twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದ ಗಲ್ಲಾಪೆಟ್ಟಿಗೆ ಶೇಕ್ ಮಾಡಿದ 'ಸರ್ಕಾರ್', ಎರಡೇ ದಿನಕ್ಕೆ ದಾಖಲೆ.!

    |

    Recommended Video

    ಕರ್ನಾಟಕದಲ್ಲಿ ತಮಿಳು ಸಿನಿಮಾ ಸರ್ಕಾರ್ ಗಳಿಕೆ ಎಷ್ಟು? | FILMIBEAT KANNADA

    ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ, ಇಲ್ಲಿ ಮಾರ್ಕೆಟ್ ಚಿಕ್ಕದು ಅಂತ ಕಾಮೆಂಟ್ ಮಾಡ್ತಾರೆ. ಆದ್ರೆ, ಪರಭಾಷೆಯ ಚಿತ್ರಗಳು ಕರ್ನಾಟಕದಿಂದ ಕೋಟಿ ಕೋಟಿ ಲೂಟಿ ಮಾಡ್ಕೊಂಡು ಹೋಗ್ತಿವೆ. ಹಾಗ್ನೋಡಿದ್ರೆ, ತಮಿಳು ಮತ್ತು ತೆಲುಗು ಚಿತ್ರಗಳಿಗೆ ಅವರ ರಾಜ್ಯಕ್ಕಿಂತ ಕರ್ನಾಟಕದಲ್ಲೇ ಹೆಚ್ಚು ಲಾಭ ಬರುತ್ತೆ ಎಂಬುದು ಮತ್ತೆ ಸಾಬೀತಾಗಿದೆ.

    ತಮಿಳು ನಟ ವಿಜಯ್ ಅಭಿನಯದ 'ಸರ್ಕಾರ್' ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಅದರಲ್ಲೂ ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಂತೂ ಚಿಂದಿ ಉಡಾಯಿಸಿದೆ. ಕನ್ನಡ ಸಿನಿಮಾಗಳ ಕಲೆಕ್ಷನ್ ಮೀರಿಸುವಂತೆ ಗಳಿಕೆ ಕಂಡಿದೆ.

    ಏನಿದು?, ಚೆನ್ನೈಗಿಂತ ಬೆಂಗಳೂರಿನಲ್ಲಿಯೇ 'ಸರ್ಕಾರ್'ಗೆ ಹೆಚ್ಚು ಶೋ! ಏನಿದು?, ಚೆನ್ನೈಗಿಂತ ಬೆಂಗಳೂರಿನಲ್ಲಿಯೇ 'ಸರ್ಕಾರ್'ಗೆ ಹೆಚ್ಚು ಶೋ!

    ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್', ಶರಣ್ ಅಭಿನಯದ 'ವಿಕ್ಟರಿ-2' ಚಿತ್ರಗಳು ಕರ್ನಾಟಕದಲ್ಲಿ ಪ್ರದರ್ಶನ ಕಾಣುತ್ತಿದ್ದರೂ, 'ಸರ್ಕಾರ್' ಚಿತ್ರಕ್ಕೆ ಹೆಚ್ಚು ಸ್ಕ್ರೀನ್ ನೀಡಲಾಗಿತ್ತು. ಹೀಗಾಗಿ, ಕನ್ನಡ ಸಿನಿಮಾಗಳನ್ನ ಹಿಂದಿಕ್ಕುವಂತೆ 'ಸರ್ಕಾರ್' ಗಳಿಕೆ ಕಂಡಿದೆ. ಅಷ್ಟಕ್ಕೂ, 'ಸರ್ಕಾರ್' ಕರ್ನಾಟಕದಲ್ಲಿ ಗಳಿಸಿದೆಷ್ಟು.? ಮುಂದೆ ಓದಿ....

    ಕರ್ನಾಟಕದಲ್ಲಿ ಮೊದಲ ದಿನ ಸರ್ಕಾರ್.?

    ಕರ್ನಾಟಕದಲ್ಲಿ ಮೊದಲ ದಿನ ಸರ್ಕಾರ್.?

    ಕನ್ನಡ ಚಿತ್ರಗಳಿಗೆ ಸರಿಸಮನಾಗಿ ವಿಜಯ್ ಅಭಿನಯದ 'ಸರ್ಕಾರ್' ಸಿನಿಮಾ ಕರ್ನಾಟಕದಲ್ಲಿ ತೆರೆಕಂಡಿದೆ. ಮೊದಲ ದಿನ ಸುಮಾರು 630+ ಶೋಗಳನ್ನು ಚಿತ್ರಕ್ಕೆ ನೀಡಲಾಗಿದೆ. ಬೆಂಗಳೂರಿನ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸರ್ಕಾರ್ ಬಿಡುಗಡೆಯಾಗಿದೆ. ಇದರ ಪರಿಣಾಮ ಮೊದಲ ದಿನ ಕರ್ನಾಟಕದಲ್ಲಿ 6.15 ಕೋಟಿ ಗಳಿಕೆ ಕಂಡಿದೆ.

    ಎರಡನೇ ದಿನಕ್ಕೆ ದಾಖಲೆ.!

    ಎರಡನೇ ದಿನಕ್ಕೆ ದಾಖಲೆ.!

    ಮೊದಲ ದಿನವೇ 6 ಕೋಟಿಗೂ ಹೆಚ್ಚು ಗಳಿಕೆ ಕಂಡ ಸರ್ಕಾರ್, ಎರಡನೇ ದಿನವೂ ತನ್ನ ಆರ್ಭಟ ನಿಲ್ಲಿಸಲಿಲ್ಲ. ತಮಿಳಿನ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲಾ ಅವರು ಹೇಳಿರುವ ಪ್ರಕಾರ, ಕರ್ನಾಟಕದಲ್ಲಿ ಎರಡನೇ ದಿನ ಸರ್ಕಾರ್ ಸಿನಿಮಾ 3 ಕೋಟಿ ಗಳಿಸಿದೆಯಂತೆ. ಅಲ್ಲಿಗೆ ಕೇವಲ ಎರಡು ದಿನಕ್ಕೆ ಕರ್ನಾಟಕದಲ್ಲಿ ಸರ್ಕಾರ್ ಕಲೆಕ್ಷನ್ 9.15 ಕೋಟಿ.

    100 ಕೋಟಿ ದಾಟಿದೆ ಸರ್ಕಾರ್ ಗಳಿಕೆ

    100 ಕೋಟಿ ದಾಟಿದೆ ಸರ್ಕಾರ್ ಗಳಿಕೆ

    ಸರ್ಕಾರ್ ಚಿತ್ರಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ಎಐಡಿಎಂಕೆ ಪಕ್ಷದಿಂದ ವಿರೋಧ ಎದುರಿಸುತ್ತಿದೆ. ಇದರ ಪರಿಣಾಮ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಬೀಳಲಿದೆ ಮತ್ತು ಹಲವು ಕಡೆ ಥಿಯೇಟರ್ ನಲ್ಲಿ ಗಲಾಟೆ ಆಗಿದೆ ಎಂದು ವರದಿಯಾಗಿದೆ. ಹೀಗಿದ್ದರೂ, ಎರಡೇ ದಿನದಲ್ಲಿ ಸರ್ಕಾರ್ ಕಲೆಕ್ಷನ್ 100 ಕೋಟಿ ದಾಟಿದೆ ಎನ್ನಲಾಗಿದೆ.

    ತಮಿಳಿನ 'ಸರ್ಕಾರ್‌' ಚಿತ್ರದ ವಿರುದ್ಧ 'ಅಮ್ಮಾ' ಅಭಿಮಾನಿಗಳ ಪ್ರತಿಭಟನೆ

    ಕನ್ನಡ ಸಿನಿಮಾಗಳಿಗೆ ಅನ್ಯಾಯ.?

    ಕನ್ನಡ ಸಿನಿಮಾಗಳಿಗೆ ಅನ್ಯಾಯ.?

    ಹೀಗೆ, ಪರಭಾಷೆ ಚಿತ್ರಗಳಿಗೆ ಹೆಚ್ಚು ಸ್ಕ್ರೀನ್ ಬಿಟ್ಟುಕೊಟ್ರೆ, ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಎಲ್ಲಿ ಸಿಗುತ್ತೆ.? ಎಲ್ಲರೂ ಅಂದುಕೊಂಡಂತೆ ಕರ್ನಾಟಕದಲ್ಲಿ ಮಾರುಕಟ್ಟೆ ಚಿಕ್ಕದಾಗಿಲ್ಲ, ಅದನ್ನ ಪರಭಾಷೆ ಸಿನಿಮಾಗಳು ಸದುಪಯೋಗಪಡಿಸಿಕೊಳ್ಳುತ್ತಿದೆ ಅಷ್ಟೇ. ಕನ್ನಡ ವಿತರಕರು, ತಮಿಳು ಹಾಗೂ ತೆಲುಗಿನ ದೊಡ್ಡ ಚಿತ್ರಗಳನ್ನ ಇಲ್ಲಿ ದೊಡ್ಟ ಮಟ್ಟದಲ್ಲಿ ಬಿಡುಗಡೆ ಮಾಡಿ ಕನ್ನಡ ಸಿನಿಮಾಗಳಿಗೆ ಶತ್ರುಗಳಾಗಿ ಬದಲಾಗ್ತಿದ್ದಾರೆ ಅಂದ್ರೆ ತಪ್ಪಾಗಲಾರದು.

    English summary
    Sarkar box office collection day 2: Vijay starrer collects Rs 100 crores, beats Baahubali and Rajinikanth movies.
    Friday, November 9, 2018, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X