For Quick Alerts
  ALLOW NOTIFICATIONS  
  For Daily Alerts

  ಟ್ರೈಲರ್: ಕಾಮಿಡಿ, ಆಕ್ಷನ್, ಥ್ರಿಲ್, ಸೆಂಟಿಮೆಂಟ್ ಮಿಶ್ರಿತ 'ಸತ್ಯ ಹರಿಶ್ಚಂದ್ರ'

  By Bharath Kumar
  |

  ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಅಭಿನಯದ ನಿರೀಕ್ಷೆಯ 'ಸತ್ಯ ಹರಿಶ್ಚಂದ್ರ' ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ 'ಸತ್ಯ ಹರಿಶ್ಚಂದ್ರ'ನ ಆಡಿಯೋ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  'ಸತ್ಯ ಹರಿಶ್ಚಂದ್ರ' ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದ್ದು, ಆಕ್ಷನ್, ಥ್ರಿಲ್, ಲವ್, ಸೆಂಟಿಮೆಂಟ್, ಕಾಮಿಡಿ ಹೀಗೆ ಒಂದು ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಮಾರುಕಟ್ಟೆಯಲ್ಲಿ 'ಹರಿಶ್ಚಂದ್ರ' ಹಾಡುಗಳು ಅಬ್ಬರ ಶುರುವಾಗಿದೆ.

  ಶರಣ್ ಗೆ ಜೋಡಿಯಾಗಿ ಸಂಚಿತಾ ಪಡುಕೊಣೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಚಿಕ್ಕಣ್ಣ, ಭಾವನ ರಾವ್, ಸಾಧುಕೋಕಿಲಾ, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

  ಈ ಚಿತ್ರವನ್ನ ಕೆ.ಮಂಜು ನಿರ್ಮಾಣ ಮಾಡಿದ್ದು, ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ, ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಮಾಡಿರುವ 'ಸತ್ಯ ಹರಿಶ್ಚಂದ್ರ' ಆದಷ್ಟೂ ಬೇಗ ತೆರೆಗೆ ಬರಲಿದೆ.

  English summary
  Actor Ganesh on Thursday (august 24) evening released the songs of Sharan's new film 'Satya Harischandra' being directed by Dayal Padmanabhan and produced by K Manju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X