ಸಂಜು ವೆಡ್ಸ್ ಗೀತಾ-2 ಏನಾಯ್ತು? ಅದೇ ಕಥೆನಾ ಇದು.!

ಅಮರ್ ಸಿನಿಮಾದ ಬಳಿಕ ನಿರ್ದೇಶಕ ನಾಗಶೇಖರ್ ಹೊಸ ಸಿನಿಮಾ ಘೋಷಿಸಿದ್ದಾರೆ. ಹೊಸ ಚಿತ್ರಕ್ಕೆ 'ಸಂಜಯ್ ಅಲಿಯಾಸ್ ಸಂಜು' ಎಂಬ ಶೀರ್ಷಿಕೆ ಅಂತಿಮಗೊಳಿಸಿದ್ದು, ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಈ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಡಿಸೈನ್ ನೋಡ್ತಿದ್ರೆ ಇದು 'ಸಂಜು ವೆಡ್ಸ್ ಗೀತಾ' ಚಿತ್ರದ ಮುಂದುವರಿದ ಭಾಗನಾ ಎಂಬ ಕುತೂಹಲ ಮೂಡುತ್ತಿದೆ. ಆದರೆ ಈ ಬಗ್ಗೆ ಯಾವು ಸುಳಿವು ಮತ್ತು ಅಧಿಕೃತ ಮಾಹಿತಿ ನೀಡದ ನಿರ್ದೇಶಕರು, ಇದು ನೈಜಕಥೆಯಾಧರಿತ ಚಿತ್ರವೆಂದು ಹೇಳಿದ್ದಾರೆ.

ಈ ಹಿಂದೆ ಸುದ್ದಿಯಾದಂತೆ ಸಂಜು ವೆಡ್ಸ್ ಗೀತಾ ಪಾರ್ಟ್ 2 ಚಿತ್ರದಲ್ಲಿ ಕೃತಿ ಕರಬಂಧ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಬಳಿಕ ಕೃತಿ ಬದಲು ಬೇರೆ ಹೀರೋಯಿನ್ ನಟಿಸುವ ಸಾಧ್ಯತೆ ಎಂಬ ಸುದ್ದಿ ಚರ್ಚೆಯಾಯಿತು. ಈ ಮಧ್ಯೆ ನಟ ಶರಣ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು.

Sanjay alias sanju its is part 2 of sanju weds geetha?

ಇದ್ಯಾವುದಕ್ಕೂ ಸ್ಪಷ್ಟನೆ ನೀಡದ ನಾಗಶೇಖರ್ ಸೈಲೆಂಟ್ ಮಾಸ್ತಿಗುಡಿ, ಅಮರ್ ಅಂತಹ ಸಿನಿಮಾ ಕೈಗೆತ್ತಿಕೊಂಡಿದ್ದರು. ಇದೀಗ, ಸಂಜಯ್ ಅಲಿಯಾಸ್ ಸಂಜು ಎಂಬ ಸಿನಿಮಾ ಘೋಷಣೆ ಮಾಡಿರುವುದು ಈಗ ಅನುಮಾನಕ್ಕೆ ಕಾರಣವಾಗಿದೆ.

2011ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಮುಂದುವರೆದ ಭಾಗವೇ ಸಂಜಯ್ ಅಲಿಯಾಸ್ ಸಂಜು ಆಗಿರಬಹುದು ಎಂಬ ಚರ್ಚೆ ಈಗ ಗಾಂಧಿನಗರದಲ್ಲಿ ಆರಂಭವಾಗಿದೆ. ಇದಕ್ಕೆ ಉತ್ತರ ನಿರ್ದೇಶಕರೇ ಉತ್ತರಿಸಬೇಕಾಗಿದೆ.

More from Filmibeat

English summary
Kannada director nagashekar announced his next movie called Sanjay alias sanju. may be its is part 2 of sanju weds geetha?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X