»   » ಜೈಲಿನಲ್ಲಿ ಸಂಜಯ್ ದತ್ ದಿನಗೂಲಿ 25 ರೂ!

ಜೈಲಿನಲ್ಲಿ ಸಂಜಯ್ ದತ್ ದಿನಗೂಲಿ 25 ರೂ!

Posted By:
Subscribe to Filmibeat Kannada
Sanjay Dutt
ದಿನವೊಂದಕ್ಕೆ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದ ಮುನ್ನಾಭಾಯಿ ಸಂಜಯ್ ದತ್ ಗೆ ಈಗ ಕೇವಲ 25 ರೂ. ಸಂಬಳ ನಿಗದಿಗೊಳಿಸಲಾಗಿದೆ. ಪುಣೆಯ ಯೆರವಾಡ ಜೈಲಿನಲ್ಲಿ ಸಂಜಯ್ ದತ್ ಗೆ ಪೇಪರ್ ಬ್ಯಾಗ್ ಮಾಡುವ ಕೆಲಸವನ್ನು ಅಧಿಕಾರಿಗಳು ನೀಡಿದ್ದಾರೆ.

ಮುಂಬಯಿ ಸರಣಿ ಬಾಂಬ್ ಸ್ಫೋಟದಲ್ಲಿ ಶಿಕ್ಷೆಗೆ ಗುರಿಯಾಗಿ 42 ತಿಂಗಳ ಜೈಲು ವಾಸ ಅನುಭವಿಸಿತ್ತಾ, ಯೆರವಾಡ ಜೈಲಿನಲ್ಲಿ ಸಂಜಯ್ ದತ್ ಕಾಲ ಕಳೆಯ ಬೇಕಾಗಿದೆ. ಮುನ್ನಾಭಾಯಿ ಜೈಲಿನಲ್ಲಿ ಸುಮ್ಮನೆ ಕೂರುವಂತಿಲ್ಲ. ಇತರ ಕೈದಿಗಳ ಜೊತೆ ಸೇರಿ ಕೆಲಸ ಮಾಡಬೇಕು.

ಕಳೆದ ವಾರ ಪುಣೆಯ ಜೈಲಿಗೆ ಆಗಮಿಸಿದ ಸಂಜು ಬಾಬಾಗೆ ಏನು ಕೆಲಸ ಕೊಡಬೇಕು ಎಂದು ಜೈಲಿನ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು. ಕೊನೆಗೂ ಪೇಪರ್ ಬ್ಯಾಗ್ ತಯಾರಿಸುವ ಕೆಲಸವನ್ನು ಸಂಜಯ್ ದತ್ ಗೆ ವಹಿಸಲಾಗಿದೆ.

ಸಂಜು ಬಾಬಾಗೆ ಸದ್ಯ ಬ್ಯಾಗ್ ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ದತ್ 6 ರಿಂದ 8 ಕೆಜಿ ತೂಕ ಹೊರಬಲ್ಲ ಉತ್ತಮ ಗುಣಮಟ್ಟದ ಪೇಪರ್ ಚೀಲಗಳನ್ನು ತಯಾರಿಸಬೇಕು. ಅದಕ್ಕಾಗಿ ಅವರಿಗೆ ಸದ್ಯ 25 ರೂ. ವೇತನ ನೀಡಲಾಗುತ್ತದೆ.

ಮುನ್ನಾಭಾಯಿ ಆಸಕ್ತಿಯಿಂದ ಕೆಲಸ ಕಲಿತು, ಕುಶಲತೆಯಿಂದ ಬ್ಯಾಗ್ ತಯಾರಿಸಿದರೆ, ಅವರಿಗೆ 40 ರೂ. ಸಂಬಳ ನೀಡಲಾಗುವುದು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ದಿನವೊಂದಕ್ಕೆ ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಈಗ ರೂಪಾಯಿ ಲೆಕ್ಕದಲ್ಲಿ ಸಂಬಳ ಪಡೆಯಲಿದ್ದಾರೆ.

ಜೈಲಿನ ಇತರ ಕೈದಿಗಳಂತೆ ಸಂಜುಬಾಬಾಗೂ ದಿನಚರಿ ಇರುತ್ತದೆ. ಆದರಂತೆ ಅವರು ಕೆಲಸ ನಿರ್ವಹಿಸಿ, ಸಂಬಳ ಪಡೆಯಬೇಕು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಹೇಳಿಕೊಟ್ಟ ಕೆಲಸವನ್ನು ದತ್ ಶ್ರದ್ಧೆಯಿಂದ ಕಲಿಯುತ್ತಿದ್ದಾರಂತೆ.

ಕಠಿಣ ಕೆಲಸದ ಬೇಡಿಕೆ : ಕಠಿಣ ಪರಿಶ್ರಮವಿರುವ ಕೆಲಸ ನೀಡಿ, ಮೈ ಮುರಿದು ಕೆಲಸ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಸಂಜುಬಾಬಾ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಸದ್ಯ ಸಂಜಯ್ ದತ್ ಕೆಲಸವನ್ನು ಬದಲಾವಣೆ ಮಾಡಲು ನಿರಾಕರಿಸಿರುವ ಅಧಿಕಾರಿಗಳು ಪೇಪರ್ ಬ್ಯಾಗ್ ಕೆಲಸವನ್ನು ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.

English summary
Jailed actor Sanjay Dutt will be trained to make paper bags at the Yerawada central prison. for this Sanjay Dutt will receive 25 rs salary per day. Maharashtra state prisons department said, He will be given remuneration for the work done in accordance with the prison manual.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada