»   » ಇದೇ ವಾರ ತೆರೆಗೆ ಬರಲಿದೆ ತಿಲಕ್ ನಟನೆಯ 'ಸರ್ವಸ್ವ' ಚಿತ್ರ

ಇದೇ ವಾರ ತೆರೆಗೆ ಬರಲಿದೆ ತಿಲಕ್ ನಟನೆಯ 'ಸರ್ವಸ್ವ' ಚಿತ್ರ

Posted By:
Subscribe to Filmibeat Kannada

ನಟ ತಿಲಕ್ ಅಭಿನಯದ 'ಸರ್ವಸ್ವ' ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾ ಇದೇ ಶುಕ್ರವಾರ (ಅಕ್ಟೋಬರ್ 27) ತೆರೆಗೆ ಬರುವುದಕ್ಕೆ ಸಜ್ಜಾಗಿದೆ.

'ಸರ್ವಸ್ವ' ಒಂದು ಕೌಟುಂಬಿಕ ಸಿನಿಮಾವಾಗಿದೆ. ಲವ್, ಆಕ್ಷನ್, ಥ್ರಿಲ್ಲರ್ ಎಲ್ಲ ರೀತಿಯ ಅಂಶಗಳು ಸಿನಿಮಾದಲ್ಲಿದೆ. ತಿಲಕ್ ಇಲ್ಲಿ ಮೊದಲ ಬಾರಿಗೆ ನಿರ್ದೇಶಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಒಳಗೆ ಒಂದು ಸಿನಿಮಾ ನಡೆಯಲಿದ್ದು ಅಲ್ಲಿ ತಿಲಕ್ ಡೈರೆಕ್ಟರ್ ಆಗಿದ್ದಾರೆ. ತಿಲಕ್ ಅವರಿಗೆ ಜೊತೆಯಾಗಿ ರೇಣುಶಾ ಮತ್ತು ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಚೇತನ್ ಎಂಬ ಹೊಸ ಹುಡುಗ ಚಿತ್ರದ ಮತ್ತೊಬ್ಬ ನಾಯಕ.

'Sarvasva' Movie is all set to release on october 27th

ಇನ್ನು 'ಸರ್ವಸ್ವ' ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿವೆ. ಇದರಲ್ಲಿ ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದು, ಇನ್ನೊಂದು ಹಾಡನ್ನು ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ಭೂಪಿಂದರ್ ಪಾಲ್‌ ಸಿಂಗ್‌ ರೈನಾ ಛಾಯಾಗ್ರಹಣದಲ್ಲಿ ಹಾಡು ಸುಂದರವಾಗಿ ಚಿತ್ರೀಕರಣವಾಗಿದೆ. ಶ್ರೇಯನ್ ಕಬಾಡಿ ನಿರ್ದೇಶನ ಚಿತ್ರಕ್ಕಿದೆ.

'Sarvasva' Movie is all set to release on october 27th

ಈಗಾಗಲೇ ವೆನಿಜುವೆಲಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಐದು ಸಿನಿಮಾಗಳ ಪೈಕಿ 'ಸರ್ವಸ್ವ' ಕೂಡ ಒಂದಾಗಿದೆ. ಅಂದಹಾಗೆ, ವಿಮಲ್ ಮತ್ತು ವಾಮ್ದೇವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

English summary
Tilak Shekar starrer 'Sarvasva' Kannada Movie is all set to release on October 27th all over Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X