For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

  By Pavithra
  |
  ಸಂತೋಷ್ ಆನಂದ್ ರಾಮ್ ಹಾಗು ಸುರಭಿ ಮದುವೆ ಸಂಭ್ರಮ | Filmibeat Kannada

  ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾಗಳನ್ನ ನಿರ್ದೇಶನ ಮಾಡಿ ಸಕ್ಸಸ್ ಕಂಡ ಸಂತೋಷ್ ಆನಂದ್ ರಾಮ್ ಇಂದು(ಫೆ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡ ಸಂತೋಷ್, ಸುರಭಿ ಜೊತೆಯಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

  ಸ್ಯಾಂಡಲ್ ವುಡ್ ನ ಯಂಗ್ ಟ್ಯಾಲೆಂಟೆಡ್ ನಿರ್ದೇಶಕರ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿರೋ ಡೈರೆಕ್ಟರ್ 'ಸಂತೋಷ್ ಆನಂದ್ ರಾಮ್' ಅವರ ಆರತಕ್ಷತೆಯಲ್ಲಿ ಕನ್ನಡದ ಬಿಗ್ ಸ್ಟಾರ್ ಗಳು ಭಾಗಿ ಆಗಿದ್ದರು.

  ಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದುಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದು

  ಸಂತೋಷ್ ಹಾಗೂ ಸುರಭಿ ಆರತಕ್ಷತೆ ಹೇಗೆ ನಡೆಯಿತು. ಸಿನಿಮಾರಂಗದಿಂದ ಯಾರೆಲ್ಲಾ ಭಾಗಿ ಆಗಿದ್ದರು. ಮದುವೆಯ ಧಾರೆ ಮಹೂರ್ತ ಸಂಭ್ರಮ ಹೇಗಿತ್ತು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

   ಸಂತೋಷ್- ಸುರಭಿ ಕಲ್ಯಾಣ

  ಸಂತೋಷ್- ಸುರಭಿ ಕಲ್ಯಾಣ

  ಕನ್ನಡದ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಸುರಭಿ ಮದುವೆ ಹಿಂದು ಸಂಪ್ರದಾಯದಂತೆ ನಡೆದಿದೆ. ಕಳೆದ ವರ್ಷದ ಅಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ ನಿರ್ದೇಶಕ ಇಂದು ಗೃಹಸ್ಥಾಶ್ರಮಕ್ಕೆ ಕಾಳಿಟ್ಟಿದ್ದಾರೆ.

   ಆರತಕ್ಷತೆಯಲ್ಲಿ ಸ್ಟಾರ್ ಕಲಾವಿದರು

  ಆರತಕ್ಷತೆಯಲ್ಲಿ ಸ್ಟಾರ್ ಕಲಾವಿದರು

  ಸಂತೋಷ್ ಮತ್ತು ಸುರಭಿ ಅವರ ಆರತಕ್ಷತೆಗೆ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಡಾ ರಾಜ್ ಫ್ಯಾಮಿಲಿಯ ಎಲ್ಲಾ ಸದಸ್ಯರು ಭಾಗಿ ಆಗಿದ್ದರು.

   ಶುಭ ಹಾರೈಸಿದ ಅಂಬಿ -ಸುಮಲತಾ

  ಶುಭ ಹಾರೈಸಿದ ಅಂಬಿ -ಸುಮಲತಾ

  ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಕೂಡ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ವಧು-ವರರಿಗೆ ಶುಭಕೋರಿದರು ರೋರಿಂಗ್ ಸ್ಟಾರ್ ಶ್ರೀ ಮುರಳಿ ಬಹುಭಾಷಾ ನಟ ಶರತ್ ಕುಮಾರ್ ಕೂಡ ಉಪಸ್ಥಿತರಿದ್ದರು.

   ಸಂತೋಷ್ -ಸುರಭಿ ಮದುವೆಯಲ್ಲಿ ತಾರ ಮೆರುಗು

  ಸಂತೋಷ್ -ಸುರಭಿ ಮದುವೆಯಲ್ಲಿ ತಾರ ಮೆರುಗು

  ಕನ್ನಡ ಸಿನಿಮಾರಂಗದ ಬಹುತೇಕ ಕಲಾವಿದರು ಸಂತೋಷ್-ಸುರಭಿ ಆರತಕ್ಷತೆಯಲ್ಲಿ ಭಾಗಿ ಆಗಿದ್ದರು ಇನ್ನು ಕೆಲ ಸ್ಟಾರ್ ಗಳು ಬೆಳ್ಳಿಗ್ಗೆ ಧಾರೆ ಮಹೂರ್ತಕ್ಕೆ ಬಂತು ಇಬ್ಬರಿಗೂ ಮದುವೆಯ ಶುಭ ಕೋರಿದರು.

  English summary
  Kannada director santhosh Ananddram and Surabhi's wedding took place today, Santosh Anand Ram Rajakumara and Ramachari movies director, Puneet Rajkumar and Shivarajkumar visited Santosh's wedding

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X