»   » ಸಂದೇಶ್, ಪೂಜಾ ಗಾಂಧಿಯ 'ಜೈ ಹಿಂದ್' ಬಿಡುಗಡೆ

ಸಂದೇಶ್, ಪೂಜಾ ಗಾಂಧಿಯ 'ಜೈ ಹಿಂದ್' ಬಿಡುಗಡೆ

Posted By:
Subscribe to Filmibeat Kannada

ಬರುವ ಶುಕ್ರವಾರ (14 ಸೆಪ್ಟೆಂಬರ್ 2012) 'ಜೈ ಹಿಂದ್' ಎಂಬ ಚಿತ್ರ ತೆರೆಕಾಣಲು ಸಿದ್ಧವಾಗಿದೆ. ತುಂಬಾ ಹಿಂದೆಯೇ ತೆರೆಕಾಣಬೇಕಿದ್ದ ಈ ಚಿತ್ರ, ಕಾರಣಾಂತರಗಳಿಂದ ಈಗ ಬಿಡುಗಡೆಯಾಗುತ್ತಿದೆ. 'ಈ ಸಂಭಾಷಣೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನಟನಾಗಿ ಕಾಲಿಟ್ಟಿದ್ದ ನಟ ಸಂದೇಶ್, ಈ 'ಜೈ ಹಿಂದ್' ಚಿತ್ರದ ನಾಯಕರು. ನಾಯಕಿಯಾಗಿ ಪೂಜಾ ಗಾಂಧಿ ನಟಿಸಿದ್ದಾರೆ. ಚಿತ್ರದ ನಿರ್ಮಾಪಕರು ನಾಯಕ ನಟ ಸಂದೇಶ್ ತಂದೆ ಮೇಜರ್ ಶ್ರೀನಿವಾಸ್ ಪೂಜಾರ್.

ವೇಣು ಗೋಪಾಲ್ ನಿರ್ದೇಶನದ ಈ ಚಿತ್ರ, ಕರ್ನಾಟಕದಾದ್ಯಂತ 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೆಸರಿಗೆ ತಕ್ಕಂತೆ ಈ ಚಿತ್ರವು ದೇಶಪ್ರೇಮದ ಕಥೆ ಹೊಂದಿದೆ. ಇದಕ್ಕೆ ಅತ್ಯಂತ ಸಹಜವಾದ ಕಾರಣವಿದೆ. ಅದೇನೆಂದರೆ, ಚಿತ್ರದ ನಿರ್ಮಾಪಕರಾದ ಮೇಜರ್ ಶ್ರೀನಿವಾಸ ಪೂಜಾರ್ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾದವರು. ಅವರ ಅನುಭವಗಲೇ ಈ ಚಿತ್ರ ಮಾಡಲು ಪ್ರೇರಣೆಯಂತೆ.

ನಿವೃತ್ತರಾದ ಬಳಿಕ ಸೇನೆ ಸಂಗತಿ ಕುರಿತು ಸಿನಿಮಾ ಮಾಡಬೇಕೆಂಬ ಅವರ ಮಹಾತ್ವಾಕಾಂಕ್ಷೆಯಂತೆ ಈ ಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಕ್ಯಾಪ್ಟನ್ ಒಬ್ಬನ ಕೆಲಸ ಏನಿರುತ್ತದೆ, ಅವನು ಅದೆಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ, ಇಂತಹ ಅದೆಷ್ಟೋ ಸಂಗತಿಗಳು ಈ ಚಿತ್ರದಲ್ಲಿವೆಯಂತೆ. 'ಸಂದೇಶ್ ತುಂಬಾ ಸಾಫ್ಟ್ ಆಗಿ ಕಾಣಿಸುತ್ತಾರೆ. ಅವರಿಗೆ ಈ ಪಾತ್ರ ಮಾಡಲು ಹೇಗೆ ಸಾಧ್ಯವಾಯ್ತು' ಎಂಬ ಪ್ರಶ್ನೆಗೆ ಪೂಜಾರ್ ಉತ್ತರವನ್ನು ನೀಡಿದ್ದಾರೆ...

"ಕ್ಯಾಪ್ಟನ್ ಒಬ್ಬನ ದೇಶಪ್ರೇಮದ ಈ ಕಥೆಯನ್ನು ಸಿನಿಮಾ ಮಾಡಲು ಇಷ್ಟಪಟ್ಟಾಗ ನನ್ನ ಮಗ ಸಂದೇಶ್, ನಾನೇ ಈ ಚಿತ್ರದಲ್ಲಿ ನಟಿಸುತ್ತೇನೆ ಎಂದು ಅವನಾಗಿಯೇ ಹೇಳಿದ್ದಾನೆ. ನನ್ನ ಮಗನಿಗೆ ಹಿಂದಿನಿಂದಲೂ ಸೈನ್ಯಕ್ಕೆ ಸೇರಬೇಕೆಂಬ ಆಸೆಯಿತ್ತು. ಹೀಗಾಗಿ ಈ ಪಾತ್ರವನ್ನು ಮಾಡಲು ಅವನಾಗಿಯೇ ಮುಂದೆ ಬಂದಿದ್ದಾನೆ, ನಾನೇನೂ ಬಲಾತ್ಕಾರವಾಗಿ ಅವನಿಂದ ಈ ಪಾತ್ರ ಮಾಡಿಸಿಲ್ಲ" ಎಂದಿದ್ದಾರೆ ನಿರ್ಮಾಪಕ ಶ್ರೀನಿವಾಸ್. ಒಟ್ಟಿನಲ್ಲಿ 'ಜೈ ಹಿಂದ್' ಚಿತ್ರವನ್ನು ತೆರೆಯಲ್ಲಿ ನೋಡಬಹುದು. (ಒನ್ ಇಂಡಿಯಾ ಕನ್ನಡ)

English summary
Kannada Movie Jai Hind Releases on Friday, 14th September 2012 in 60 Theaters all over Karnataka. 'Ee Sanbhashane' fame actor Sandesh and Pooja Gandhi are in Lead Role of this movie. Venu Gopal is directed this movie for Major Srinivas Poojar Production. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada