»   » ಸಂಜನಾ ಬೆತ್ತಲೆ ವಿಡಿಯೋ ವಿವಾದಕ್ಕೆ ಹೊಸ ಟ್ವಿಸ್ಟ್!

ಸಂಜನಾ ಬೆತ್ತಲೆ ವಿಡಿಯೋ ವಿವಾದಕ್ಕೆ ಹೊಸ ಟ್ವಿಸ್ಟ್!

Posted By:
Subscribe to Filmibeat Kannada

'ದಂಡುಪಾಳ್ಯ 2' ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಬೆತ್ತಲೆ ವಿಡಿಯೋ ವಿವಾದ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆಯುತ್ತಿದೆ. ನಗ್ನ ವಿಡಿಯೋ ಬಗ್ಗೆ ಸಂಜನಾ ಮತ್ತು ಚಿತ್ರ ನಿರ್ದೇಶಕರು ಸ್ಪಷ್ಟನೆ ನೀಡಿದ್ದರು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿರವ ಹಿನ್ನೆಲೆ ಈ ವಿವಾದ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಂಜನಾ ಅವರ ಬೆತ್ತಲೆ ವಿಡಿಯೋ ಲೀಕ್ ಆಗಿ ಈಗಾಗಲೇ ಹಲವು ದಿನಗಳಾದರೂ ನಟಿ ಯಾರ ಮೇಲೂ ದೂರು ನೀಡಿಲ್ಲ. ಪ್ರೆಸ್‌ಮೀಟ್‌ನಲ್ಲಿ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದ ಸಂಜನಾ ತಪ್ಪಿತಸ್ಥರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ ದೂರು ನೀಡದ ಸಂಜನಾ, ನಟಿಯಾಗಿ ಬೋಲ್ಡ್ ಪಾತ್ರಗಳನ್ನು ಮಾಡುವುದು ತಪ್ಪೇ? ಎಂದು ಪ್ರಶ್ನಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಯಂಕೃತ ದೂರು ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


ಸ್ವಯಂ ಪ್ರೇರಿತವಾಗಿ ದೂರು ದಾಖಲು

ಸಂಜನಾ ಅವರ ಬೆತ್ತಲೆ ವಿಡಿಯೋ ಲೀಕ್ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೇ ಭಾಯಿ ರವರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಲೀಕ್ ವಿಡಿಯೋ ಬಗ್ಗೆ ತನಿಖೆ ನಡೆಸುವಂತೆ ಸೈಬರ್ ಕ್ರೈಂ ಪೊಲೀಸರಿಗೆ ಪತ್ರ ಬರೆದಿರುವುದು ವರದಿಯಾಗಿದೆ.


ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದು ಹೀಗೆ..

ಸ್ವಯಂ ಕೃತ ದೂರು ದಾಖಲಿಸಿಕೊಂಡಿರುವ ನಾಗಲಕ್ಷ್ಮೇ ರವರು, 'ಸಂಜನಾ ಸ್ವತಃ ಮಾಧ್ಯಮಗಳ ಎದುರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ನನ್ನ ಅರಿವಿಗೆ ಬರದೆ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಈ ರೀತಿ ಆಗಿರುವ ವಿಡಿಯೋ ಎಂದಿದ್ದಾರೆ. ಸೆನ್ಸಾರ್ ಸಮಯದಲ್ಲೇ ನಾನು ಸಿನಿಮಾ ನೋಡಿದ್ದೆ. ಚಿತ್ರದಲ್ಲಿ ಆ ದೃಶ್ಯವೇ ಇರಲಿಲ್ಲ. ದಿಢೀರ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಇದರ ಬಗ್ಗೆ ತನಿಖೆ ಆಗಲೇಬೇಕು' ಎಂದಿದ್ದಾರೆ.


ಶ್ರೀನಿವಾಸ್ ರಾಜು ವಿರುದ್ಧ ಕ್ರಮ:ಕೆಎಫ್‌ಸಿಸಿ

ಇನ್ನು ಈ ವಿವಾದದ ಹಿನ್ನೆಲೆ '2' ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕೆಎಫ್‌ಸಿಸಿ ಅಧ್ಯಕ್ಷರಾದ ಸಾ.ರಾ.ಗೋವಿಂದು ರವರು ಹೇಳಿದ್ದರು. ಅಲ್ಲದೇ ನಿರ್ದೇಶಕರ ಸಂಘದಲ್ಲಿ ಮೀಟಿಂಗ್ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ನಿರ್ದೇಶಕರ ಸಂಘಕ್ಕೆ ಯಾವುದೇ ದೂರುಗಳು ಬಂದಿಲ್ಲ, ಒಂದು ವೇಳೆ ದೂರು ಬಂದಲ್ಲಿ ಮಧ್ಯ ಪ್ರವೇಶ ಮಾಡಬಹುದು ಎಂದು ನಾಗೇಂದ್ರ ಪ್ರಸಾದ್ ರವರು ಹೇಳಿದ್ದಾರೆ.


ಬೆತ್ತಲೆ ವಿಡಿಯೋ ವಿವಾದ ಹಿನ್ನೆಲೆ ಶ್ರೀನಿವಾಸ್ ರಾಜು ವಿರುದ್ಧ ಕ್ರಮ: ಕೆಎಫ್‌ಸಿಸಿ


ಫೇಸ್‌ಬುಕ್ ನಲ್ಲಿಯೂ ಕ್ಲಾರಿಟಿ ಕೊಟ್ಟಿದ್ದ ಸಂಜನಾ

ಬೆತ್ತಲೆ ವಿಡಿಯೋ ಲೀಕ್ ಬಗ್ಗೆ ಸ್ಪಷ್ಟನೆ ನೀಡಿದ್ದ ಸಂಜನಾ ರವರು ಪ್ರೆಸ್ ಮೀಟ್ ಮಾತ್ರವಲ್ಲದೇ ಫೇಸ್‌ಬುಕ್ ನಲ್ಲಿ ಬರೆದು ಸಹ ಕ್ಲಾರಿಟಿ ನೀಡಿದ್ದರು. ''ಜೇಮ್ಸ್ ಬಾಂಡ್ ಚಿತ್ರವಾಗಿದ್ದರೂ ಕೂಡ ನಾನು ಯಾವುದೇ ಕಾರಣಕ್ಕೂ ನೂರಕ್ಕೆ ನೂರರಷ್ಟು ನಗ್ನವಾಗಿ ಅಭಿನಯಿಸುತ್ತಿರಲಿಲ್ಲ. ಅಂತಹ ದೃಶ್ಯದ ಚಿತ್ರೀಕರಣಕ್ಕೂ ನಾನು ಸಮ್ಮತಿಸುವುದಿಲ್ಲ. 'ದಂಡುಪಾಳ್ಯ' ಚಿತ್ರದ ದೃಶ್ಯ ನನ್ನ ಅರಿವಿಗೆ ಬಾರದೆ, ಕಂಪ್ಯೂಟರ್ ಗ್ರಾಫಿಕ್ಸ್ ಪರಿಣಾಮವಾಗಿದೆ ಆಗಿರುವುದು" ಎಂದಿದ್ದರು. ಈ ವಿವಾದ ಇನ್ನು ಯಾವ ರೀತಿ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ನಗ್ನ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಮತ್ತೊಮ್ಮೆ ಕ್ಲಾರಿಟಿ ಕೊಟ್ಟ ಸಂಜನಾ


English summary
Actress Sanjjanaa Galrani Video leak Cotroversy takes new twists.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada