»   » ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ

ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ

Posted By:
Subscribe to Filmibeat Kannada

ನಿನ್ನೆ ಬೆಳಗ್ಗಿನಿಂದ ಯಾವುದೇ ಟಿವಿ ಚಾನೆಲ್ ಆನ್ ಮಾಡಿದ್ರೂ, ನಟಿ ಸಂಜನಾ ರವರ 'ಬೆತ್ತಲೆ' ವಿಡಿಯೋದ್ದೇ ಸುದ್ದಿ.

ಪದೇ ಪದೇ ಪ್ರಸಾರ ಆಗುತ್ತಿದ್ದ ತಮ್ಮ 'ಬೆತ್ತಲೆ' ವಿಡಿಯೋ ಎಂದು ಲೀಕ್ ಆಗಿರುವ '2' (ದಂಡುಪಾಳ್ಯ 2) ಚಿತ್ರದಲ್ಲಿ ಸೆನ್ಸಾರ್ ಆಗಿರುವ ತುಣುಕನ್ನ ನೋಡಿ ನೋಡಿ ಫುಲ್ ಗರಂ ಆಗಿದ್ದ ನಟಿ ಸಂಜನಾ ಇಂದು ತುರ್ತು ಸುದ್ದಿ ಗೋಷ್ಠಿ ಕರೆದಿದ್ದರು.

'ಬೆತ್ತಲೆ ಸೀನ್' ಬಗ್ಗೆ ನಿಜ ಬಾಯ್ಬಿಟ್ಟ ನಟಿ ಸಂಜನಾ.!

'ತಾನು ಬೆತ್ತಲಾಗಿಲ್ಲ' ಎಂದು ಹೇಳಲು ಸಾಕ್ಷಿ ಸಮೇತ ಪತ್ರಿಕಾ ಗೋಷ್ಠಿಗೆ ಸಂಜನಾ ಹಾಜರ್ ಆದರು.

ನ್ಯೂಸ್ ಚಾನೆಲ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಯರ್ರಾಬಿರ್ರಿ ವೈರಲ್ ಆಗಿರುವ 'ಬೆತ್ತಲೆ' ವಿಡಿಯೋದ ಹಿಂದಿನ ರಹಸ್ಯವನ್ನ ಸುದ್ದಿ ಗೋಷ್ಠಿಯಲ್ಲಿ ನಟಿ ಸಂಜನಾ ಹೊರಹಾಕಿದ್ದು ಹೀಗೆ....

ಮಾಧ್ಯಮಗಳಿಗೆ ಪ್ರಶ್ನೆ ಹೇಳಿದ ಸಂಜನಾ

''ಯಾವುದೇ ರೀತಿಯ ಸಾಕ್ಷಿ ಇಲ್ಲದೇ ಸಂಜನಾ ಬೆತ್ತಲಾಗಿದ್ದಾರೆ ಅಂತ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ'' ಅಂತ ಹೇಳಿ ಮೊದಲು ಸಂಜನಾ ಗರಂ ಆದರು.

ನಾನು ಬೆತ್ತಲಾಗಿಲ್ಲ

''ಅಲ್ಲಿ ಬೆತ್ತಲಾಗಿ ಶೂಟಿಂಗ್ ನಡೆದಿಲ್ಲ. ನಾನು ಶಾರ್ಟ್ ಡ್ರೆಸ್ ಧರಿಸಿದ್ದೇ. ಇದು ಬ್ಯಾಕ್ ಲೆಸ್ ಟಾಪ್ ಅಷ್ಟೆ. ಬಾಡಿ ಸೂಟ್ ಹಾಕಿ ಈ ದೃಶ್ಯವನ್ನು ನಾನು ಮಾಡಿದ್ದೇನೆ'' ಅಂತ ಹೇಳಿದ ಸಂಜನಾ ಮೇಕಿಂಗ್ ಫೋಟೋ ತೋರಿಸಿದರು.

ನಗ್ನ ದೃಶ್ಯದ ಬಗ್ಗೆ ಹೊಸ 'ಬಾಂಬ್' ಸಿಡಿಸಿದ ನಟಿ ಸಂಜನಾ

ಬೋಲ್ಡ್ ಶಾಟ್ ಅಂತ ಗೊತ್ತಿತ್ತು

''ಇದು ಒಂದು ರಿಯಲಿಸ್ಟಿಕ್ ಮೂವಿ. ಒಬ್ಬ ನಟಿಯಾಗಿ ನನಗೆ ಇದು ಬೋಲ್ಡ್ ಶಾಟ್ ಅಂತ ಗೊತ್ತಿತ್ತು. ಆದರೆ ಆ ಸೀನ್ ಬ್ಲರ್ ಆಗುತ್ತೆ ಅಂತ ಅಂದುಕೊಂಡಿದೆ. ಇಷ್ಟು ಕೆಟ್ಟದಾಗಿ CG ಮಾಡುತ್ತಾರೆ ಅಂತ ಗೊತ್ತಿರಲಿಲ್ಲ'' - ಸಂಜನಾ, ನಟಿ

ಸಿನಿಮಾ ನೋಡಿರಲಿಲ್ಲ

''ನಾನು ಈ ಸಿನಿಮಾಗೆ ಡಬ್ಬಿಂಗ್ ಮಾಡಿಲ್ಲ. ಹಾಗಾಗಿ ಸಿನಿಮಾವನ್ನು ನಾನು ಮೊದಲೇ ನೋಡಿಲ್ಲ. ಆದರೆ ಚಿತ್ರದ ಪ್ರೆಸ್ ಮೀಟ್ ನಲ್ಲಿ ಸಹ ನಿರ್ದೇಶಕರೊಬ್ಬರು ಆ ದೃಶ್ಯವನ್ನು ಅವರ ಮೊಬೈಲ್ ನಲ್ಲಿ ತೋರಿಸಿದರು. ಆಗ ಈ ದೃಶ್ಯ ಸೆನ್ಸಾರ್ ನಲ್ಲಿ ಕಟ್ ಆಗಿದೆ ಅಂತ ಸಮಾಧಾನವಾಗಿದ್ದೆ'' - ಸಂಜನಾ, ನಟಿ

'ದಂಡುಪಾಳ್ಯ-2' ಚಿತ್ರದಲ್ಲಿ ಸಂಜನಾ ಬೆತ್ತಲಾಗಿಲ್ಲ, ಸಾಕ್ಷಿ ಇಲ್ಲಿದೆ

ಚಿತ್ರೀಕರಣದ ವೇಳೆ

''ಈ ದೃಶ್ಯವನ್ನು ಚಿತ್ರೀಕರಿಸುವಾಗ ನಿರ್ದೇಶಕರು, ಸಹ ನಿರ್ದೇಶಕ, ಕ್ಯಾಮರಾ ಮ್ಯಾನ್, ರವಿಶಂಕರ್ ಮತ್ತು ನಾನು ಅಷ್ಟೆ ಇದ್ದಿದ್ದು. ಹೇಗೆ ಈ ದೃಶ್ಯ ಲೀಕ್ ಆಯ್ತು ಅಂತ ನಮಗೆ ಗೊತ್ತಾಗಿಲ್ಲ'' - ಸಂಜನಾ, ನಟಿ

ಫಿಲ್ಮ್ ಚೆಂಬರ್ ನಲ್ಲಿ ದೂರು

''ಸಿನಿಮಾ ಚೆನ್ನಾಗಿ ಓಡುತ್ತಿದೆ. ಸೋ, ಪಬ್ಲಿಸಿಟಿಗಾಗಿ ಈ ರೀತಿ ಮಾಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಫಿಲ್ಮ್ ಚೆಂಬರ್ ನಲ್ಲಿ ನಾನು ದೂರು ನೀಡುತ್ತೇನೆ'' - ಸಂಜನಾ, ನಟಿ

English summary
Kannada Actress Sanjjanaa Galrani Gives Clarification About Her leaked video Controversy In 'Dandupalya 2' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada