»   » ಈ ತಾರೆಗಳು ನಾಪತ್ತೆ; ದೂರು ಕೊಡೋರೇ ಇಲ್ಲ!

ಈ ತಾರೆಗಳು ನಾಪತ್ತೆ; ದೂರು ಕೊಡೋರೇ ಇಲ್ಲ!

By: ಜೀವನರಸಿಕ
Subscribe to Filmibeat Kannada

ಕನ್ನಡ ಸಿನಿಮಾದಲ್ಲಿ ಕೆಲವು ಸ್ಟಾರ್ ಗಳು ಬರ್ತಾರೆ. ಸಿನಿಮಾದಲ್ಲಿ ಮಿಂಚ್ತಾರೆ. ಸಿನಿಮಾದಿಂದ ಒಂದಷ್ಟು ಸಮಯ ದೂರ ಹೋಗಿಬಿಡ್ತಾರೆ. ಸೋತ ಸಿನಿಮಾದವಾದರೆ ಅವಕಾಶವಿಲ್ಲದೆ ಹೊರಗೆ ಹೋದ್ರು ಅನ್ನಬಹುದು. ಆದರೆ ಗೆದ್ದವರು ಎಲ್ಲಿ ಹೋಗ್ತಾರೆ?

ಹೀರೋಗಳು ನೋಡೋಕೆ ಹ್ಯಾಂಡಸಮ್. ಆಕ್ಟಿಂಗನ್ನೂ ಮಾಡ್ತಾರೆ. ಹೀರೋಯಿನ್ ಗಳು ಬ್ಯೂಟಿಫುಲ್. ಅಂದ ಚಂದದಲ್ಲಿ ಮೋಡಿ ಮಾಡೋ ಚೆಲುವೆಯರು. ಆದರೆ ಒಂದು, ಎರಡು ಸಿನಿಮಾದ ನಂತರ ಅವರು ಕಾಣಿಸಿಕೊಳ್ಳೋದೇ ಇಲ್ಲ. ಅವರು ಎಲ್ಲಿ ಅಂತ ಹುಡುಕಾಡೋ ಅಭಿಮಾನಿಗಳಿಗೆ ಮಾತ್ರ ನಿರಾಸೆ.

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಒಂದಷ್ಟು ಸ್ಟಾರ್ ಗಳು ಕಾಣ್ತಿಲ್ಲ ಅಂತ ಹೇಳಿದ್ವಿ. ಈಗ ಇವರನ್ನ ನೀವು ಹುಡುಕಿ ಕೊಡ್ಲೇಬೇಕು. ಚಿತ್ರಪ್ರೇಮಿಗಳನ್ನ ರಂಜಿಸಿದ ಇವರು ಎಲ್ಲಿ ಹೋದ್ರು ಅನ್ನೋ ವಿಚಾರ ಗಾಂಧಿನಗರದ ಗಲ್ಲಿಗಳಿಗೂ ಗೊತ್ತಿಲ್ಲ.

ಸಿನಿಮಾದಲ್ಲಿ ಸೋತು ಕಳೆದುಹೋದವರಿಗೆ ಲೆಕ್ಕವಿಲ್ಲ, ಆದ್ರೆ ಗೆದ್ದೂ ಕಳೆದು ಹೋಗ್ತಿರೋರು ಇವರೆಲ್ಲ. ಇರ್ಲೀ ನೋಡೋಣ ಸುಮ್ಮನೆ ಅಲ್ಲೆಲ್ಲಿಂದಲೋ ಕನಸು ಬಿದ್ದಂಗೆ ಒಂದು ದಿನ ಎದ್ದು ಬರಬಹುದು.

ಗಾಂವ್ ನಲ್ಲೂ ಇಲ್ಲ ಸಿಟಿಯಲ್ಲೂ ಇಲ್ಲ ಮೇಘನಾ

ಕೇವಲ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾರೆ ಮೇಘನಾ ಗಾಂವ್ಕರ್. ಆದರೆ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ಲ. ಚಾರ್ಮಿನಾರ್ ಸಿನಿಮಾ ಬಂದು ಫೆಬ್ರವರಿ ಏಳಕ್ಕೆ ಒಂದು ವರ್ಷವಾಗ್ತಿದೆ. ಸಿನಿಮಾ ಗೆದ್ರೂ ಮೇಘನಾ ಯಾಸಿನಿಮಾದಲ್ಲೂಕಾಣಿಸಿಕೊಂಡಿಲ್ಲ. ಎಲ್ಲಿ ಹೋದರು ಮೇಘನಾ?

ನಿಖೇಶಾ ಪಟೇಲ್ ಎಲ್ಲಾದ್ರೂ ನೋಡಿದ್ರಾ?

ಒಂದೆರೆಡು ಸಿನಿಮಾದಲ್ಲಿ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ ನಿಖೇಶಾ ಪಟೇಲ್ ಪತ್ತೇನೇ ಇಲ್ಲ. ಹಾಗೆ ನೋಡಿದ್ರೆ ಕಿಚ್ಚ ಸುದೀಪ್, ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ 'ವರದನಾಯಕ' ಗುರುತಿಸಿಕೊಂಡಿದ್ದ ಸಿನಿಮಾ ಆದರೆ ನಿಖೇಶಾ ಸಿನಿಮಾ ಮುಗಿದ ನಂತರ ಮತ್ಯಾವ ಸಿನಿಮಾದಲ್ಲೂ ಕಾಣಿಸ್ತಿಲ್ಲ.

ಬಿರುಗಾಳಿಯಲ್ಲಿ ಕಳೆದು ಹೋಯ್ತಾ ಮೈನಾದ ಚೇತನ

ಮೈನಾದಲ್ಲಿ ಗೆಲುವಿನ ಬಿರುಗಾಳಿ ಎಬ್ಬಿಸದ ಚಿಕಾಗೋ ಸ್ಟಾರ್ ಚೇತನ್ ಈಗೆಲ್ಲಿ? ಚೇತನ್ ಮೈನಾ ಸಿನಿಮಾ ಗೆದ್ದ ನಂತರ ಮತ್ಯಾವ ಸಿನಿಮಾಗೂ ಓಕೆ ಮಾಡಿಲ್ಲ. ಗಾಂಧಿನಗರದಲ್ಲೂ ಕಾಣಿಸ್ತಿಲ್ಲ. ಚಿಕಾಗೋಗೇ ವಾಪಾಸ್ ಹೋದ್ರಾ ಗೊತ್ತಿಲ್ಲ.

ಕನ್ನಡದ ನಿಧಿ ಕಳೆದು ಹೋಗಿದೆ ಹುಡುಕಿ ಕೊಡಿ

ನಿಧಿ ಸುಬ್ಬಯ್ಯ ಅನ್ನೋ ಕೊಡಗಿನ ಬೆಡಗಿ ಸಿಸಿಎಲ್ ಫೋಟೋ ಶೂಟ್ ನಲ್ಲಿ ಹಾಟ್ ಆಗಿದ್ದೇ ತಡ ಬಾಲಿವುಡ್ ಗೂ ಲಗ್ಗೆ ಇಟ್ರು. ಜಾಕಿ ಭಗ್ನಾನಿ ಜೊತೆ ಕಲರ್ ಫುಲ್ ಸಿನಿಮಾ ಮಾಡಿದ ಪಂಚರಂಗಿ ಆಮೇಲೆ ಪತ್ತೇನೇ ಇಲ್ಲ.

ಬಚ್ಚನ್ ಭಾವನಾ ಬಚ್ಚಿಟ್ಟುಕೊಂಡಿದ್ದೆಲ್ಲಿ?

2010ರಿಂದ 2013ರ ವರೆಗೂ ಕನ್ನಡದಲ್ಲಿ ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಿದ ಭಾವನಾ ಈಗೆಲ್ಲಿದ್ದಾರೆ. ಭಾವನಾ ಕನ್ನಡದ ಮಟ್ಟಿಗೆ ಫ್ಲಾಪ್ ನಟಿಯೇನಲ್ಲ. ಆದರೂ ಗಾಂಧಿನಗರದಲ್ಲೆಲ್ಲೂ ಈ ಹೆಸರಿಲ್ಲ.

English summary
Where Did These sandalwood Stars Go? Actors Meghana Gaonkar, Nikesha Patel, Chetan, Nidhi Subbaiah, Nikesha Patel and Bhavana gone missing from Kannada movies. After giving back to back hit movies where did these stars go.
Please Wait while comments are loading...