For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆ ಈ ಮೊದಲೇ ಕೆಲಸ ಮಾಡಿದ್ರಂತೆ ಸಂತೋಷ್ ಆನಂದ್ ರಾಮ್.!

  |

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾ'ರಿ ಹಾಗೂ 'ರಾಜಕುಮಾರ' ಅಂತಹ ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಈಗ ಪುನೀತ್ ಜೊತೆ 'ಯುವರತ್ನ' ಸಿನಿಮಾ ಮಾಡ್ತಿದ್ದಾರೆ.

  ಈ ನಡುವೆ ದರ್ಶನ್, ಸುದೀಪ್, ಶಿವಣ್ಣ ಅಭಿಮಾನಿಗಳೆಲ್ಲಾ 'ನಮ್ಮ ಬಾಸ್ ಜೊತೆ ಸಿನಿಮಾ ಮಾಡಿ' ಎಂದು ಸಂತೋಷ್ ಆನಂದ್ ರಾಮ್ ಗೆ ಒತ್ತಾಯ ಮಾಡ್ತಿದ್ದಾರೆ.

  ರಾಜಕುಮಾರ ನಂತರ 'ಯಜಮಾನ'ನಿಗೆ ಹಾಡು ಬರೆದ ಸಂತೋಷ್ ರಾಜಕುಮಾರ ನಂತರ 'ಯಜಮಾನ'ನಿಗೆ ಹಾಡು ಬರೆದ ಸಂತೋಷ್

  ದರ್ಶನ್ ಅಭಿನಯದ ಯಜಮಾನ ಚಿತ್ರದ ಟೈಟಲ್ ಹಾಡು ಬರೆದಿರುವ ಸಂತೋಷ್ ಆನಂದ್ ರಾಮ್ ಎಂದು ಗೊತ್ತಾದ ಮೇಲಂತೂ, ಡಿ ಬಾಸ್ ಜೊತೆ ಸಿನಿಮಾ ಮಾಡಿ ಎಂದು ದಚ್ಚು ಬಳಗ ಬೇಡಿಕೆ ಇಡ್ತಿದೆ. ಅನೇಕರಿಗೆ ತಿಳಿದಿದೆಯೋ ಇಲ್ವೋ ಗೊತ್ತಿಲ್ಲ, ಸಂತೋಷ್ ಆನಂದ್ ರಾಮ್ ಈಗಾಗಲೇ ದರ್ಶನ್ ಜೊತೆ ಕೆಲಸ ಮಾಡಿದ್ದಾರೆ. ಯಾವಾಗ? ಮುಂದೆ ಓದಿ.....

  ಚಿಂಗಾರಿ ಚಿತ್ರದಲ್ಲಿ ಸಂತೋಷ್.!

  ಚಿಂಗಾರಿ ಚಿತ್ರದಲ್ಲಿ ಸಂತೋಷ್.!

  ಹರ್ಷ ನಿರ್ದೇಶನ ಹಾಗೂ ಚಾಲೆಂಜಿಂಗ್ ಸ್ಟಾರ್ ನಟನೆಯಲ್ಲಿ ಮೂಡಿ ಬಂದಿದ್ದ ಚಿಂಗಾರಿ ಸಿನಿಮಾ ಎಲ್ಲರಿಗೂ ನೆನಪಿದೆ. ಈ ಸಿನಿಮಾದಲ್ಲಿ ದರ್ಶನ್ ಪೊಲೀಸ್ ಆಗಿದ್ದರು. 2012ರಲ್ಲಿ ತೆರೆಕಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಅನೇಕರಿಗೆ ಗೊತ್ತೋ ಗೊತ್ತಿಲ್ವೋ ಈ ಚಿತ್ರದಲ್ಲಿ ಸಂತೋಷ್ ಆನಂದ್ ರಾಮ್ ಕೆಲಸ ಮಾಡಿದ್ದರಂತೆ.

  'ಯಜಮಾನ' ಟೈಟಲ್ ಹಾಡಿನಲ್ಲಿ ಸರ್ಪ್ರೈಸ್ , ದಿನಾಂಕ ಪ್ರಕಟ 'ಯಜಮಾನ' ಟೈಟಲ್ ಹಾಡಿನಲ್ಲಿ ಸರ್ಪ್ರೈಸ್ , ದಿನಾಂಕ ಪ್ರಕಟ

  ಡೈಲಾಗ್ ರೈಟರ್ ಆಗಿದ್ದ ಸಂತೋಷ್

  ಡೈಲಾಗ್ ರೈಟರ್ ಆಗಿದ್ದ ಸಂತೋಷ್

  ದರ್ಶನ್ ಅಭಿನಯದ ಚಿಂಗಾರಿ ಚಿತ್ರದಲ್ಲಿ ಸಂತೋಷ್ ಆನಂದ್ ರಾಮ್ ಸಹ ಬರಹಗಾರನಾಗಿ ಕೆಲಸ ಮಾಡಿದ್ದರಂತೆ. ಅಂದ್ರೆ, ಈ ಚಿತ್ರಕ್ಕೆ ಸಂತೋಷ್ ಅವರ ಸಂಭಾಷಣೆ ಬರೆದಿದ್ದರಂತೆ. ಅಲ್ಲಿಗೆ ಚಿಂಗಾರಿ ಚಿತ್ರದಲ್ಲಿ ಅನೇಕ ಡೈಲಾಗ್ ಗಳು ಸಂತೋಷ್ ಆನಂದ್ ರಾಮ್ ಬರೆದಿದ್ದು ಎಂಬ ವಿಷ್ಯ ಅನೇಕರಿಗೆ ಈಗ ಗೊತ್ತಾಗಿದೆ.

  ಫೆಬ್ರವರಿ 14 ರಿಂದ 'ಯುವರತ್ನ'ನ ಆಕ್ಷನ್ ಆರಂಭಫೆಬ್ರವರಿ 14 ರಿಂದ 'ಯುವರತ್ನ'ನ ಆಕ್ಷನ್ ಆರಂಭ

  ಯೋಗಾನಂದ್ ಮುದ್ಧಾನ್ ಗೆ ಸಾಥ್ ನೀಡಿದ್ದ ಸಂತು

  ಯೋಗಾನಂದ್ ಮುದ್ಧಾನ್ ಗೆ ಸಾಥ್ ನೀಡಿದ್ದ ಸಂತು

  ಚಿಂಗಾರಿ ಚಿತ್ರಕ್ಕೆ ಯೋಗಾನಂದ್ ಮುದ್ಧಾನ್ ಸಂಭಾಷಣೆ ಬರೆದಿದ್ದರು. ಅವರಿಗೆ ಸಹ ಬರಹಗಾರನಾಗಿ ಸಂತೋಷ್ ಆನಂದ್ ರಾಮ್ ಸಾಥ್ ನೀಡಿದ್ದರು. ಬಹುಶಃ ಆಗ ಯಾರೂ ಕೂಡ ಇವರನ್ನ ಗುರುತಿಸಿರುವುದಿಲ್ಲ. ಈಗ ಈ ವಿಷ್ಯ ಕೇಳಿ ದರ್ಶನ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ಅಂದು ಅಪ್ಪು ಅಭಿಮಾನಿ, ಇಂದು ಜನಪ್ರಿಯ ನಿರ್ದೇಶಕ: ಯಾರಿವರು ಹೇಳಿ.? ಅಂದು ಅಪ್ಪು ಅಭಿಮಾನಿ, ಇಂದು ಜನಪ್ರಿಯ ನಿರ್ದೇಶಕ: ಯಾರಿವರು ಹೇಳಿ.?

  ಡಿ ಬಾಸ್ ಜೊತೆ ಸಿನಿಮಾ ಮಾಡಿ

  ಡಿ ಬಾಸ್ ಜೊತೆ ಸಿನಿಮಾ ಮಾಡಿ

  ಅಂದು ದರ್ಶನ್ ಚಿತ್ರಕ್ಕೆ ಸಂಭಾಷನೆ ಬರೆದಿದ್ದ ಸಂತೋಷ್, ಈಗ ದರ್ಶನ್ ಸಿನಿಮಾಗೆ ಹಾಡು ಬರೆದಿದ್ದಾರೆ. ಆದಷ್ಟೂ ಬೇಗ ಸಿನಿಮಾ ನಿರ್ದೇಶನ ಮಾಡಲಿ ಎಂದು ದರ್ಶನ್ ಭಕ್ತರು ಒತ್ತಾಯ ಮಾಡ್ತಿದ್ದಾರೆ. ಟ್ವಿಟ್ಟರ್, ಫೇಸ್ ಬುಕ್ ಎಲ್ಲ ಕಡೆಯೂ ಈ ಮೆಸೆಜ್ ಗಳು ಸಾಮಾನ್ಯವಾಗಿದೆ.

  English summary
  Mr and mrs ramachari and rajakumara director santhosh anandram has already worked with darshan in chingari movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X