»   » ಶಿವಣ್ಣನ ಮಗಳ ಮದುವೆಗೆ ಬಂದು ಆಶೀರ್ವದಿಸಿದ ಕಿಚ್ಚ

ಶಿವಣ್ಣನ ಮಗಳ ಮದುವೆಗೆ ಬಂದು ಆಶೀರ್ವದಿಸಿದ ಕಿಚ್ಚ

Posted By:
Subscribe to Filmibeat Kannada

ಡಾ.ರಾಜ್ ಅವರ ಮುದ್ದಿನ ಮೊಮ್ಮಗಳು ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ಅವರ ದೊಡ್ಡ ಮಗಳು ಡಾ.ನಿರುಪಮಾ ಹಾಗೂ ಡಾ.ದಿಲೀಪ್ ಅವರ ಮದುವೆ ನೆರವೇರಿದ್ದು, ಮದುವೆ ಸಮಾರಂಭಕ್ಕೆ ಹಲವಾರು ಸಿನಿಮಾ ರಂಗದ ತಾರೆಯರು ಪ್ರತ್ಯಕ್ಷ ಸಾಕ್ಷಿಯಾದರು.

ಅಂದಹಾಗೆ ಈ ಸಂಭ್ರಮದ ಕ್ಷಣಗಳಿಗೆ ನಮ್ಮ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸಾಕ್ಷಿಯಾಗಿದ್ದು, ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಸಂತಸವನ್ನುಂಟು ಮಾಡಿತ್ತು.[ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

Sandalwood Star Sudeep in Shivarajkumar Daughter's marriage

ಈ ಮೊದಲು ಕಿಚ್ಚ ಸುದೀಪ್ ಹಾಗು ಶಿವಣ್ಣ ನಡುವೆ ಏನೋ ಸರಿ ಇಲ್ಲ ಹಾಗೆ ಹೀಗೆ ಅಂತ ಗಾಂಧಿನಗರದಲ್ಲಿ ಗಾಸಿಪ್ ಗಳು ಭಾರಿ ಹರಿದಾಡುತ್ತಿದ್ದ ವಿಚಾರ ನಿಮಗೆ ಗೊತ್ತೆ ಇದೆ. ಆದರೆ ಇದಕ್ಕೆಲ್ಲಾ ಫುಲ್ ಸ್ಟಾಪ್ ಇಟ್ಟ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಶಿವಣ್ಣ ದಂಪತಿಗಳ ಮಗಳ ಮದುವೆಗೆ ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. [ಶಿವರಾಜ್ ಕುಮಾರ್ ಮಗಳ ಮದುವೆ ನೋಡಿ LIVE]

Sandalwood Star Sudeep in Shivarajkumar Daughter's marriage

ಸ್ಟಾರ್ ವಾರ್ ಅಂತ ಮಾತಾಡಿಕೊಳ್ಳುತ್ತಿದ್ದವರಿಗೆ ಕಿಚ್ಚ ಸುದೀಪ್ ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನನ್ನ ಶಿವಣ್ಣ ನಡುವೆ ಅಂತಹ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಏನೂ ಇಲ್ಲ ಅಂತ ಇಡೀ ಕನ್ನಡ ಚಿತ್ರರಂಗದ ಅಭಿಮಾನಿಗಳ ಎದುರು ತೋರಿಸಿಕೊಟ್ಟಿದ್ದಾರೆ.[ಸಪ್ತಪದಿ ತುಳಿದ ಶಿವರಾಜ್ ಕುಮಾರ್ ಪುತ್ರಿ ನಿರುಪಮ]

Sandalwood Star Sudeep in Shivarajkumar Daughter's marriage

ಇನ್ನೂ ಕಿಚ್ಚ ಸುದೀಪ್ ಅವರು ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು-ವರರ ಮುಂದಿನ ಜೀವನಕ್ಕೆ ಶುಭ ಹಾರೈಸಿದ ಪರಿಗೆ ಶಿವರಾಜ್ ಕುಮಾರ್ ಅಭಿಮಾನಿ ಬಳಗದವರು ಟ್ವಿಟ್ಟರ್ ಮೂಲಕ ವಿಶೇಷವಾದ ಅಭಿನಂದನೆ ಸಲ್ಲಿಸಿದ್ದಾರೆ.[ಚಿತ್ರಗಳು : ಶಿವಣ್ಣನ ಮಗಳಿಗೆ ಆಶೀರ್ವದಿಸಿದ ಸಿನಿಮಾ ತಾರೆಯರು]

ಒಟ್ನಲ್ಲಿ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವೈಭವದಿಂದ ಜರುಗಿದ ವಿವಾಹ ಮಹೋತ್ಸವಕ್ಕೆ ಇಡೀ ಚಿತ್ರರಂಗ ಕ್ಷೇತ್ರವೇ ಸಾಕ್ಷಿಯಾಗಿದ್ದು, ಅಂತೂ ಸತ್ಯ.

English summary
Sandalwood Star Sudeep witness for Dr Rajkumar's grand daughter Nirupama's Wedding on Monday August 31st at Bangalore Palace.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada