಅಂಜದ ಗಂಡು ಬಿಡುಗಡೆ ಯಾವಾಗ?

    ಇಂದ್ರಜಾಲ ಮೂವೀಸ್ - ಶರತ್ ಕಂಬೈನ್ಸ್ ಲಾಂಛನದಲ್ಲಿ ಪ್ರದೀಪ್ ರಾಜ್, ಶರತ್ ಕುಮಾರ್ ಕೂಡಿ ನಿರ್ಮಿಸುತ್ತಿರುವ, ‘ಅಂಜದ ಗಂಡು' ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣ ರಮೇಶ್, ಸಂಗೀತ ಡಿ ಇಮಾಮ್ ಅವರದ್ದು. ಚಿತ್ರದ ಪ್ರಮುಖ ತಾರಾಗಣದಲ್ಲಿ ನೀನಾಸಂ ಸತೀಶ್, ಸುಭಿಕ್ಷಾ, ನಾಗಾಭರಣ, ಸುಮನ್, ಚಿಕ್ಕಣ್ಣ, ರಾಜು ತಾಳಿಕೋಟೆ, ಹೊನ್ನವಳ್ಳಿ ಕೃಷ್ಣ, ಮುಂತಾದವರಿದ್ದಾರೆ.

     ನಾಟ್ಯ ಪ್ರವೀಣ ಶ್ರೀಧರ್ ಮತ್ತೆ ಬೆಳ್ಳಿ ತೆರೆಯ ಮೇಲೆ

    ನಾಟ್ಯ ಪ್ರವೀಣ ಶ್ರೀಧರ್ ಮತ್ತೆ ಬೆಳ್ಳಿ ತೆರೆಯ ಮೇಲೆ

    ಭಾಗ್ಯೋದಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ. ದೇವರಾಜ್ ನಿರ್ಮಿಸಿರುವ ‘ಮಹಾಶರಣ ಹರಳಯ್ಯ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹನ್ನೆರಡನೇ ಶತಮಾನದಲ್ಲಿಯೇ ಮೇಲು ಕೀಳು ಜಾತಿ ನಿವಾರಣೆಗಾಗಿ ಹೋರಾಡಿದ ಕ್ರಾಂತಿಪುರುಷ ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬರಾದ ಹರಳಯ್ಯನವರ ಕಥೆ ಆಧಾರಿತ ಚಿತ್ರ ಇದಾಗಿದೆ. ಬಿ ಎ ಪುರಷೋತ್ತಮ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣ, ಜಿಮ್ಮಿರಾಜ್ ಸಂಗೀತ ಅವರ ಸಂಗೀತವಿದೆ. ಶ್ರೀಧರ್, ರಮೇಶ್, ರಾಜು (ಡಿಂಗ್ರಿ), ವಿಕ್ರಂ ಉದಯ್‍ಕುಮಾರ್, ಜಯಲಕ್ಷ್ಮಿ, ಶೀಲಾ, ಸುಮಿತ್ರ ಮುಂತಾದವರು ಅಭಿನಯಿಸಿದ್ದಾರೆ.

     ಜೀ ವಾಹಿನಿಯಲ್ಲಿ ಮತ್ತೊಂದು ವಿಭಿನ್ನ ಧಾರವಾಹಿ

    ಜೀ ವಾಹಿನಿಯಲ್ಲಿ ಮತ್ತೊಂದು ವಿಭಿನ್ನ ಧಾರವಾಹಿ

    ರಿಯಾಲಿಟಿ ಷೋಗಳಿಂದ ವಿಭಿನ್ನ ರೀತಿಯ ರಂಜನೆ ನೀಡುತ್ತಿರುವ ಜೀ ಕನ್ನಡ ವಾಹಿನಿ ದೈನಿಕ ಧಾರಾವಾಹಿಗಳನ್ನು ಕೂಡ ಹೊಸ ಶೈಲಿಯಲ್ಲಿ ನೀಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಆ ನಿಟ್ಟಿನಲ್ಲಿ ಜೀ ವಾಹಿನಿಯ ಮತ್ತೊಂದು ವಿನೂತನ ಕೊಡುಗೆಯೇ ‘ಮೇಘ-ಮಯೂರಿ'. ಇದೇ ಜನವರಿ 13ರಿಂದ ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 7-30 ಗಂಟೆಗೆ ವಾರದಲ್ಲಿ 6 ದಿನ ಪ್ರಸಾರವಾಗಲಿದೆ.

    ಈ ದಿಲ್ ಹೇಳಿದೆ ನೀ ಬೇಕಂತ

    ಈ ದಿಲ್ ಹೇಳಿದೆ ನೀ ಬೇಕಂತ

    ಸಾಯಿಕೃಷ್ಣ ಎಂಟರ್‍ಪ್ರೈಸಸ್ ಲಾಂಛನದಲ್ಲಿ, ಎಸ್ ಶ್ರೀಧರ್ ನಿರ್ಮಾಣದ "ಈ ದಿಲ್ ಹೇಳಿದೆ ನೀ ಬೇಕೆಂತ" ಚಿತ್ರಕ್ಕೆ ಹೇಸರಘಟ್ಟ ಸುತ್ತಮುತ್ತ ರಾತ್ರಿ ಹಗಲು ಚಿತ್ರೀಕರಣ ಸಾಗುತ್ತಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಕೆಟಿಎಂ ಶ್ರೀನಿವಾಸ ಅವರದ್ದು. ಚಿತ್ರದ ಪ್ರಮುಖ ತಾರಾಗಣದಲ್ಲಿ ಜುಗಾರಿ ಅವಿನಾಶ್, ಶ್ರೀಶ್ರುತಿ, ಗೋಪಿ, ಸುರೇಶ್ ಮಂಗಳೂರು, ನಾಗೇಂದ್ರ ಷಾ, ವಿದ್ಯಾಮೂರ್ತಿ, ಕುಮುದ, ಮುಂತಾದವರಿದ್ದಾರೆ.

    ಲೂಸ್ ಮಾದ ಯೋಗೀಶ್ ಕಾಲಭೈರವನಾದ ಕಥೆ

    ಲೂಸ್ ಮಾದ ಯೋಗೀಶ್ ಕಾಲಭೈರವನಾದ ಕಥೆ

    ಶ್ರೀ. ಜೈ ಭುವನೇಶ್ವರಿ ಆರ್ಟ್ಸ್ ಲಾಂಛನದಲ್ಲಿ ತಮ್ಮಯ್ಯ ಮತ್ತು ಕುಮರೇಶ್ ಬಾಬು ನಿರ್ಮಾಣದಲ್ಲಿ ಶಿವಪ್ರಭು ನಿರ್ದೇಶಿಸುತ್ತಿರುವ ‘ಕಾಲಭೈರವ' ಚಿತ್ರಕ್ಕೆ ಗುಬ್ಬಿತಾಲ್ಲೂಕಿನ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗ 100ಕ್ಕೂ ಹೆಚ್ಚು ಜಾನಪದ ಕಲಾವಿದರು 50 ಜನ ನೃತ್ಯಗಾರರೊಂದಿಗೆ ನಟ ಯೋಗೇಶ್ ಅಭಿನಯದಲ್ಲಿ ‘ನೀನೇ ಮಹಾರಾಜ, ನೀನೇ ರವಿತೇಜ' ನೀ ಹೋಗೋ ದಾರೀಲಿ ಸಿಡಿಲಿದೆ, ಮೀರಿ ಹೋದಾಗ ಸುಖವಿದೆ' ಹಾಡಿನ ಚಿತ್ರೀಕರಣದೊಂದಿದೆ ಚಿತ್ರೀಕರಣ ಪೂರ್ಣಗೊಂಡಿತು. ತಾರಾಗಣದಲ್ಲಿ ಯೋಗೀಶ್, ಅಖಿಲಾ ಕಿಶೋರ್, ಮೇಸ್ತ್ರಿ ಬಾಲು, ರಂಗಾಯಣ ರಘು, ಶರತ್ ಲೋಹಿತಾಶ್ವ, ಸುಚೀಂದ್ರ ಪ್ರಸಾದ್, ನೀನಾಸಂ ಅಶ್ವತ್, ಮಾಳವಿಕ, ಸಾಧು ಕೋಕಿಲ, ಮುಂತಾದವರಿದ್ದಾರೆ.

    ಮಾಮು ಟೀ ಅಂಗಡಿಯಲ್ಲಿ ಡ್ಯಾನ್ಸ್ ಇಂಡಿಯ ಡ್ಯಾನ್ಸ್

    ಮಾಮು ಟೀ ಅಂಗಡಿಯಲ್ಲಿ ಡ್ಯಾನ್ಸ್ ಇಂಡಿಯ ಡ್ಯಾನ್ಸ್

    ಮಾಮು ಟೀ ಅಂಗಡಿ ಮಾತಿನ ಚಿತ್ರೀಕರಣ ಮುಗಿಸಿಕೊಂಡು, ಹಾಡಿನ ಚಿತ್ರೀಕರಣದಲ್ಲಿ ತೊಡಗಿಸಿ ಕೊಂಡಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಇಂಡಿಯ ಡ್ಯಾನ್ಸ್ ರಿಯಾಲಿಟಿ ಶೋನ ವರುಣ್ ಸಿಂಗಂ ಚಿತ್ರದ ನಾಯಕ. ಚಿತ್ರವನ್ನು ಎ ಪರಮೇಶ್ವರ್ ನಿರ್ದೇಶಿಸಲಿದ್ದಾರೆ. ಚಿತ್ರದ ಇತರ ಭೂಮಿಕೆಯಲ್ಲಿ ಅಭಿಶೇಖ್, ರಿತೇಶ್, ಮಹೇಶ್, ಸಂಗೀತ ಭಟ್, ರಾಶಿ ಸಿಂಗ್, ಅರ್ಚನ ಸಿಂಗ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್ ಮುಂತಾದವರಿದ್ದಾರೆ.

     ನಗೆಬಾಂಬ್ ಈ ವಾರ ತೆರೆಗೆ ಗ್ಯಾರಂಟಿ

    ನಗೆಬಾಂಬ್ ಈ ವಾರ ತೆರೆಗೆ ಗ್ಯಾರಂಟಿ

    ರಾಜೇಶ್ ರಾಮನಾಥ್ ಮೊದಲ ನಿರ್ಮಾಣದ ಚಿತ್ರ ನಗೆಬಾಂಬ್ ಈ ವಾರ ರಿಲೀಸ್ ಆಗಲಿದೆ. ರವಿಶಂಕರ್ ಗೌಡ, ಅನಿತಾ, ಮೌಸಾಮಿ, ಆನಂದಪ್ರಿಯ, ಸಾಧು ಕೋಕಿಲ, ಮ್ಯಾಜಿಕ್ ಜಿನ್ನಿ ಮುಂತಾದವರು ತಾರಾಗಣದಲ್ಲಿದ್ದಾರೆ. ನಾಗೇಂದ್ರ ಅರಸ್ ಈ ಚಿತ್ರದ ನಿರ್ದೇಶಕರು.

    English summary
    Sandalwood Movie news round up and updates.
    Monday, January 6, 2014, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X