»   » ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಹಚ್ಚೆ ಖಯಾಲಿ

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಹಚ್ಚೆ ಖಯಾಲಿ

Posted By:
Subscribe to Filmibeat Kannada

ಒಂದು ಕಾಲ ಇತ್ತು. ಒಂದು ಸಿನಿಮಾ ಮಾಡ್ಬೇಕಂದ್ರೆ, ಚಿತ್ರದ ಹೀರೋ, ಪಾತ್ರಕ್ಕೆ ತಕ್ಕಂತೆ ವಿಭಿನ್ನ ಲುಕ್ ಟ್ರೈ ಮಾಡೋದ್ರಿಂದ ಹಿಡಿದು, ಪಾತ್ರವೇ ತಾನಾಗಿ ಹೋಗ್ಬೇಕಂತ ಸಿಕ್ಕಾಪಟ್ಟೆ ಹೋಮ್ ವರ್ಕ್ ಮಾಡ್ತಿದ್ರು. ಅದರ ಜೊತೆಗೆ ಈಗೀಗ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಅಂತೆಲ್ಲಾ ಸ್ಟಾರ್ ಗಳು ಎಕ್ಸ್ ಪೆರಿಮೆಂಟ್ ಮಾಡ್ತಾನೇ ಇದ್ದಾರೆ ಬಿಡಿ.

ಈಗ ಅಂತ ಕಟ್ಟುಮಸ್ತಾದ ದೇಹದ ಮೇಲೆ ಚಿತ್ತಾರದ ಟಾಟ್ಯೂಗಳನ್ನ ಅಚ್ಚಾಗಿಸಿಕೊಳ್ಳೋ ಮೂಲಕ ಸ್ಟಾರ್ ಹೀರೋಗಳು ಗಾಂಧಿನಗರದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕ್ತಿದ್ದಾರೆ. ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೇಂದ್ರ ಅವರ ಹಚ್ಚೆ ನೋಡೋಣ ಬನ್ನಿ.

ಪುನೀತ್ ತೋಳಲ್ಲಿ ಸೂರ್ಯ

ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅಭಿನಯಿಸ್ತಾಯಿರೋ 'ಧೀರ ರಣವಿಕ್ರಮ' ಚಿತ್ರಕ್ಕೋಸ್ಕರ ಪುನೀತ್, ತಮ್ಮ ತೋಳಿನ ಮೇಲೆ ಸೂರ್ಯನ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಸೂರ್ಯನ ಕಿರಣಗಳಿಂದ ಕಣ್ಣುಕುಕ್ಕುವ ಸೂರ್ಯನ ಟಾಟ್ಯೂ, ಪುನೀತ್ ಪಾತ್ರಕ್ಕಾಗಿ ಹೇಳಿಮಾಡಿಸಿರೋದು. ಹಾಗಂತ ಇದು ಒರಿಜಿನಲ್ ಟಾಟ್ಯೂ ಅಲ್ಲ. ಸೂಜಿಯಿಂದ ಚುಚ್ಚಿ ಗಂಟಗಟ್ಟಲೇ ಅಚ್ಚಾಗಿಸಿರುವುದು ಅಲ್ಲ. ಬದ್ಲಾಗಿ ಇಟಾಲಿಯನ್ ಇಂಕ್‌ ನಲ್ಲಿ ಬಿಡಿಸಿರುವ ಚಿತ್ತಾರ ಅಷ್ಟೇ.

ಸೂರ್ಯನಷ್ಟೇ ಪವರ್ ಫುಲ್..!

ಅಸಲಿಗೆ ಧೀರ ರಣವಿಕ್ರಮ ಚಿತ್ರದಲ್ಲಿ ಪುನೀತ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ರಫ್ ಅಂಡ್ ಟಫ್ ಪೊಲೀಸ್ ಪಾತ್ರವಾಗಿದ್ದರೆ, ಮತ್ತೊಂದು ಫ್ಲ್ಯಾಶ್ ಬ್ಯಾಕ್ ನಲ್ಲಿ ಬರುವ ಅಪ್ಪನ ಪಾತ್ರ. ಹಳ್ಳಿ ಸೊಗಡಿನಲ್ಲಿ ಬರುವ ಅಪ್ಪನ ಪಾತ್ರ, ಸೂರ್ಯನಷ್ಟೇ ಪವರ್ ಫುಲ್ ಆಗಿರೋದ್ರಿಂದ ಅದನ್ನ ಸೂಚಿಸೋಕೆ ಸೂರ್ಯನ ಟಾಟ್ಯೂನೇ ಬೆಸ್ಟ್ ಅಂತ ಪ್ಲಾನ್ ಮಾಡಿದ್ರಂತೆ 'ಧೀರ ರಣವಿಕ್ರಮ' ಚಿತ್ರದ ನಿರ್ದೇಶಕ ಪವನ್ ಒಡೆಯರ್.

