»   » ಸುದೀಪ್ ಸಿನಿಮಾ ಬಗ್ಗೆ 'ರಾಜಕುಮಾರ' ನಿರ್ದೇಶಕ ಸಂತೋಷ್ ಮಾತು!

ಸುದೀಪ್ ಸಿನಿಮಾ ಬಗ್ಗೆ 'ರಾಜಕುಮಾರ' ನಿರ್ದೇಶಕ ಸಂತೋಷ್ ಮಾತು!

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್ ಡೈರೆಕ್ಟರ್ ಅಂತ ಕರೆಸಿಕೊಂಡಿದ್ದಾರೆ. ಮೊದಲು ಯಶ್ ನಂತರ ಪುನೀತ್ ಜೊತೆ ಸಿನಿಮಾ ಮಾಡಿದ್ದ ಸಂತೋಷ್ ಈಗ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳಿಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

ಮುಂದಿನ ಚಿತ್ರದ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ರಾಜಕುಮಾರ' ನಿರ್ದೇಶಕ ಸಂತೋಷ್

ಈಗ ಸ್ವತಃ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. ಸುದೀಪ್ ಅವರ ಜೊತೆ ಸಿನಿಮಾ ಮಾಡುವ ಸುದ್ದಿಯ ಬಗ್ಗೆ ಸಂತೋಷ್ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ. ತಮ್ಮ ಮಾತುಗಳ ಮೂಲಕ ಎಲ್ಲ ಅಂತೆಕಂತೆಗಳಿಗೆ ಸಂತೋಷ್ ಬ್ರೇಕ್ ಹಾಕಿದ್ದಾರೆ. ಮುಂದೆ ಓದಿ...

ನನ್ನ ಗಮನಕ್ಕೆ ಬಂದಿದೆ

''ನನ್ನ ಮತ್ತು ಸುದೀಪ್ ಅವರ ಸಿನಿಮಾ ಬಗ್ಗೆ ಸುದ್ದಿ ಹರಿದಾಡಿದೆ. ಆದು ನಿಜ ಆಗಿದ್ದರೆ ನಾನೇ ಹೇಳುತ್ತಿದೆ. ಈ ಸುದ್ದಿ ನಿಜ ಅಲ್ಲ.. ಆದ್ದರಿಂದ ನಾನು ಈ ವಿಷಯಕ್ಕೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ'' ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ಹೇಳಿದರು

ನನ್ನ ಸಿನಿಮಾ ಅಲ್ಲ

''ಹೊಂಬಾಳೆ ಫಿಲ್ಮ್ಸ್ ಅವರಿಗೆ ಸುದೀಪ್ ಅವರ ಜೊತೆ ಸಿನಿಮಾ ಮಾಡುವ ಪ್ಲಾನ್ ಇದೆ. ಸುದೀಪ್ ಅವರು ಕೂಡ ಹೊಂಬಾಳೆ ಬ್ಯಾನರ್ ನಲ್ಲಿ ಸಿನಿಮಾ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಆದರೆ ಅದು ನನ್ನ ಸಿನಿಮಾ ಅಲ್ಲ'' - ಸಂತೋಷ್ ಆನಂದ್ ರಾಮ್, ನಿರ್ದೇಶಕ

ಅದು ದೊಡ್ಡ ಜವಾಬ್ದಾರಿ

''ಮುಂದೆ ಸುದೀಪ್ ಅವರಿಗೆ ಸಿನಿಮಾ ಮಾಡುವ ಯೋಜನೆ ಇದೆ. ಆದರೆ ಅವರು ಇನ್ನೂ ಕಥೆ ಓಕೆ ಮಾಡಬೇಕು.. ಅವರ ಡೇಟ್ಸ್ ನೋಡಿಕೊಳ್ಳಬೇಕು.. ಸುದೀಪ್ ಅವರಿಗೆ ಸಿನಿಮಾ ಮಾಡುವುದು ತುಂಬ ದೊಡ್ಡ ಜವಾಬ್ದಾರಿ. ಯಾಕಂದ್ರೆ ಐದಾರು ರಾಜ್ಯಗಳಿಗೆ ಗೊತ್ತಿರುವ ನಟ ಅವರು'' - ಸಂತೋಷ್ ಆನಂದ್ ರಾಮ್, ನಿರ್ದೇಶಕ

ಆಸೆ ಇಬ್ಬರಿಗೂ ಇದೆ

''ನನಗೆ ಸುದೀಪ್ ಅವರ ಜೊತೆ ಕೆಲಸ ಮಾಡುವ ಆಸೆ ಇದೆ. ಅವರು ಕೂಡ ಅದಕ್ಕೆ ಒಪ್ಪಿದ್ದಾರೆ. ಆದರೆ ಆದು ಯಾವಾಗ ಶುರು ಆಗುತ್ತದೆ ಎಂಬುದು ಗೊತ್ತಿಲ್ಲ. ಒಟ್ಟಿಗೆ ಸಿನಿಮಾ ಮಾಡುವ ಆಸೆ ಇಬ್ಬರಿಗೂ ಇದೆ. ಆದರೆ ಅದಕ್ಕೆ ಟೈಂ ಕೂಡಿ ಬರಬೇಕು, ಕಥೆ ಸರಿಯಾಗಿ ಸಿಗಬೇಕು'' - ಸಂತೋಷ್ ಆನಂದ್ ರಾಮ್, ನಿರ್ದೇಶಕ

ಮುಂದಿನ ಸಿನಿಮಾ

''ಸದ್ಯಕ್ಕೆ ನಾನು ಹೊಂಬಾಳೆ ಫಿಲ್ಮ್ ಬ್ಯಾನರ್ ಗೆ ಸಿನಿಮಾ ಮಾಡುತ್ತೇನೆ ಆ ಸಿನಿಮಾದ ನಾಯಕ ಇನ್ನೂ ಯಾರು ಎಂಬುದು ಫೈನಲ್ ಆಗಿಲ್ಲ. ಕಥೆ ರೆಡಿ ಆದ ಮೇಲೆ ಯಾರನ್ನು ಹೀರೋ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ'' - ಸಂತೋಷ್ ಆನಂದ್ ರಾಮ್, ನಿರ್ದೇಶಕ

English summary
Kannada Director 'Santhosh Ananddram' gave clarity about his and Sudeep combination movie gossip.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada