Don't Miss!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ಮುಂದೆ 'ಅಘೋರಿ' ಪಾತ್ರ ಮಾಡುವುದಿಲ್ಲ ಎಂದಿದ್ದೇಕೆ ಹಿರಿಯ ನಟ ಅವಿನಾಶ್? ಆ ಪಾತ್ರದಲ್ಲಿ ಅಂತಹದ್ದೇನಿದೆ?
'ಅಘೋರಿ'ಗಳ ಮೇಲೆ ಮಾಡಿಸಿದ ಸಿನಿಮಾಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅನುಷ್ಕಾ ಶೆಟ್ಟಿ ನಟಿಸಿದ ಅರುಂಧತಿಯಿಂದ ಹಿಡಿದು ಇತ್ತೀಚೆಗೆ ಬಾಲಕೃಷ್ಣ ನಟಿಸಿದ 'ಅಖಂಡ' ಸಿನಿಮಾವರೆಗೂ ಬಹುತೇಕ ಚಿತ್ರಗಳಿಗೆ ಯಶಸ್ಸು ಸಿಕ್ಕಿದೆ. ಈಗ ಕನ್ನಡದಲ್ಲೂ 'ಅಘೋರ' ಅನ್ನುವ ಹೆಸರಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಹಿರಿಯ ನಟ ಅವಿನಾಶ್ ಇದೇ ಮೊದಲ ಬಾರಿಗೆ ಅಘೋರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಘೋರಿ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ಈ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಅಲ್ಲದೆ, ಈ ಪಾತ್ರಕ್ಕೆ ಮೇಕಪ್ ಮಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ಕೆಲಸ. ಅಂತಹದ್ರಲ್ಲೂ ಹಿರಿಯ ನಟ ಅವಿನಾಶ್ ಅಘೋರಿ ಪಾತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಮುಗಿದು ಡಬ್ಬಿಂಗ್ ಮಾಡುವಾಗ ನಿರ್ದೇಶಕ ಪ್ರಮೋದ್ ಅವರ ಬಳಿ, ಇನ್ಮುಂದೆ ಈ ಪಾತ್ರದಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದಾರೆ. ಅಷ್ಟಕ್ಕೂ ಅವಿನಾಶ್ 'ಅಘೋರಿ' ಪಾತ್ರ ಮಾಡುವುದಿಲ್ಲ ಎಂದಿದ್ದೇಕೆ? ಈ ಸಿನಿಮಾದಲ್ಲಿ ಅಂತಹದ್ದೇನಿದೆ? ಅನ್ನುವುದನ್ನು ನಿರ್ದೇಶಕ ಪ್ರಮೋದ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.
ಅಭಿಮಾನಿ
ಮೇಲೆ
ನಟ
ಧನ್ವೀರ್
ಹಲ್ಲೆ
ಪ್ರಕರಣಕ್ಕೆ
ನಾಟಕೀಯ
ತಿರುವು!

ಅಘೋರಿ ಪಾತ್ರ ಅವಿನಾಶ್ ಅವರಿಗೇ ಸೂಕ್ತ
ಅಘೋರಿ ಪಾತ್ರ ನೋಡಿದಷ್ಟು ಸುಲಭವಲ್ಲ. ಅಘೋರಿಗಳ ಹಾವ-ಭಾವವನ್ನೇ ಅನುಸರಿಬೇಕು. ಅವರನ್ನು ಅನುಸರಿಸಿ, ತೆರೆಮೇಲೆ ನಟಿಸಬೇಕು. ಇಂತಹ ಪಾತ್ರಕ್ಕೆ ಅವಿನಾಶ್ ಅವರೇ ಸೂಕ್ತ ಎನ್ನುತ್ತಾರೆ ನಿರ್ದೇಶಕ ಪ್ರಮೋದ್. "ಅಘೋರ ಪಾತ್ರಕ್ಕೆ ಅವಿನಾಶ್ ಅವರನ್ನೇ ಆಯ್ಕೆ ಮಾಡಿದ್ದಕ್ಕೆ ಒಂದು ಕಾರಣವಿದೆ. ಈ ಪಾತ್ರಕ್ಕೆ ಶೇ.100ರಷ್ಟು ನ್ಯಾಯ ಕೊಡಲು ಅವರಿಂದ ಮಾತ್ರ ಸಾಧ್ಯ. ಮನಪೂರ್ವಕವಾಗಿ ಈ ಪಾತ್ರದಲ್ಲಿ ಮಾಡಿದ್ದಾರೆ. ಸಿನಿಮಾ ಪ್ರಕೃತಿಯ ಬಗ್ಗೆ ವಿವರಣೆ ನೀಡುವಾಗ, ಅದನ್ನು ಒಬ್ಬ ದೊಡ್ಡ ಆರ್ಟಿಸ್ಟ್‌ನಿಂದಲೇ ಹೇಳಿಸಬೇಕಿತ್ತು. 600 ಸಿನಿಮಾ ಮಾಡಿರುವ ನಟರಿಂದ ಈ ಮಾತು ಬಂದಾಗ, ಅದು ಅರ್ಥ ಪೂರ್ವಕವಾಗಿ ಇರುತ್ತೆ." ಎನ್ನುವುದು ನಿರ್ದೇಶಕರ ಅಭಿಪ್ರಾಯ.

ಅಘೋರಿ ಪಾತ್ರ ಮಾಡಲ್ಲ ಎಂದ ಅವಿನಾಶ್
ಅಘೋರಿ ಪಾತ್ರ ಪ್ರತಿಯೊಬ್ಬ ನಟನಿಗೂ ಚಾಲೆಂಜ್. ಇಂತಹ ಪಾತ್ರ ಮಾಡುವಾಗ ಕೆಲವರಿಗೆ ವಿಶಿಷ್ಟ ಅನುಭವ ಆಗುತ್ತೆ. ಆದರೆ, ಅವಿನಾಶ್ ಅಘೋರಿಯಾಗಿ ಮತ್ತೆ ನಟಿಸುವುದಿಲ್ಲ ಎಂದಿದ್ದಕ್ಕೆ ಬೇರೆಯದ್ದೇ ಕಾರಣವಿದೆ. "ಅವಿನಾಶ್ ಅವರು ಅಘೋರಿ ಗೆಟಪ್ ಹಾಕಿಕೊಂಡೇ ಪಾತ್ರ ಮಾಡಬೇಕಿತ್ತು. ಆ ಗಡ್ಡ, ಗೆಟಪ್ ಎಲ್ಲವೂ ಪ್ರತಿ ಬಾರಿ ಹಾಕಬೇಕಿತ್ತು. ಆಗ ಅವಿನಾಶ್ ಅವರು ಹೇಳಿದ್ದರು. ಇನ್ಮುಂದೆ ಈ ಪಾತ್ರವನ್ನು ಮತ್ತೆಂದು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಪಾತ್ರ ಮುಂದೆ ಮಾಡಲು ಸಾಧ್ಯವೂ ಇಲ್ಲ. ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. ಈ ಪಾತ್ರ ಅವರಿಗೆ ತುಂಬಾನೇ ಇಷ್ಟ ಆಗಿತ್ತು. ಇದನ್ನು ಯಾವತ್ತೂ ಕಳೆದುಕೊಳ್ಳಲು ಇಷ್ಟವಿಲ್ಲವೆಂದು ಡಬ್ಬಿಂಗ್ ಮಾಡುವಾಗ ಹೇಳಿದ್ದರು. " ಎಂದು ಅವಿನಾಶ್ ಆಡಿದ ಮಾತನ್ನು ನೆನಪಿಸಿಕೊಳ್ಳುತ್ತಾರೆ.

16 ರಾಷ್ಟ್ರಗಳಲ್ಲಿ ಚಲನಚಿತ್ರ ಪ್ರಶಸ್ತಿ ಗೆದ್ದಿದೆ
"ಈ ಸಿನಿಮಾವನ್ನು ಕೋವಿಡ್‌ಗೂ ಮುನ್ನವೇ ಮಾಡಿದ್ದೆವು. ಚಿಕ್ಕ-ಪುಟ್ಟ ಪ್ಯಾಚ್ ವರ್ಕ್ ಉಳಿದುಕೊಂಡಿಂತು. ಇನ್ನೇನು ಶುರು ಮಾಡಬೇಕು ಅನ್ನುವಷ್ಟರಲ್ಲಿ ಕೋವಿಡ್ ಬಂದುಬಿಟ್ಟಿತ್ತು. ಮತ್ತೆ ಶೂಟಿಂಗ್ ಮಾಡಲು ಅವಕಾಶ ಕೊಡುವಾಗ ಶೂಟಿಂಗ್ ಮುಗಿಸಿದ್ದೆವು. ಎರಡನೇ ಲಾಕ್‌ಡೌನ್ ವೇಳೆ ಸುಮ್ಮನೆ ಕೂರುವುದು ಬೇಡಾ ಅಂತ ಸುಮಾರು 16 ರಾಷ್ಟ್ರಗಳಿಗೆ ಸಿನಿಮಾ ಕರೆಸಿದ್ದೇವು. ಎಲ್ಲಾ ಚಲನಚಿತ್ರೋತ್ಸವದಲ್ಲಿ 35 ಅವಾರ್ಡ್‌ಗಳನ್ನು ಗೆದ್ದಿದ್ದೇವೆ. ಮೇಕಪ್‌ನಿಂದ ಹಿಡಿದು ಪ್ರತಿಯೊಂದು ಕ್ಯಾಟಗರಿಯಲ್ಲೂ ಗೆದ್ದಿದ್ದೇವೆ." ಎನ್ನುತ್ತಾರೆ ನಿರ್ದೇಶಕ ಪ್ರಮೋದ್.

ವಿಜ್ಞಾನ ಮತ್ತು ಸಾವಿನ ಕಥೆ
"ಮೇಲ್ನೊಟಕ್ಕೆ ನೋಡಿದರೆ ಇದೊಂದು ಹಾರರ್ ಸಿನಿಮಾ. ಆದರೆ, ಇದು ಪಕ್ಕಾ ಪ್ರಕೃತಿಯ ಮೇಲೆ ಮಾಡಿದ ಸಿನಿಮಾ. ಪ್ರತಿಯೊಂದು ಪಾತ್ರವನ್ನೂ ಒಂದೊಂದು ಎಲಿಮೆಂಟ್ಸ್ ಇಟ್ಟಿದ್ದೇವೆ. ನಾವು ಪರಿಸರದ ಜೊತೆ ಯಾಕೆ ಬದುಕಬೇಕು. ಪರಿಸರ ನಮಗೆ ಯಾಕೆ ಮುಖ್ಯ ಅನ್ನುವುದನ್ನು ಒಂದೊಂದು ಪಾತ್ರದ ಮೂಲಕ ವಿವರಿಸಿದ್ದೇವೆ. ಸಾವು ಯಾಕೆ ಅನಿವಾರ್ಯ. ಸಾವು ಯಾವಾಗಲೂ ನಿಗೂಢವಾಗಿದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಇದೊಂತರ ಸೈನ್ಸ್ ಅಂಡ್ ಡೆತ್ ಕಲ್ಪನೆಯಲ್ಲಿ ಹೇಳಿದ್ದೇವೆ." ಅಂತಾರೆ ಪ್ರಮೋದ್. ಈ ಅಘೋರ ಸಿನಿಮಾ ಮಾರ್ಚ್ 4ರಂದು ಬಿಡುಗಡೆಯಾಗುತ್ತಿದೆ.