»   » 'ಮೈಲಾರಿ' ನಂತ್ರ 'ಕಬೀರ'ನ ಜೊತೆ ಕುಣಿದ ಬೆಡಗಿ

'ಮೈಲಾರಿ' ನಂತ್ರ 'ಕಬೀರ'ನ ಜೊತೆ ಕುಣಿದ ಬೆಡಗಿ

Posted By:
Subscribe to Filmibeat Kannada

ನಟಿ ಸಂಜನಾ ಗಲ್ರಾನಿ ಸದ್ಯದಲ್ಲೇ ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆ ಅಂತ ಹೇಳಿದ್ದರು. ಆ ಸ್ಪೋಟಕ ಸುದ್ದಿ ಏನು ಅಂತ ಈಗ ಬಹಿರಂಗವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿ ಸಂಜನಾ ನಟಿಸುತ್ತಿದ್ದಾರೆ!

ಹಾಗಂದ ಮಾತ್ರಕ್ಕೆ ಶಿವಣ್ಣನಿಗೆ ನಟಿ ಸಂಜನಾ ಜೋಡಿಯಾಗುತ್ತಿಲ್ಲ. ಹಾಡೊಂದರಲ್ಲಿ ಶಿವಣ್ಣನ ಜೊತೆಯಾಗಲಿದ್ದಾರೆ ಸಂಜನಾ. ಅಲ್ಲಿಗೆ, ಇದು ಐಟಂ ಸಾಂಗ್ ಇರಬೇಕು ಅಂತ ಲೆಕ್ಕ ಹಾಕಬೇಡಿ. ಯಾಕಂದ್ರೆ, ಇದು ಕಂಪ್ಲೀಟ್ ಸ್ಪೆಷಲ್ ಕಮ್ ಟ್ರೆಡಿಷನಲ್ ಸಾಂಗ್.

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಚಿತ್ರೀಕರಣ ಈಗಾಗಲೇ ಸದ್ದಿಲ್ಲದೇ ಶುರುವಾಗಿದೆ. ಈ ಚಿತ್ರದ ವಿಶೇಷ ಹಾಡಿಗೆ ಸಂಜನಾ ಸೊಂಟ ಕುಲುಕಿಸಲಿದ್ದಾರೆ. [ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ]

sanjana-shiv rajkumar

ಎಂಥ ವಿಶೇಷ ಅಂದ್ರೆ, ಒಮ್ಮೆ ನೀವು 'ಉಮ್ರಾವೋ ಜಾನ್' ಚಿತ್ರದ ನಟಿ ರೇಖಾ ಪಾತ್ರವನ್ನ ನೆನಪಿಸಿಕೊಳ್ಳಿ. ರಾಜರ ಆಸ್ಥಾನದ ನರ್ತಕಿಯಾಗಿ ನಟಿ ಸಂಜನಾ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಥೇಟ್ ಬಾಲಿವುಡ್ ನಟಿ ರೇಖಾರಂತೆ ಹೆಜ್ಜೆ ಹಾಕಲಿದ್ದಾರೆ.

''ದೆಹಲಿ ಸುಲ್ತಾನ ಸಿಖಂದರ್ ಲೋಧಿ ಆಸ್ಥಾನದಲ್ಲಿ ಕಬೀರ್ ದಾಸ್ ರವರ 'ಹಮ್ ಇಷ್ಕ್ ದಿವಾನೇ' ದೋಹಾ ಪಠಣವಾಗುತ್ತೆ. ಅದನ್ನ ನಾವು ಸಾಂಗ್ ಮಾಡಿಕೊಂಡಿದ್ದೇವೆ. ಅದಕ್ಕೆ ನಟಿ ಸಂಜನಾ ಡ್ಯಾನ್ಸ್ ಮಾಡುತ್ತಿದ್ದಾರೆ'' ಅಂತ ನಿರ್ದೇಶಕ ನರೇಂದ್ರ ಬಾಬು (ಇಂದ್ರ ಬಾಬು) 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದರು. [ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್]

ಕೆ.ಆರ್.ಎಸ್ ನಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದೆಹಲಿ ಸುಲ್ತಾನರ ಆಸ್ಥಾನದ ಸೆಟ್ ಹಾಕಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಇನ್ನಷ್ಟು ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Actress Sanjjanaa Galrani is roped in for Special Number in Hat-Trick Hero Shivarajkumar starrer 'Santheyalli Ninta Kabira'. The movie is directed by Narendra Babu (Indra Babu) of 'Kabbadi' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada