For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

  |

  ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ದುಬಾರಿ ಕಾರು ಖಾರೀದಿಯ ಹಿಂದೆ ಬಿದ್ದಿದ್ದಾರೆ. ಇತ್ತೀಚಿಗಷ್ಟೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ, ನಟ ಶೈನ್ ಶೆಟ್ಟಿ ಮತ್ತು ನಟಿ ಮೇಘಾ ಶೆಟ್ಟಿ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದರು. ಇವರೆಲ್ಲ ಕಾರು ಖರೀದಿಸಿದ ಬೆನ್ನಲ್ಲೇ ಇದೀಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ದುಬಾರಿ ಕಾರು ಕೊಂಡುಕೊಂಡಿರುವ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  ಸಂತೋಷ ಆನಂದ್ ರಾಮ್ ಮನೆಗೆ ಬಂದ ಹೊಸ ಅಥಿತಿ

  ಅಂದಹಾಗೆ ಸಂತೋಷ್ ಆನಂದ್ ರಾಮ್ ಮನೆಗೆ ಆಗಮಿಸಿದ ದುಬಾರಿ ಕಾರು ಬಿಎಂಡಬ್ಲ್ಯೂ 520ಡಿ. ಬಿಳಿ ಬಣ್ಣದ ಬಿಎಂಡಬ್ಲ್ಯೂ 520ಡಿ ಕಾರಿನ ಫೋಟೋವನ್ನು ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಕುಟುಂಬದ ಜೊತೆ ಆಗಮಿಸಿ ಕಾರು ಖರೀದಿ ಮಾಡಿದ ಸಂತೋಷ್ ಆನಂದ್ ರಾಮ್ ಕಾರಿನ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಮುಂದೆ ಓದಿ..

  ಸಂತಸ ಹಂಚಿಕೊಂಡ ಸಂತೋಷ್ ಆನಂದ್ ರಾಮ್

  ಸಂತಸ ಹಂಚಿಕೊಂಡ ಸಂತೋಷ್ ಆನಂದ್ ರಾಮ್

  ಫೋಟೋದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆ-ತಾಯಿ ಪತ್ನಿ ಮತ್ತು ಮುದ್ದಾದ ಮಗು ಸೇರಿದಂತೆ ಇಡೀ ಕುಟುಂಬ ಜೊತೆಯಲ್ಲಿದೆ. ಫೋಟೋ ಜೊತೆಗೆ ಬಿಎಂಡಬ್ಲ್ಯೂ 520ಡಿಗೆ ಮನೆಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಇನ್ನು ವಿಶ್ ಮಾಡಿದ ಎಲ್ಲರಿಗೂ ಸಂತೋಷ್ ಆನಂದ್ ರಾಮ್ ಧನ್ಯವಾದ ತಿಳಿಸಿದ್ದಾರೆ.

  ಸಂತೋಷ್ ಆನಂದ್ ಸಿನಿಮಾಗಳು

  ಸಂತೋಷ್ ಆನಂದ್ ಸಿನಿಮಾಗಳು

  ನಿರ್ದೇಶಕ ಸಂತೋಷ್ ಆನಂದ್ ರಾಮ್, ರಾಕಿಂಗ್ ಸ್ಟಾರ್ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡರು. ಬಳಿಕ ಪವರ್ ಸ್ಟಾರ್ ಜೊತೆ ರಾಜಕುಮಾರ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಈ ಸಿನಿಮಾ ಬಳಿಕ ಸಂತೋಷ್ ಆನಂದ್ ಮತ್ತೆ ಪುನೀತ್ ರಾಜ್ ಕುಮಾರ್ ಜೊತೆ ಯವರತ್ನ ಸಿನಿಮಾ ಮಾಡಿದರು. ಈ ವರ್ಷ ತೆರೆಗೆ ಬಿಡಿಗಡೆಯಾದಿ. ಯುವರತ್ನ ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಕೊರೊನಾ ಹೆಚ್ಚಾದ ಪರಿಣಾಮ ಚಿತ್ರಮಂದಿರಗಳನ್ನು ಬಂದ್ ಮಾಡಲಾಯಿತು. ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಯಿತು.

  ಕುತೂಹಲ ಮೂಡಿಸಿದ ಮುಂದಿನ ಸಿನಿಮಾ

  ಕುತೂಹಲ ಮೂಡಿಸಿದ ಮುಂದಿನ ಸಿನಿಮಾ

  ಯುವರತ್ನ ಸಿನಿಮಾ ಬಳಿಕ ಸಂತೋಷ್ ಆನಂದ್ ರಾಮ್ ಇನ್ನೂ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಸಂತೋಷ್ ಆನಂದ್ ರಾಮ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮೂಲಗಳ ಪ್ರಕಾರ ಮತ್ತೆ ಪುನೀತ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

  ಹೊಸ ಕಾರು ಖರೀದಿಸಿರುವ ರಕ್ಷಿತ್ ಶೆಟ್ಟಿ

  ಹೊಸ ಕಾರು ಖರೀದಿಸಿರುವ ರಕ್ಷಿತ್ ಶೆಟ್ಟಿ

  ಇನ್ನು ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕಾರು ಖರೀದಿ ಮಾಡಿರುವ ವಿಚಾರಕ್ಕೆ ಬರುವುದಾದರೆ, ನಟ ರಕ್ಷಿತ್ ಶೆಟ್ಟಿ ಆಡಿ ಕ್ಯೂ8 ಕಾರನ್ನು ಖರೀದಿ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಕಾರನ್ನು ಖರೀದಿಸಿದ ರಕ್ಷಿತ್, ಹೊಸ ಕಾರಿನ ಫೋಟೋಗಳು ವೈರಲ್ ಆಗಿತ್ತು. ಇನ್ನು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಮೆಘಾ ಶೆಟ್ಟಿ ಸಹ ಎರಡು ಕಾರನ್ನು ಒಟ್ಟಿಗೆ ಖರೀದಿಸುವ ಮೂಲಕ ಸುದ್ದಿಯಾಗಿದ್ದರು.

  ಮೇಘಾ ಶೆಟ್ಟಿ, ಶೈನ್ ಶೆಟ್ಟಿ ಮನೆಗೆ ಆಗಮಿಸಿದ ಹೊಸ ಅತಿಥಿ

  ಮೇಘಾ ಶೆಟ್ಟಿ, ಶೈನ್ ಶೆಟ್ಟಿ ಮನೆಗೆ ಆಗಮಿಸಿದ ಹೊಸ ಅತಿಥಿ

  ಬಿಎಂಬ್ಲ್ಯೂ ಮತ್ತು ಎಂಜಿ ಹೆಕ್ಟರ್ ಎರಡು ಕಾರನ್ನು ಒಂದೇ ದಿನ ಖರೀದಿ ಮಾಡಿದ್ದರು. ಕಾರು ಮನೆಗೆ ಆಗಮಿಸಿದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎರಡು ಕಾರಿನ ಫೋಟೋ ಶೇರ್ ಮಾಡಿ, ಮನೆಗೆ ಸ್ವಾಗತ ಎಂದು ಬರೆದುಕೊಂಡಿದ್ದರು. ಇನ್ನು ಶೈನ್ ಶೆಟ್ಟಿ ಕೂಡ ದುಬಾರಿ ಕಾರು ಖರೀದಿಸಿದ್ದಾರೆ. ನೀಲಿ ಬಣ್ಣದ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ ಫೋಟೋವನ್ನು ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದರು.

  English summary
  Director Santhosh Ananddram purchases new BMW 520d car. He shares photo on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X