For Quick Alerts
  ALLOW NOTIFICATIONS  
  For Daily Alerts

  ರಾಜಕುಮಾರ ನಂತರ 'ಯಜಮಾನ'ನಿಗೆ ಹಾಡು ಬರೆದ ಸಂತೋಷ್

  |
  Yajamana movie : ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಂತೋಷ್ ಆನಂದ್ ರಾಮ್ | FILMIBEAT KANNADA

  ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿ ಕನ್ನಡದ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಈಗ ಪುನೀತ್ ರಾಜ್ ಕುಮಾರ್ ಜೊತೆ ಯುವರತ್ನ ಸಿನಿಮಾ ಮಾಡ್ತಿದ್ದಾರೆ.

  ಅಪ್ಪು ಜೊತೆ ಎರಡನೇ ಸಿನಿಮಾ ಮಾಡ್ತಿದ್ದು, ಮುಂದಿನ ಸಿನಿಮಾ ಯಾರ ಜೊತೆ ಎಂಬುದು ಈಗಲೇ ಕುತೂಹಲ ಮೂಡಿಸಿದೆ. ರಾಜಕುಮಾರ ಸಿನಿಮಾ ಹಿಟ್ ಆಗುತ್ತಿದ್ದಂತೆ ನಮ್ಮ ಬಾಸ್ ಗೆ ಸಿನಿಮಾ ಮಾಡಿ, ನಮ್ ಬಾಸ್ ಗೆ ಸಿನಿಮಾ ಮಾಡಿ ಎಂದು ದರ್ಶನ್, ಸುದೀಪ್, ಶಿವಣ್ಣ ಅಭಿಮಾನಿಗಳು ಮನವಿ ಮಾಡ್ತಿದ್ರು.

  ದರ್ಶನ್ 'ಪಾಶುಪತಾಸ್ತ್ರ'ದ ಹಿಂದೆ ರಾಜಕೀಯ.!

  ಎಲ್ಲರ ಜೊತೆಯಲ್ಲೂ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದ ಸಂತೋಷ್ ಆನಂದ್ ರಾಮ್ ಈಗ, ಮೊದಲ ಹೆಜ್ಜೆ ಎಂಬಂತೆ ಡಿ ಬಾಸ್ ಭಕ್ತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಏನದು? ಮುಂದೆ ಓದಿ....

  ದರ್ಶನ್ ಗೆ ಹಾಡು ಬರೆದ ಸಂತೋಷ್

  ದರ್ಶನ್ ಗೆ ಹಾಡು ಬರೆದ ಸಂತೋಷ್

  ಸಂತೋಷ್ ಆನಂದ್ ರಾಮ್ ಅವರು ದರ್ಶನ್ ಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿ ವಲಯದಲ್ಲಿ ಬೇಡಿಕೆ ಹೆಚ್ಚಿದೆ. ಅದು ಮುಂದಿನ ದಿನದಲ್ಲಿ ಆಗುತ್ತೆ ಎಂದು ಸ್ವತಃ ಸಂತೋಷ್ ಹೇಳಿದ್ದರು. ಈಗ ದರ್ಶನ್ ಚಿತ್ರವೊಂದಕ್ಕೆ ಹಾಡು ಬರೆಯುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್ ಮುಂದೆ ಇವರಿಬ್ಬರ ಜೋಡಿಯಲ್ಲಿ ಸಿನಿಮಾ ಬರುತ್ತೆ ಎಂದು ಈಗಲೇ ಲೆಕ್ಕಾಚಾರ ಹಾಕ್ತಿದ್ದಾರೆ.

  'ಯಜಮಾನ'ನ ಬಸಣ್ಣಿ ಹಾಡಿಗೆ ಭಾವ ತುಂಬಿದ್ದು ಈ ಹುಡುಗಿಯೇ!

  'ಯಜಮಾನ'ದಲ್ಲಿದೆ ಸಂತೋಷ್ ಹಾಡು

  'ಯಜಮಾನ'ದಲ್ಲಿದೆ ಸಂತೋಷ್ ಹಾಡು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಸಂತೋಷ್ ಆನಂದ್ ರಾಮ್ ಅವರ ಹಾಡಿದೆ. ಈಗಾಗಲೇ ಯೋಗರಾಜ್ ಭಟ್, ಕವಿರಾಜ್, ಚೇತನ್ ಕುಮಾರ್ ಅವರು ಬರೆದಿರುವ ಹಾಡು ರಿಲೀಸ್ ಆಗಿದೆ. ಈಗ ಸಂತೋಷ್ ಆನಂದ್ ರಾಮ್ ಬರೆದಿರುವ ಹಾಡು ತೆರೆಕಾಣಬೇಕಿದೆ.

  ದರ್ಶನ್ ದಾಖಲೆಯನ್ನ ಸ್ವತಃ ದರ್ಶನ್ ಬ್ರೇಕ್ ಮಾಡಿದ್ರು.!

  ಹಿಟ್ ಹಾಡುಗಳನ್ನೇ ನೀಡಿರುವ ಸಂತೋಷ್

  ಹಿಟ್ ಹಾಡುಗಳನ್ನೇ ನೀಡಿರುವ ಸಂತೋಷ್

  ಇದಕ್ಕೂ ಮುಂಚೆ ಸಂತೋಷ್ ಆನಂದ್ ರಾಮ್ ಕೆಲವು ಹಾಡುಗಳನ್ನ ಬರೆದಿದ್ದು, ಎಲ್ಲವೂ ಸೂಪರ್ ಹಿಟ್ ಆಗಿದೆ. ರಾಜಕುಮಾರ ಚಿತ್ರದ 'ಬೊಂಬೆ ಹೇಳುತೈತೆ......' ಹಾಗೂ ರಾಮಾಚಾರಿ ಚಿತ್ರದ 'ಯಾರಲ್ಲಿ ಸೌಂಡು ಮಾಡೋದು....' ಹಾಡುಗಳನ್ನ ಇವರೇ ಬರೆದಿರುವುದು.

  ಯೋಗರಾಜ್ ಭಟ್ ಸರ್ ನೀವು ಹಾಕೋ 'ಗುಂಡು' ಯಾವುದು?

  ನಾಲ್ಕನೇ ಹಾಡು ಇದೇ ಇರಬಹುದು

  ನಾಲ್ಕನೇ ಹಾಡು ಇದೇ ಇರಬಹುದು

  ಸದ್ಯ ಯಜಮಾನ ಚಿತ್ರತಂಡ ಮೂರು ಹಾಡುಗಳನ್ನ ರಿಲೀಸ್ ಮಾಡಿದೆ. ಮೂರು ಹಾಡು ಕೂಡ ಸೂಪರ್ ಸಕ್ಸಸ್ ಕಂಡಿದೆ. ಮುಂದಿನ ಸಾಂಗ್ ಯಾವಾಗ ಎಂದು ಕಾಯ್ತಿದ್ದಾರೆ ಡಿ ಬಾಸ್ ಭಕ್ತರು. ಬಹುಶಃ ಸಂತೋಷ್ ಹಾಗೂ ದರ್ಶನ್ ಕಾಂಬಿನೇಷನ್ ಹಾಡೇ ನಾಲ್ಕನೇಯದು ಇರಬಹುದು. ಬಟ್, ಕಾದು ನೋಡಬೇಕಿದೆ.

  ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

  ಪೋಸ್ಟರ್ ಹೇಳುತ್ತಿದೆ

  ಪೋಸ್ಟರ್ ಹೇಳುತ್ತಿದೆ

  ಅಷ್ಟಕ್ಕೂ ಈ ವಿಷ್ಯ ಹೇಗೆ ಗೊತ್ತಾಯಿತು ಎಂದು ಕೇಳಿದ್ರೆ, ಚಿತ್ರದ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟರ್ ನಲ್ಲಿ ಚಿತ್ರ ಸಾಹಿತಿಗಳ ಹೆಸರು ಒಟ್ಟಿಗೆ ಹಾಕಲಾಗಿದೆ. ಇದರಲ್ಲಿ ಸಂತೋಷ್ ಆನಂದ್ ರಾಮ್ ಹೆಸರು ಕೂಡ ಇದೆ. ಅಲ್ಲಿಗೆ ಯಜಮಾನ ಚಿತ್ರಕ್ಕೆ ಸಂತೋಷ್ ಸಾಹಿತ್ಯ ಬರೆದಿದ್ದಾರೆ ಎನ್ನುವುದು ಪಕ್ಕಾ.

  ಕನ್ನಡದ ಯಾವ ಹಾಡು ಮಾಡದ ದಾಖಲೆ ಬರೆದ 'ಯಜಮಾನ'

  English summary
  Director Santhosh ananddram has give good news for d boss darshan fans. rajakumara director has wrote song for darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X