For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬ್‌ನಲ್ಲಿ 'ರಾಮಾ ರಾಮಾ ರೇ' ಸಿನಿಮಾ ನೋಡಿ ನಿರ್ಮಾಪಕರಿಗೆ ದುಡ್ಡು ಕಳಿಸಿದ ಅಭಿಮಾನಿ

  |

  ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ನಿಸ್ಸಂಶಯವಾಗಿ ಗುರುತಿಸಬಹುದಾದ ಸಿನಿಮಾ 'ರಾಮಾ ರಾಮಾ ರೇ'. ನಾಲ್ಕು ವರ್ಷಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆಯಾದ್ದ ಈ ಸಿನಿಮಾ ಈಗ ಯೂಟ್ಯೂಬ್‌ನಲ್ಲಿಯೂ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ವೇಳೆ ಪಡೆದಿದ್ದ ಮೆಚ್ಚುಗೆ ಯೂಟ್ಯೂಬ್ ವೀಕ್ಷಕರಿಂದಲೂ ಸಿಗುತ್ತಿದೆ. ಸಿನಿಮಾವೊಂದು ನಾಲ್ಕು ವರ್ಷಗಳ ನಂತರವೂ ತನ್ನ ತಾಜಾತನ ಉಳಿಸಿಕೊಂಡಿರುವುದು ವಿಶೇಷ.

  ಕ್ಯಾನ್ಸರ್ ಪೀಡಿತರಿಗಾಗಿ ತಲೆ ಕೂದಲು ದಾನ ಮಾಡಿದ ನಟಿ | Sukrutha Wagle | Cancer Awareness | Oneindia kannada

  ಡಿ. ಸತ್ಯಪ್ರಕಾಶ್ ನಿರ್ದೇಶನದ ಮೊದಲ ಚಿತ್ರವಾದ 'ರಾಮಾ ರಾಮ ರೇ' 2016ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿತ್ತು. ಜತೆಗೆ ಸತ್ಯಪ್ರಕಾಶ್ ಅವರಿಗೆ ನಿರ್ದೇಶಕರ ಪಾದಾರ್ಪಣೆಯ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಕೂಡ ಒಲಿದಿತ್ತು. ಮುಂದೆ ಓದಿ...

  ಯೂಟ್ಯೂಬ್‌ನಲ್ಲಿ ರಾಮಾ ರಾಮಾ ರೇ

  ಯೂಟ್ಯೂಬ್‌ನಲ್ಲಿ ರಾಮಾ ರಾಮಾ ರೇ

  2016ರ ಅಕ್ಟೋಬರ್ 21ರಂದು ಬಿಡುಗಡೆಯಾಗಿದ್ದ 'ರಾಮಾ ರಾಮಾ ರೇ' ಯೂಟ್ಯೂಬ್‌ಗೆ ಕೂಡ ಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ವೀಕ್ಷಿಸುವ ಅವಕಾಶ ತಪ್ಪಿಸಿಕೊಂಡವರು ಲಾಕ್‌ಡೌನ್‌ನ ಈ ಸಮಯದಲ್ಲಿ ಮನೆ ಮಂದಿಯ ಜತೆಗೆ ಹಾಯಾಗಿ ಕುಳಿತು ಚಿತ್ರವನ್ನು ನೋಡಬಹುದು.

  ಸಿನಿಮಾ ವೀಕ್ಷಿಸಿ ದುಡ್ಡು ನೀಡಿದರು

  ಸಿನಿಮಾ ವೀಕ್ಷಿಸಿ ದುಡ್ಡು ನೀಡಿದರು

  ಮತ್ತೊಂದು ವಿಶೇಷವೆಂದರೆ 'ರಾಮಾ ರಾಮಾ ರೇ' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಮೊನ್ನೆ ಮೊನ್ನೆ ನೋಡಿದ ಸಿನಿಮಾ ಅಭಿಮಾನಿಯೊಬ್ಬರು ಚಿತ್ರತಂಡಕ್ಕೆ ಹಣ ಕಳುಹಿಸಿದ್ದಾರೆ. 'ಲವ್ ಮಾಕ್‌ಟೇಲ್' ಮತ್ತು 'ದಿಯಾ' ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ನೋಡಿದವರು ನಿರ್ಮಾಪಕರಿಗೆ ಹೀಗೆ ಹಣ ಕಳುಹಿಸಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕವೂ ಸಿನಿಮಾವೊಂದಕ್ಕೆ ಹಣ ನೀಡುತ್ತಿರುವುದು ವಿಶೇಷ.

  ಉಚಿತವಾಗಿ ನೋಡಿದಕ್ಕೆ ಬೇಸರ

  'ಈ ಸಿನಿಮಾ ನೋಡಿರಲಿಲ್ಲ. ಈಗ ನೋಡಿದೆ. ಇಷ್ಟು ಒಳ್ಳೆಯ ಸಿನಿಮಾ ಉಚಿತವಾಗಿ ನೋಡಿದೆನಲ್ಲ' ಎಂದು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸದ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಚಿತ್ರದ ನಾಯಕ ನಟ ನಟರಾಜ್ ಅವರಿಗೆ 250 ರೂ.ಗಳನ್ನು ಗೂಗಲ್ ಪೇ ಮೂಲಕ ಕಳುಹಿಸಿಕೊಟ್ಟಿದ್ದಾರೆ.

  ಯೂಟ್ಯೂಬ್‌ನಲ್ಲಿ ಹಿಟ್ ಆಗುತ್ತಿದೆ ಸಿನಿಮಾ

  ಯೂಟ್ಯೂಬ್‌ನಲ್ಲಿ ಹಿಟ್ ಆಗುತ್ತಿದೆ ಸಿನಿಮಾ

  ಯೂಟ್ಯೂಬ್‌ನಲ್ಲಿ 'ರಾಮಾ ರಾಮಾ ರೇ' ಬಿಡುಗಡೆಯಾದ ನಾಲ್ಕೇ ದಿನಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಚಿತ್ರಮಂದಿರದಲ್ಲಿ ಒಮ್ಮೆ ನೋಡಿದ್ದವರೂ ಮತ್ತೊಮ್ಮೆ ಸಿನಿಮಾ ವೀಕ್ಷಿಸಿ ಖುಷಿಪಡುತ್ತಿದ್ದಾರೆ. ಥಿಯೇಟರ್‌ನಲ್ಲಿ ನೋಡದವರು ತಮ್ಮ ಗೆಳೆಯರಿಗೂ ಲಿಂಕ್ ಕಳಿಸಿ ಚಿತ್ರ ನೋಡುವಂತೆ ಸಲಹೆ ನೀಡುತ್ತಿದ್ದಾರೆ.

  ತೆಲುಗಿಗೆ ರೀಮೇಕ್ ಆಗಿತ್ತು

  ತೆಲುಗಿಗೆ ರೀಮೇಕ್ ಆಗಿತ್ತು

  ನಟರಾಜ್, ಧರ್ಮಣ್ಣ ಕಡೂರು, ಜಯರಾಮ್ (ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಂದೆ), ಬಿಂಬಶ್ರೀ, ಭಾಸ್ಕರ್, ಎಂ.ಕೆ. ಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ತೆಲುಗಿನಲ್ಲಿ ರಾಕ್ ಲೈನ್ ವೆಂಕಟೇಶ್ 'ಆಟಗಾಧರಾ ಶಿವ' ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದ್ದರು.

  English summary
  People can watch Rama Rama Re Kannada movie directed by Satya Prakash is now available in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X