»   » 'ರಾಕೆಟ್' ಉಡಾಯಿಸಲು ನೀನಾಸಂ ಸತೀಶ್ ರೆಡಿ

'ರಾಕೆಟ್' ಉಡಾಯಿಸಲು ನೀನಾಸಂ ಸತೀಶ್ ರೆಡಿ

By: ಜೀವನರಸಿಕ
Subscribe to Filmibeat Kannada

ನೀನಾಸಂ ಸತೀಶ್ ಸುಮ್ಮನೆ ಸುದ್ದಿ ಮಾಡೋ ಗಾಸಿಪ್ ಗಿರಾಕಿಯಲ್ಲ. ಆದರೆ ಮಂಡ್ಯದಲ್ಲಿ ಲವ್ ಮಾಡಿದ್ದನ್ನ ಸದ್ಯದಲ್ಲೇ ತೆರೆ ಮೇಲೆ ತೋರಿಸಲಿದ್ದಾರೆ. 'ಲೂಸಿಯಾ' ಗೆದ್ದ ನಂತರ ಯಶಸ್ಸಿನ ಅಲೆಯಲ್ಲಿ ತೇಲ್ತಾರೆ ಅಂದುಕೊಂಡಿದ್ದ ಸತೀಶ್ ಗೆ ನಂತರದ ಸಿನಿಮಾಗಳು ಅಷ್ಟಾಗಿ ಯಶಸ್ಸು ತಂದುಕೊಡಲಿಲ್ಲ.

ಕಾಟ್ಲೇ ಸತೀಶನ ಕ್ವಾಟ್ಲೆಗಳು ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಲಿಲ್ಲ. ಅಂಜದ ಗಂಡು ಕೂಡ ವಿಭಿನ್ನ ಅನ್ನಿಸಲಿಲ್ಲ. ಆದರೆ ಸತೀಶ್ ಅಭಿನಯದಲ್ಲಿ ವಿಶೇಷತೆಯಿರೋದ್ರಿಂದ ಹೊಸ ಹೊಸ ಸಿನಿಮಾಗಳು ಸತೀಶ್ ರನ್ನ ಅರಸಿ ಬರ್ತಿವೆ. ['ಲೂಸಿಯಾ' ಚಿತ್ರ ವಿಮರ್ಶೆ]

Satish Neenasam

ಸತೀಶ್ ಮುಂದಿನ ಸಿನಿಮಾ 'ರಾಕೆಟ್' ಅನ್ನೋ ಸುದ್ದಿ ಬಂದಿದೆ. ನೀನಾಸಂ ಸತೀಶ್ ಸಿನಿಮಾ ಕೆರಿಯರ್ ನ ಮತ್ತೊಂದು ಕಾಮಿಡಿ ಥ್ರಿಲ್ಲರ್ ಸಿನಿಮಾ ಅನ್ನೋದನ್ನ ಟೈಟಲ್ ಹೇಳ್ತಿದೆ. ಇನ್ನು ಈ ರಾಕೆಟ್ ಅನ್ನೋ ಟೈಟಲ್ ನೋಡ್ತಿದ್ರೆ ಸದ್ಯದಲ್ಲೇ ಬರಲಿರೋ ದೀಪಾವಳಿಗೆ ಈ ರಾಕೆಟ್ ಉಡಾವಣೆಯಾಗಲಿದ್ದು ಮುಂದಿನ ದೀಪಾವಳಿಗೆ ಥಿಯೇಟರ್ ತಲುಪೋ ಸಾಧ್ಯತೆಯಿದೆ.

ಲೂಸಿಯಾ ಚಿತ್ರಕ್ಕೆ ಇಂಪಾದ ಸಂಗೀತ ನೀಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ರಾಕೆಟ್ ಚಿತ್ರಕ್ಕೆ ಇರಲಿದೆ. ಸುಜ್ಞಾನ್ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ಜಗದೀಶ್ ನಾದನಹಳ್ಳಿ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವನ್ನು ಸ್ವತಃ ಸತೀಶ್ ನಿರ್ಮಿಸುತ್ತಿರುವುದು ಇನ್ನೊಂದು ವಿಶೇಷ.

ಅಂದಹಾಗೆ ಲವ್ ಇನ್ ಮಂಡ್ಯ ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಬಿಡುಗಡೆಯಾಗಿದ್ದು ಭರ್ಜರಿ ಮಾರಾಟವಾಗುತ್ತಿದೆ. ಅರಸು ಅಂತಾರೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರ ಇದಾಗಿದೆ.

English summary
Lucia fame Kannada actor Satish Neenasam's maiden venture under his home banner Satish Picture house is titled as Rocket. The project will be directed by Jagadish Nadanalli.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada