Just In
Don't Miss!
- Sports
ಅಫ್ಘಾನಿಸ್ತಾನ vs ಐರ್ಲೆಂಡ್, 3ನೇ ಏಕದಿನ ಪಂದ್ಯ, Live ಸ್ಕೋರ್
- News
ಹಾಸನ ಜಿಲ್ಲೆ ದೇವಾಲಯದ ಅಭಿವೃದ್ಧಿಗೆ ಆದ್ಯತೆ: ಶಾಸಕ ಪ್ರೀತಂ
- Automobiles
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಯಮಹಾ ವೈಝಡ್ಎಫ್-ಆರ್25 ಬೈಕ್
- Finance
ಬಜೆಟ್ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾಡುತ್ತಿವೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಹಾಡುಗಳು
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಈಗ ತನ್ನ ಅಪರೂಪದ ಶೈಲಿಯ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ಈ ಸಿನಿಮಾದ ಮೇಲೆ ಇದ್ದ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿನಿಮಾದ ಸದ್ಯ ನಾಲ್ಕು ಹಾಡುಗಳು ರಿಲೀಸ್ ಆಗಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದೆ.
ದಡ್ಡ ದಡ್ಡ ಹಾಡು - 1 ಮಿಲಿಯನ್
ಹೇ ಶಾರದೆ ಹಾಡು - 2 ಲಕ್ಷ
ಬಲೂನ್ ಹಾಡು - 2 ಲಕ್ಷ
ಅರೆರೆ ಅವಳ ನಗುವ ಹಾಡು - 4 ಲಕ್ಷ
ಸಿನಿಮಾದ ಮೊದಲ ಹಾಡಾಗಿ ಬಂದ 'ದಡ್ಡ ದಡ್ಡ ಹಾಡು..' ಯೂ ಟ್ಯೂಬ್ ನಲ್ಲಿ ಬರೋಬ್ಬರಿ ಒಂದು ಮಿಲಿಯನ್ ಹಿಟ್ಸ್ ಪಡೆದಿದೆ. ಈ ಹಾಡನ್ನು ತ್ರಿಲೊಕ್ ತ್ರಿವಿಕ್ರಮ್ ಬರೆದಿದ್ದಾರೆ. 'ಹೇ ಶಾರದೆ..' ಹಾಡನ್ನು ಎರಡು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಈ ಹಾಡಿಗೆ ಕೆ.ಕಲ್ಯಾಣ್ ಸಾಹಿತ್ಯವಿದೆ.
ರಿಷಬ್ ಶೆಟ್ಟಿಯ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಮೆಚ್ಚಿದ ಸುದೀಪ್
ಬಲೂನ್ ಹಾಡು ಸಹ ಎರಡು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದ್ದು, ಹಾಡಿಗೆ ವಿರೇಶ್ ಶಿವಮೂರ್ತಿ, ತ್ರಿಲೊಕ್ ತ್ರಿವಿಕ್ರಮ್ ಹಾಗೂ ಗೋಕುಲ್ ಅಭಿಷೇಕ್ ಪದ ಜೋಡಿಸಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆದ 'ಅರೆರೆ ಅವಳ ನಗುವ..' ಹಾಡನ್ನು ಸಹ ತ್ರಿಲೊಕ್ ತ್ರಿವಿಕ್ರಮ್ ಬರೆದಿದ್ದಾರೆ. ತ್ರಿಲೊಕ್ ತ್ರಿವಿಕ್ರಮ್ ಅವರ ಹೊಸ ಮಾದರಿಯ ಸಾಹಿತ್ಯ ಕೇಳುಗರಿಗೆ ಹೊಸ ಆನಂದ ನೀಡುತ್ತಿದೆ. ಹೆಚ್ಚು ದಿನ ಅವರು ಸ್ಯಾಂಡಲ್ ವುಡ್ ನಲ್ಲಿ ಉಳಿಯಲಿದ್ದಾರೆ ಎನ್ನುವ ನಂಬಿಕೆಯನ್ನು ಅವರ ಹಾಡುಗಳು ಮೂಡಿಸಿವೆ.
'ದಡ್ಡ' ಪ್ರವೀಣನ ಹಾಡನ್ನು ಆದ್ಯ ಬಾಯಲ್ಲಿ ಕೇಳಿ
ಅಂದಹಾಗೆ, ಈ ಹಾಡುಗಳ ಜಾದು ಹಿಂದೆ ಇರುವವರು ಸಂಗೀತ ನಿರ್ದೇಶಕ ವಾಸುಕಿ ವೈಭವ್. ಈ ಪ್ರತಿಭಾವಂತ ಹುಡುಗ ಕನ್ನಡದಲ್ಲಿ ದಿನೇ ದಿನೇ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.