»   » ಬರ್ತಿವೆ ದಂಡಿಯಾಗಿ 'ಬಂಡೆ'ಯಂತಾ ಸಿನಿಮಾಗಳು

ಬರ್ತಿವೆ ದಂಡಿಯಾಗಿ 'ಬಂಡೆ'ಯಂತಾ ಸಿನಿಮಾಗಳು

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ರಾಮ್ ಗೋಪಾಲ್ ವರ್ಮಾ ಸಹ ಒಂದು ಕ್ಷಣ ಬೆಚ್ಚಿಬೀಳುವಂತ ನಿರ್ದೇಶಕರು, ನಿರ್ಮಾಪಕರಿದ್ದಾರೆ. ದೇಶದಲ್ಲಿ ಭಯಂಕರ ಸುದ್ದಿ ಮಾಡೋ ಕ್ರೈಂ ಕಥೆಯನ್ನಿಟ್ಟುಕೊಂಡು ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡೋಕೆ ಶುರು ಮಾಡೋಕೆ ಸ್ಕ್ರಿಪ್ಟ್ ಮಾಡೋಕೆ ಒಂದಷ್ಟು ತಿಂಗಳು ತೆಗೆದುಕೊಳ್ತಾರೆ.

ಆದರೆ ಕನ್ನಡದ ಆರ್ ಜಿವಿಗಳಿಗೆ ತುಂಬಾ ಅರ್ಜೆಂಟಾಗಿ ಯಾವುದಾದರೂ ಶೂಟೌಟ್ ಆದ ದಿನಾನೇ ಸಿನಿಮಾದ ಟೈಟಲ್ ರಿಜಿಸ್ಟರ್ ಮಾಡಿಸಿಬಿಡ್ತಾರೆ. 2012ರಲ್ಲಿ ದಂಡುಪಾಳ್ಯ ಬಂದು ಭರ್ಜರಿ ಸಕ್ಸಸ್ ಪಡ್ಕೊಂಡ ನಂತರ ರಿಯಲ್ ಸ್ಟೋರಿ ಬೇಸ್ಡ್ ಕ್ರೈಂ ಕಥೆಗಳು ದಂಡಿ ದಂಡಿಯಾಗಿ ಬಂಡೆಯೇರಿ ಬರ್ತಿವೆ.

ರಿಯಲ್ ಸ್ಟೋರಿ ಬೇಸ್ಡ್ ಸಿನಿಮಾಗಳು ಬರಲಿ. ಆದರೆ ಆತುರಾತುರವಾಗಿ ಸಿನಿಮಾ ಮಾಡಿ ಕೆಟ್ಟ ಸಿನಿಮಾ ಕೊಡೋ ಬದ್ಲು ಒಳ್ಳೆಯ ಸಿನಿಮಾಗಳನ್ನ ಕೊಡ್ಲಿ. ಅಂತಹಾ ಒಂದಷ್ಟು ಸಿನಿಮಾಗಳನ್ನ ಸ್ಲೈಡ್ ನಲ್ಲಿ ನೋಡ್ತಾ ಹೋಗಿ.

ಬಂಡೆ ಕರ್ನಾಟಕದ ರಿಯಲ್ ಸಿಂಗಂ

ರೌಡಿ ಮುನ್ನಾ ಶೂಟೌಟ್ ನಲ್ಲಿ ಗಾಯಗೊಂಡು ಪ್ರಾಣ ಕಳೆದುಕೊಂಡ ದಿಟ್ಟ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯ ಸಿನಿಮಾ. ಸಿನಿಮಾಗೆ ದರ್ಶನ್ ಇಲ್ಲದಿದ್ರೆ ಸುದೀಪ್ ಹೀರೋ ಆಗೋ ಸಾಧ್ಯತೆಗಳಿವೆ. ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಬೆತ್ತನಗೆರೆ ಸೀನ

ನೆಲಮಂಗಲದ ಬೆತ್ತನಗೆರೆಯ ಸೀನನ ಎನಕೌಂಟರ್ ಆದಾಗ್ಲೂ ಕನ್ನಡ ಚಿತ್ರರಂಗದ ನಿರ್ಮಾಪಕರು ಬೆತ್ತನಗೆರೆ ಸೀನ ಅನ್ನೋ ಟೈಟಲ್ ಗೆ ಮುಗಿಬಿದ್ದಿದ್ರು. ಕೊನೆಗೆ ಬೆತ್ತನಗೆರೆ ಸೀನನ ಸಹೋದರ ಮೋಹನ್ ಅನ್ನೋರಿಗೆ ಟೈಟಲ್ ಸಿಕ್ಕಿ ಸಿನಿಮಾ ಶುರುವಾಗಿದೆ. [ಬೆತ್ತನಗೆರೆ ಸೀನನಾಗಿ 'ಸಿಲ್ಕ್' ಬಾಯ್ ಅಕ್ಷಯ್]

ಕೆಜಿಎಫ್ ರೌಡಿ ತಂಗಂ

ಕೆಜಿಎಫ್ ನ ಹಳೆಯ ರೌಡಿ ತಂಗಂ ಕಥೆ ಈಗ ಸಿನಿಮಾ ಆಗಲಿರೋ ಸುದ್ದಿ ಬಂದಿದೆ. ಸ್ಲಂ ಸಿನಿಮಾದ ನಿದೇಶಕ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಲೂಸ್ ಮಾದ ಯೋಗಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು. ಚಿತ್ರ ಸದ್ಯದಲ್ಲೇ ಶುರುವಾಗಲಿದೆ.

ತಿಪ್ಪಜ್ಜಿ ಸರ್ಕಲ್

ದಂಡುಪಾಳ್ಯದ ನಂತರ ಮತ್ತೊಂದು ರಿಯಲ್ ಸ್ಟೋರಿ ಬೇಸ್ಡ್ ಸಿನಿಮಾದಲ್ಲಿ ಪೂಜಾಗಾಂಧಿ ಮಿಂಚುತ್ತಿದ್ದಾರೆ. ಚಿತ್ರ ಈಗಾಗ್ಲೇ ಸುದ್ದಿ ಮಾಡಿದ್ದು ಚಿತ್ರದುರ್ಗದ ತಿಪ್ಪಜ್ಜಿ ಅನ್ನೋ ಹೆಣ್ಣೊಬ್ಬಳ ಕಥೆ ಇದು.

ರಿಂಗ್ ರೋಡ್ ಶುಭಾ

ಲವರ್ ಜೊತೆ ಸೇರಿ ಎಂಗೇಜ್ ಮೆಂಟ್ ಮಾಡಿಕೊಂಡ ಗಂಡನನ್ನೇ ಕೊಲೆ ಮಾಡಿದ ಶುಭಾಳ ಕಥೆ ಕೂಡ ಸಿನಿಮಾ ಆಗ್ತಿದ್ದು ಈ ವರ್ಷವೇ ತೆರೆಗೆ ಬರಲಿದೆ.

ಅಭಿನೇತ್ರಿ

ಮಳೆಹುಡುಗಿ ಪೂಜಾಗಾಂಧಿ ದಂಡುಪಾಳ್ಯ ಗೆದ್ದ ನಂತರ ರಿಯಲ್ ಸ್ಟೋರಿ ಬೇಸ್ಡ್ ಕಥೆಗಳ ಹಿಂದೆ ಬಿದ್ದಿದ್ದಾರೆ. ಪೂಜಾಗಾಂಧಿ ತಮ್ಮದೇ ಪ್ರೊಡಕ್ಷನ್ ನಲ್ಲಿ ಮಾಡ್ತಿರೋ ಅಭಿನೇತ್ರಿ ಸಿನಿಮಾ ಮಿನುಗುತಾರೆ ಕಲ್ಪನಾ ಕಥೆ ಅನ್ನೋ ಸುದ್ದಿ ಇದೆ. ಪೂಜಾಗಾಂಧಿ ಕುತ್ತಿಗೆಯಲ್ಲಿ ಕಾಣೋ ಮಚ್ಚೆ ಈ ಅನುಮಾನ ಮೂಡಿಸ್ತಿದೆ. [ಪೂಜಾಗಾಂಧಿ ಕತ್ತಲ್ಲಿ ಕಲ್ಪನಾರ ಕಪ್ಪು ಮಚ್ಚೆ]

English summary
Sandalwood waiting for more movies based on a true story. Bande, Bettanagere Seena, KGF Rowdy Tangam, Tippajji Circle, Abhinetri, Ring Road Shubha are some of them.
Please Wait while comments are loading...