For Quick Alerts
  ALLOW NOTIFICATIONS  
  For Daily Alerts

  ಮಸ್ತಾಗಿದೆ 'ಸಾರ್ವಜನಿಕರಿಗಾಗಿ ಸುವರ್ಣಾವಕಾಶ' ಟೀಸರ್

  |

  ನಟ ರಿಷಿ ಹುಟ್ಟುಹಬ್ಬದ ವಿಶೇಷವಾಗಿ ಅವರ ಮುಂದಿನ ಚಿತ್ರ 'ಸಾರ್ವಜನಿಕರಿಗಾಗಿ ಸುವರ್ಣಾವಕಾಶ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಲು ಸಿಕ್ಕಾಪಟ್ಟೆ ಮಸ್ತ್ ಮಜಾವಾಗಿದೆ. ಇದರ ಮೂಲಕ ತಮ್ಮ ನಾಯಕನಿಗೆ ಚಿತ್ರತಂಡ ಬರ್ತ್ ಡೇ ವಿಶ್ ಮಾಡಿದೆ.

  'ಸಾರ್ವಜನಿಕರಿಗಾಗಿ ಸುವರ್ಣಾವಕಾಶ' ಟೀಸರ್ ನೋಡಿದರೇನೋ ಸಿನಿಮಾದ ತುಂಬ ಮನರಂಜನೆ ತುಂಬಿದೆ ಎನ್ನುವುದು ತಿಳಿಯುತ್ತಿದೆ. ಟೀಸರ್ ನಲ್ಲಿ ಕಾಮಿಡಿ ಹೆಚ್ಚಿದೆ. ಸಿನಿಮಾ ಕೂಡ ಪ್ರೇಕ್ಷಕರನ್ನು ನಗಿಸುವ ಗುರಿ ಹೊಂದಿದೆ. ರಿಷಿ ಮ್ಯಾನರಿಸಂ ಅನ್ನು ಈ ಸಿನಿಮಾದಲ್ಲಿ ಚೆನ್ನಾಗಿ ಬಳಸಿಕೊಂಡಿರುವ ಸುಳಿವು ಸಿಕ್ಕಿದೆ.

  ಸಂದರ್ಶನ : ರಿಷಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡಿದ ಭಾವಿ ಪತ್ನಿ

  ಧನ್ಯಾ ಬಾಲಕೃಷ್ಣ ಸಿನಿಮಾದಲ್ಲಿ ಮುದ್ದಾಗಿ ಕಾಣುತ್ತಾರೆ. ಕ್ರಿಕೆಟ್ ಕಾಮೆಂಟ್ರಿ ಮೂಲಕ ಟೀಸರ್ ನಿರೂಪಣೆ ಸಾಗಿದೆ. ಟೀಸರ್ ಹೊಸತನದಿಂದ ಕೂಡಿದೆ. 'ಗುಳ್ಟು' ಚಿತ್ರದ ನಿರ್ದೇಶಕ ಅನೂಪ್ ರಾಮಸ್ವಾಮಿ ಕಶ್ಯಪ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ .

  ದತ್ತಣ್ಣ, ರಂಗಾಯಣ ರಘು, ಆನಂದ್ ತುಮಕೂರು, ಶಾಲಿನಿ, ಮಿತ್ರ ಸಿನಿಮಾದಲ್ಲಿ ಇದ್ದಾರೆ. 'ಗುಳ್ಟು' ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಹಾಗೂ ಎನ್ ಹರಿಕೃಷ್ಣ ಕಥೆ ಬರೆದಿದ್ದಾರೆ. ಮಿದುನ್ ಮುಕುಂದನ್ ಸಂಗೀತ ನೀಡಿದ್ದಾರೆ.

  ಟೀಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  'Sarvajanikarige Suvarnavakaasha' movie teaser out on the occasion of actor Rishi birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X