ಸೂಜಿ ಕಂಡ್ರೆ ನಂಗೆ ಭಯ...!'

ಟಾಟ್ಯೂ ಹಾಕಿಸಿಕೊಳ್ಳೋದೇನೋ ಓಕೆ. ಆದ್ರೆ ಅದರಿಂದಾಗುವ ನೋವನ್ನು ಊಹಿಸಿಕೊಂಡ್ರೇನೇ ಭಯವಾಗುತ್ತೆ. ಹಾಗಾಗಿ ಒರಿಜಿನಲ್ ಟಾಟ್ಯೂ ಆಗಲ್ಲ. ಪಾತ್ರಕ್ಕೆ ಅನಿವಾರ್ಯ ಅಂತ ಟೆಂಪರರಿ ಟ್ಯಾಟೂ ಹಾಕಿಸಿಕೊಂಡೆ'' ಅಂತಾರೆ ಪುನೀತ್ ರಾಜ್‌ ಕುಮಾರ್.

ಸಾಹಸಸಿಂಹನ ಗರ್ಜನೆ...!

ರಾಕಿಂಗ್ ಸ್ಟಾರ್ ಯಶ್ ಕೂಡ ತಮ್ಮ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರಕ್ಕೋಸ್ಕರ ಟ್ಯಾಟ್ಯೂ ಮಾಡಿಸಿದ್ದಾರೆ. ವಿಶೇಷವೆಂದರೆ ಯಶ್, ಸಾಹಸಸಿಂಹ ಡಾ.ವಿಷ್ಣುವರ್ಧನ್ ಭಾವಚಿತ್ರವನ್ನು ಎದೆಯ ಮೇಲೆ ಅಚ್ಚಾಗಿಸಿಕೊಂಡಿರೋದು. ಹೇಳಿ ಕೇಳಿ, ಚಿತ್ರದ ಹೆಸರಲ್ಲೇ ರಾಮಾಚಾರಿ ಇರುವುದರಿಂದ ನಾಗರಹಾವಿನ ರೋಷದ ರಾಮಾಚಾರಿಯನ್ನು ನೆನಪಿಸಿಕೊಳ್ಳುವ ಸಲುವಾಗಿ ಟಾಟ್ಯೂ ಅನಿವಾರ್ಯವಿತ್ತಂತೆ.

ನಾಗರಹಾವಿನ ರೋಷಾವೇಶದ ಪಾತ್ರ

"ಚಿತ್ರದ ಬಹುತೇಕ ಚಿತ್ರೀಕರಣ ನಡೆದಿರುವುದು ಚಿತ್ರದುರ್ಗದಲ್ಲೇ. ಹಾಗೇ ಚಿತ್ರದಲ್ಲಿ ಯಶ್, ಡಾ.ವಿಷ್ಣುವರ್ಧನ್ ರವರ ಕಟ್ಟಾ ಅಭಿಮಾನಿ. ನಾಗರಹಾವು ಚಿತ್ರದಲ್ಲಿ ವಿಷ್ಣುಗೆ ಹೇಗೆ ರೋಷಾವೇಶದ ಪಾತ್ರವಿತ್ತೋ ಹಾಗೇ ಯಶ್ ಗೂ ಇಲ್ಲಿ ಅಂತದ್ದೇ ಪಾತ್ರವಿದೆ. ಟ್ಯಾಟ್ಯೂ ಟ್ರೆಂಡ್ ಚಾಲ್ತಿಯಲ್ಲಿರುವುದರಿಂದ ವಿಷ್ಣು ಭಾವಚಿತ್ರವನ್ನೇ ಯಶ್ ಗೆ ಟಾಟ್ಯೂ ಮಾಡಿಸಿದ್ದೀವಿ'' ಅಂತಾರೆ ನಿರ್ದೇಶಕ ಸಂತೋಷ್ ಆನಂದರಾಮ್.

ಟ್ಯಾಟ್ಯೂಗಳಂದ್ರೇನೇ ಆಗೋಲ್ಲ..!'

ರಾಕಿಂಗ್ ಸ್ಟಾರ್ ಯಶ್ ಗೆ ಟಾಟ್ಯೂಗಳಂದ್ರೇನೇ ಅಲರ್ಜಿ ``ಟಾಟ್ಯೂಗಳು ಪರ್ಮನೆಂಟ್ ಆಗಿರೋ ಕಾರಣ ನಂಗೆ ಇಷ್ಟವಿಲ್ಲ. ಸಿನಿಮಾಗಳಲ್ಲಿ ಹಲವಾರು ಪಾತ್ರಗಳನ್ನ ಮಾಡಬೇಕಾಗುತ್ತದೆ. ಪರ್ಮನೆಂಟ್ ಟಾಟ್ಯೂ ಮಾಡ್ಸಿದ್ರೆ ಕೆಲವೊಂದು ಪಾತ್ರಗಳಿಗೆ ಅವು ಸೂಟ್ ಆಗುವುದಿಲ್ಲ. ಹೀಗಾಗಿ ಪಾತ್ರಕ್ಕೆ ತಕ್ಕಂತೆ ವಾಶಬಲ್ ಟಾಟ್ಯೂ ಹಾಕಿಸುವುದೇ ಮೇಲು'' ಅಂತಾರೆ ಯಶ್.

ರಿಯಲ್ ಸ್ಟಾರ್ 'ಉಪ್ಪಿಟು'ಗೆ ತ್ರಿಶೂಲ...!

ಉಪೇಂದ್ರ ರಿಯಲ್ ಸ್ಟಾರ್ ಆದ್ರೂ ಟಾಟ್ಯೂ ವಿಷ್ಯದಲ್ಲಿ ಮಾತ್ರ ರೀಲ್. ಉಪ್ಪಿ 2 ಚಿತ್ರದಲ್ಲಿ ಭಿನ್ನವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಉಪ್ಪಿ, ಒಂದು ಸನ್ನಿವೇಶಕ್ಕಾಗಿ ತ್ರಿಶೂಲವನ್ನು ತಮ್ಮ ಎದೆಯ ಮೇಲೆ ಇಂಕ್ ಮಾಡಿಸಿದ್ದಾರೆ. ಹಿಮಾಲಯದ ಯೋಗಿಗಳಂತೆ ಜಡೆಬಿಟ್ಟು, ಈಗಾಗಲೇ ಪೋಸ್ಟರ್ ಗಳಲ್ಲಿ ಮಿಂಚಿರುವ ಉಪ್ಪಿ, ಚಿತ್ರದಲ್ಲಿ ಶಿವನ ಭಕ್ತ ಅನ್ನೋದನ್ನ ಪ್ರತಿಬಿಂಬಿಸೋಕೆ ತ್ರಿಶೂಲವನ್ನೇ ಟಾಟ್ಯೂ ಮಾಡಿಸಿದ್ದಾರೆ.

ಟ್ಯಾಟ್ಯೂಗೂ ನಂಗೂ ಆಗ್ಬರಲ್ಲ..!

"ಟ್ಯಾಟ್ಯೂ ಅಂದ್ರೆ ಮೊದಲಿನಿಂದ್ಲೂ ಇಷ್ಟವಿಲ್ಲ. ಟ್ಯಾಟ್ಯೂಗೂ ನಂಗೂ ಆಗ್ಬರಲ್ಲ. ಆದರೆ ಇತ್ತೀಚೆಗೆ ಟ್ಯಾಟ್ಯೂ ಕ್ರೇಝ್ ಹೆಚ್ಚಾಗಿದೆ. ಉಪ್ಪಿ 2 ಚಿತ್ರದಲ್ಲಿ ನನ್ನ ಪಾತ್ರಕ್ಕೆ ಅನೇಕ ಆಯಾಮಗಳಿರೋ ಕಾರಣ ಅವುಗಳೆಲ್ಲದಕ್ಕೂ ತೆರೆಮೇಲೆ ವ್ಯತ್ಯಾಸ ತೋರಿಸಲು ಟಾಟ್ಯೂಗಳ ಮೊರೆಹೋಗಿದ್ದೇವೆ. ಕೆಲವು ಸೀನ್ ಗಳಿಗೆ ಮಾತ್ರ ಅನಿವಾರ್ಯವಾಗಿದ್ದರಿಂದ ಟೆಂಪರರಿ ಟ್ಯಾಟ್ಯೂ ಹಾಕಿಸಿಕೊಂಡೆ'' ಅಂತಾರೆ ಉಪೇಂದ್ರ.

English summary
Though Kannada Stars are away from getting permanent Tattoos done, here are few stars who are getting inked daily (temporary tattoo) for their movies to attract the audience. Power star Puneeth Rajkumar has got a Sun Tattoo on his bicep for his upcoming movie Dheera Ranavikrama. Rocking star Yash has got Dr.Vishnuvardhan portrait on his chest for Mr and Mrs Ramachari and Real star Upendra has inked trishool for his most awaited movie Uppi2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada