»   » ಪಾರ್ವತಮ್ಮ ಅಗಲಿಕೆ ಸಾಂಸ್ಕೃತಿಕ ಕ್ಷೇತ್ರಕ್ಕೆ ನಷ್ಟ: ಕಣ್ಣೀರಿಟ್ಟ ತಾರೆಯರು

ಪಾರ್ವತಮ್ಮ ಅಗಲಿಕೆ ಸಾಂಸ್ಕೃತಿಕ ಕ್ಷೇತ್ರಕ್ಕೆ ನಷ್ಟ: ಕಣ್ಣೀರಿಟ್ಟ ತಾರೆಯರು

Posted By:
Subscribe to Filmibeat Kannada

ನಿರ್ಮಾಪಕಿಯಾಗಿ ಪಾರ್ವತಮ್ಮ ರಾಜ್ ಕುಮಾರ್ ಅವರು 'ವಜ್ರೇಶ್ವರಿ ಕಂಬೈನ್ಸ್(ಪೂರ್ಣಿಮಾ ಎಂಟರ್ ಪ್ರೈಸಸ್)' ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಮೊದಲಿಗೆ ರಾಜ್ ಕುಮಾರ್ ಅಭಿನಯದ 'ತ್ರಿಮೂರ್ತಿ' ಚಿತ್ರವನ್ನು ನಿರ್ಮಿಸಿದರು. ನಂತರ ನಿರ್ಮಾಪಕಿಯಾಗಿ ಅವರ ನಿರಂತರ ಸೇವೆಯಿಂದ ಕನ್ನಡ ಚಿತ್ರರಂಗಕ್ಕೆ ಹಲವು ನಟ-ನಟಿಯರನ್ನು ಪರಿಚಯಿಸಿದರು.[ಪಾರ್ವತಮ್ಮ ರಾಜ್ ಕುಮಾರ್ ನಿಧನ: ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನ]

ಬಹು ಅಂಗಾಂಗ ವೈಫಲ್ಯದಿಂದ ಬಳಲುದಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ಕಳೆದ 16 ದಿನಗಳಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು(ಮೇ31) ಬೆಳಿಗ್ಗೆ 4.40 ಗಂಟೆ ವೇಳೆಗೆ ವಿಧಿವಶರಾದರು. ಅವರ ನಿಧನದ ವಿಷಯ ಕೇಳಿ ಇಂದು ಇಡೀ ಕನ್ನಡನಾಡಿನ ಜನತೆ ನೊಂದಿದ್ದಾರೆ.[ಪಾರ್ವತಮ್ಮ ರಾಜ್ ಕುಮಾರ್ ನಿಧನ ಹಿನ್ನಲೆಯಲ್ಲಿ ಇಂದು ಚಿತ್ರೋದ್ಯಮ ಬಂದ್]

ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕಿಯಾಗಿ, ಚಲನಚಿತ್ರ ವಿತರಕರಾಗಿ ಹೆಸರು ಗಳಿಸಿದ್ದ ಅವರು ಚಿತ್ರರಂಗ ಕ್ಷೇತ್ರದಲ್ಲಿ ಹಲವರಿಗೆ ಜೀವನ ಕಲ್ಪಿಸಿಕೊಟ್ಟಿದ್ದರು. ಸ್ಯಾಂಡಲ್ ವುಡ್ ನ ಪ್ರೀತಿಯ ಎಲ್ಲರ ನೆಚ್ಚಿನ ಅಮ್ಮನಾಗಿದ್ದ ಅವರ ವಿಧಿವಶದಿಂದ ಇಂದು ಪ್ರತಿಯೊಬ್ಬರು ದುಃಖದ ಮಡಿವಿನಲ್ಲಿದ್ದಾರೆ. ಅವರ ನಿಧನದಿಂದ ನೊಂದು ಹಲವು ತಾರೆಯರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಮುಂದೆ ಓದಿರಿ.

ಶಾನ್ವಿ ಶ್ರೀವಾಸ್ತವ

ಪಾರ್ವತಮ್ಮ ರಾಜ್ ಕುಮಾರ್ ಅವರು ನಿಧನ ಹೊಂದಿದ ಸುದ್ದಿಯ ಈ ದಿನ ಯಾಕಾದರೂ ಬಂತೋ ಎಂದು ದುಃಖದಿಂದ ನಟಿ ಶಾನ್ವಿ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.

ಬಿ ಅಜನೀಶ್ ಲೋಕನಾಥ್

ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ರವರು ಕನ್ನಡದ ಖ್ಯಾತ ನಿರ್ಮಾಪಕಿ ಮತ್ತು ನೆಚ್ಚಿನ ಪ್ರೀತಿಯ ಅಮ್ಮನ ಅಗಲಿಕೆಗೆ ನೊಂದು ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟಿಸಿದ್ದಾರೆ.

ಶರ್ಮಿಳಾ ಮಾಂಡ್ರೆ

"ಪಾರ್ವತಮ್ಮ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದ ಬಗ್ಗೆ ಕೇಳಲು ದುಃಖವಾಯಿತು. ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ನನ್ನ ಅಲೋಚನೆ ಮತ್ತು ಪಾರ್ಥನೆ ರಾಜ್ ಕುಮಾರ್ ಅವರ ಕುಟುಂಬಕ್ಕೆ ಸಲ್ಲಿಸುತ್ತೇನೆ" ಎಂದು ನಟಿ ಶರ್ಮಿಳಾ ಮಾಂಡ್ರೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕುಮಾರ್ ಬಂಗಾರಪ್ಪ

"ಅಕ್ಕನಿಂದ ಅಮ್ಮನ ಸ್ಥಾನಕ್ಕೇರಿ ನಮ್ಮನ್ನು ಪ್ರೀತಿಯಿಂದ ಸಲಹಿದ ಕನ್ನಡ ಚಿತ್ರರಂಗದ ದಿಟ್ಟ ಮಹಿಳೆಗೆ ನಮ್ಮೆಲ್ಲರ ಹೃದಯಪೂರ್ವಕ ಶ್ರಧಾಂಜಲಿ' -ಕುಮಾರ್ ಬಂಗಾರಪ್ಪ, ಹಿರಿಯ ನಟ

ಬೆಂಗಳೂರು ಎನ್‌ಟಿಆರ್ ಅಭಿಮಾನಿಗಳು

ಕನ್ನಡ ಚಿತ್ರರಂಗದ ಲೆಜೆಂಡ್ ಡಾ.ರಾಜ್ ಕುಮಾರ್ ಅವರ ಪತ್ನಿ ನಿಧನರಾಗಿದ್ದಾರೆ. ಅವರ ಅಗಲಿಕೆ ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಉಂಟು ಮಾಡಿದೆ ಎಂದು ಬೆಂಗಳೂರು ಎನ್‌ಟಿಆರ್ ಅಭಿಮಾನಿಗಳ ಬಳಗ ಸಂತಾಪ ಸೂಚಿಸಿದೆ.

ಆರ್‌ ಜೆ ನೇತ್ರಾ

'ಪಾರ್ವತಮ್ಮ ರಾಜ್ ಕುಮಾರ್ ರವರು ಡಾ.ರಾಜ್ ಕುಮಾರ್ ಅವರು ಕನ್ನಡದ ಮೇರುನಟರಾಗಿ ನಿಲ್ಲಲು ಕಾರಣರಾದ ಐರನ್ ಲೇಡಿ. ಆದರೆ ಆ ಮಹಾ ದೀಮಂತ ಮಹಿಳೆಯನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಅವರು ಅಗಲಿದ ಕುಟುಂಬಕ್ಕೆ ಸವಿನಯ ಸಂತಾಪಗಳನ್ನು ಸೂಚಿಸುತ್ತೇನೆ' - ಆರ್‌ಜೆ ನೇತ್ರಾ, 91.1 ಎಫ್ಎಂ ರೇಡಿಯೋ ಜಾಕಿ

ಕಿಚ್ಚ ಸುದೀಪ್

"ಪಾರ್ವತಮ್ಮ ರಾಜ್ ಕುಮಾರ್ ಅವರು ಎಲ್ಲರ ಆಕರ್ಷಿತ ಶಕ್ತಿಶಾಲಿ ಮಹಿಳೆ. ಈ ಅದ್ಭುತ ಮಹಿಳೆಯನ್ನು ಹಲವು ವರ್ಷಗಳಿಂದ ನೋಡಿದ್ದೇನೆ. ಮಾನಸಿಕವಾಗಿ ದೃಢವಾಗಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸಿದ ಮಹಿಳೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಅಗಲಿದ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ" -ಕಿಚ್ಚ ಸುದೀಪ್, ನಟ

ಸಂಜನಾ ಗಲ್ರಾನಿ

"ಪಾರ್ವತಮ್ಮ ಅಮ್ಮನವರ ನಿಧನದಿಂದ ನೋವುಂಟಾಗಿದೆ. ಅವರು ಹಲವು ತತ್ವಗಳು ಮತ್ತು ಪ್ರೀತಿ ತೋರುತ್ತಿದ್ದ ಮಾರ್ಗದಿಂದ ಕನ್ನಡ ಚಲನಚಿತ್ರರಂಗದ ಐರನ್ ಲೇಡಿಯೇ ಆಗಿದ್ದರು' - ಸಂಜನಾ ಗಲ್ರಾನಿ, ನಟಿ

ಚಿರಂಜೀವಿ ಸರ್ಜಾ

"ಸ್ಯಾಂಡಲ್ ವುಡ್ ಗೆ ದೀರ್ಘಕಾಲದಿಂದಲೂ ಪಾರ್ವತಮ್ಮನವರು ಅತ್ಯಂತ ಬಲವಾಗಿ ಬೆನ್ನೆಲುಬಾಗಿದ್ದರು. ಕನ್ನಡ ಚಿತ್ರರಂಗ ಇಂದು ಖ್ಯಾತ ನಿರ್ಮಾಪಕಿಯನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ನನ್ನ ಕಡೆಯಿಂದ ಸಂತಾಪ ಸೂಚಿಸುತ್ತೇನೆ' - ಚಿರಂಜೀವಿ ಸರ್ಜಾ, ನಟ

ರಮ್ಯಾ

"ಕನ್ನಡ ಚಿತ್ರರಂಗದ ಕಲಾವಿದರಿಗೆ ಬಹುದೊಡ್ಡ ಆಸರೆಯಾಗಿದ್ದ ಮಹಾನ್ ಸಕ್ತಿ ಇನ್ನಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖದ ಮಡುವಿನಲ್ಲಿರುವ ಡಾ.ರಾಜ್ ಕುಮಾರ್ ಕುಟುಂಬಕ್ಕೆ ಸಂತಾಪಗಳನ್ನು ಹೇಳಿ ಪ್ರಾರ್ಥಿಸುತ್ತೇನೆ" - ರಮ್ಯಾ, ನಟಿ

ಹರ್ಷಿಕಾ ಪೂಣಚ್ಚ

" ಪ್ರತಿಯೊಬ್ಬ ಸಕ್ಸಸ್ ಫುಲ್ ವ್ಯಕ್ತಿಯ ಹಿಂದೆ ಒಬ್ಬ ಮಹಿಳೆ ಇರುತ್ತಾರೆ. ಡಾ.ರಾಜ್ ಕುಮಾರ್ ಅಪ್ಪಾಜಿ ಯಶಸ್ಸಿನ ಹಿಂದೆ ಶ್ರೀಮತಿ ದಿ ಪಾರ್ವತಮ್ಮ ರಾಜ್ ಕುಮಾರ್ ಇದ್ದರು. ಅವರು ಕನ್ನಡ ಚಿತ್ರರಂಗದ ಬಹುದೊಡ್ಡ ಆಧಾರ ಸ್ತಂಭವಾಗಿದ್ದರು. ಅವರ ನಿಧನದಿಂದ ನೋವುಂಟಾಗಿದೆ" -ಹರ್ಷಿಕಾ ಪೂಣಚ್ಚ, ನಟಿ

English summary
Sandalwood Celebrities has taken their twitter account to codolence to Parvathamma Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada