»   » ಅಯ್ಯೋ ಗಂಡ-ಹೆಂಡತಿ ಅನ್ಬೇಡಿ ಅಣ್ಣ-ತಂಗಿ ಅನ್ನಿ!

ಅಯ್ಯೋ ಗಂಡ-ಹೆಂಡತಿ ಅನ್ಬೇಡಿ ಅಣ್ಣ-ತಂಗಿ ಅನ್ನಿ!

Posted By:
Subscribe to Filmibeat Kannada

ತಿಲಕ್ ಮತ್ತು ಸಂಜನಾ ಹಾಟ್ ಜೋಡಿ ಗೊತ್ತಲ್ವಾ? ಅದೇರಿ ಗಂಡ ಹೆಂಡತಿ ಅನ್ನೋ ಚಿತ್ರದಲ್ಲಿ ಇಬ್ಬರೂ ಮೈಚಳಿ ಬಿಟ್ಟು ನಟಿಸಿ, ಕುಣಿದು ಕುಪ್ಪಳಿಸಿ ಪಡ್ಡೆಗಳಿಗೆ ಮತ್ತೇರಿಸಿದ ಚಿತ್ರ. 2006ರಲ್ಲಿ ಬಿಡುಗಡೆಯಾದ ಆ ಚಿತ್ರದ ಕೆಲವೊಂದು ದೃಶ್ಯಗಳ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇದೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳಲ್ಲಿ ಒಬ್ಬರಾದ ತಿಲಕ್ ಅನ್ನು ಕನ್ನಡದ ಇಮ್ರಾನ್ ಹಸ್ಮಿ ಅಂದಿದ್ದೂ ಉಂಟು. ಅದಕ್ಕೆ ತಿಲಕ್ ತುಂಟ ನಗು ಬೀರಿದ್ದೂ ಉಂಟು, ಸಂಜನಾ ನಾಚಿಕೊಂಡಿದ್ದೂ ಹೌದು.

ಗಂಡ ಹೆಂಡತಿ ಚಿತ್ರದ ನಂತರ ಇಬ್ಬರೂ ಮತ್ತೆ ಜೊತೆಯಾಗಿ ನಟಿಸಲಿಲ್ಲ. ಆಮೇಲೆ ಇಬ್ಬರೂ ಬಿಗ್ ಬಾಸ್ ಸ್ಪರ್ಧಿಗಳಾಗಿ ಕಾಣಿಸಿಕೊಂಡಾಗ ವೀಕ್ಷಕರು ಮತ್ತೆ ಕುತೂಹಲದಿಂದ ನೋಡುವಂತಾಯಿತು. ಆದರೆ ಗಂಡ ಹೆಂಡತಿ ಚಿತ್ರದ work experience ಅನ್ನೋದು ಇರೋದ್ರಿಂದ ಬಿಗ್ ಬಾಸ್ ಸೆಟ್ ನಲ್ಲಿ ಇಬ್ಬರೂ ಅನುಕೂಲಕವಾಗಿ ಇರಲಾಗಲಿಲ್ಲ.

'ಸಿನಿಮಾದಲ್ಲಿ ನಿಮ್ಮ ಜೊತೆ ಎಲ್ಲಾ ಆಗಿ ಹೋಗಿದೆ, ಇನ್ನೇನಿದೆ' ಎಂದು ತಿಲಕ್ ಹೇಳಿದ ಮಾತು ಸಂಜನಾಳ ಪಿತ್ತವನ್ನು ನೆತ್ತಿಗೇರಿಸಿತ್ತು. ನಂತರ ಇಬ್ಬರೂ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದರು. ಆದರೆ ಸಂಜನಾ ಒನ್ ಇಂಡಿಯಾದ ಜೊತೆ ಮಾತನಾಡುತ್ತಾ ತಿಲಕ್ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು.

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಇಬ್ಬರೂ

ಬಿಗ್ ಬಾಸ್ ಆಹ್ವಾನದ ಮೇರೆಗೆ ಮತ್ತೆ ಸಂಜನಾ ಮತ್ತು ತಿಲಕ್ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ್ದರು. ಸುದೀಪ್ ಎಂದಿನಂತೆ ನಿಮ್ಮ ಮತ್ತು ತಿಲಕ್ ನಡುವಣ ಸ್ನೇಹ ಈಗ ಹೇಗಿದೆ. ಇಬ್ಬರೂ ಹಳೆದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದರು.

ಸಂಜನಾ ಪ್ರತಿಕ್ರಿಯೆ

ಸಂಜನಾ ಇದಕ್ಕೆ ಉತ್ತರಿಸಿದ ರೀತಿ ಆಶ್ಚರ್ಯವಾಗಿತ್ತು. ಆಗಿದ್ದೆನ್ನೆಲ್ಲಾ ಮರೆತಿದ್ದೇನೆ. ಗಂಡ-ಹೆಂಡತಿ ಅನ್ಬೇಡಿ ಅಣ್ಣ-ತಂಗಿ ಅನ್ನಿ! ತಿಲಕ್ ನನಗೀಗ ಅಣ್ಣನ ಸಮಾನ. ತಿಲಕ್ ಈಸ್ ಮೈ ಬ್ರದರ್ ಎಂದು ಸುದೀಪ್ ಮುಂದೆ, ಲಕ್ಷಾಂತರ ಟಿವಿ ವೀಕ್ಷಕರ ಮುಂದೆ ಘೋಷಿಸಿಯೇ ಬಿಟ್ಟರು.

ತಿಲಕ್ ಏನಂತಾರೆ?

ಸಂಜನಾ ಈ ಹೇಳಿಕೆಗೆ ತಿಲಕ್ ಪ್ರತಿಕ್ರಿಯೆ ಕೂಡಾ ಆಶಾದಾಯಕವಾಗಿತ್ತು. ಸಂಜನಾ ಹೇಳಿಕೆಗೆ ಸಹಮತ ವ್ಯಕ್ತ ಪಡಿಸಿದರು.

ಸಂಜನಾ ಸಂದರ್ಶನದ ಸಮಯದಲ್ಲಿ

'ಸಿನಿಮಾದಲ್ಲಿ ನಿಮ್ಮ ಜೊತೆ ಎಲ್ಲಾ ಆಗಿ ಹೋಗಿದೆ, ಇನ್ನೇನಿದೆ' ಎನ್ನುವ ಹೇಳಿಕೆಗೆ ಮಹಿಳಾ ಸಂಘಟನೆಗಳೂ ಆಕ್ರೋಶ ವ್ಯಕ್ತ ಪಡಿಸಿದ್ದರು. ಅಲ್ಲೇ ತಿಲಕ್ ಕಪಾಳಕ್ಕೆ ಬಿಗಿಯ ಬೇಕಾಗಿತ್ತು ಎಂದು ಸಲಹೆ ನೀಡಿದ್ದರು. ನಾನು ತಿಲಕ್ ಅನ್ನು ಒಳ್ಳೆ ಫ್ರೆಂಡ್ ಅಂದು ಕೊಂಡಿದ್ದೆ ಎಂದು ಒನ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ಸಂಜನಾ ಹೇಳಿದ್ದರು.

ಸಂಜನಾ

ನಾನು ಇಂದು ಈ ಮಟ್ಟಕ್ಕೆ ಬೆಳೆಯ ಬೇಕಾದರೆ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಅದನ್ನು ತಿಲಕ್ ಗೌರವಿಸಬೇಕು. ಏಳು ವರ್ಷದ ಹಿಂದೆ ಮಾಡಿದ ಚಿತ್ರವನ್ನು ಮತ್ತೆ ಕೆದಕಬಾರದು ಎಂದು ಸಂಜನಾ ಬೇಸರ ವ್ಯಕ್ತ ಪಡಿಸಿದ್ದರು.

English summary
Sanjjanna and Thilak were seen together at one platform at the grand finale of Bigg Boss. Sanjjanna said that Thilak was like her brother and she has left the bitter memory behind.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada