For Quick Alerts
  ALLOW NOTIFICATIONS  
  For Daily Alerts

  ಮರಾಠಿಗೆ ರೀಮೇಕ್ ಆಗುತ್ತಿದೆ ಕನ್ನಡದ 'ರಾಮಾ ರಾಮಾ ರೇ'

  |

  ನಾಲ್ಕು ವರ್ಷಗಳ ಹಿಂದೆ ತೆರೆಕಂಡ 'ರಾಮಾ ರಾಮಾ ರೇ' ಚಿತ್ರ ತನ್ನ ವಿಶಿಷ್ಟ ನಿರೂಪಣಾ ಶೈಲಿಯ ಕಾರಣದಿಂದ ಗಮನ ಸೆಳೆದಿತ್ತು. ಚಿತ್ರದ ಬಗ್ಗೆ ಉತ್ತಮ ಚರ್ಚೆ, ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಚಿತ್ರತಂಡದಲ್ಲಿದ್ದವರಲ್ಲಿ ಬಹುತೇಕರು ಹೊಸಬರು. ರಾಜ್ಯ ಪ್ರಶಸ್ತಿಯ ಗೌರವವೂ ಈ ಚಿತ್ರಕ್ಕೆ ಒಲಿದಿತ್ತು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಚಿತ್ರವನ್ನು ಸಾವಿರಾರು ಮಂದಿ ವೀಕ್ಷಿಸಿ ಚಿತ್ರಮಂದಿರದಲ್ಲಿ ನೋಡದೆ ಇದ್ದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.

  Recommended Video

  ಪವನ್ ಕಲ್ಯಾಣ್, ಅಮಿತಾಬ್ ಬಚ್ಚನ್ ಗೆ ಚಾಲೆಂಜ್ ಮಾಡಿದ ಚಿರಂಜೀವಿ. | Chiranjeevi

  ಈ ಚಿತ್ರದ ಮೂಲಕ ನಿರ್ದೇಶಕ ಡಿ. ಸತ್ಯಪ್ರಕಾಶ್ ಪರಿಚಿತರಾದರು. ಅವರ ಮೊದಲ ಚಿತ್ರಕ್ಕೆ ಪರಭಾಷೆಯ ನಿರ್ಮಾಪಕರಿಂದ ರೀಮೇಕ್ ಹಕ್ಕುಗಳಿಗಾಗಿ ಸಾಕಷ್ಟು ಬೇಡಿಕೆ ಬಂದಿತ್ತು. ತೆಲುಗಿನಲ್ಲಿಯೂ ಈ ಚಿತ್ರ ರೀಮೇಕ್ ಆಗಿತ್ತು. ಈಗ ಮರಾಠಿ ಚಿತ್ರರಂಗಕ್ಕೂ ಈ ಚಿತ್ರ ಹೋಗುತ್ತಿದೆ. ಮುಂದೆ ಓದಿ...

  ಮರಾಠಿಗೆ ರೀಮೇಕ್

  ಮರಾಠಿಗೆ ರೀಮೇಕ್

  ಮರಾಠಿಯ ಪ್ರಸಿದ್ಧ ನಿರ್ಮಾಣ ಸಂಸ್ಥೆಯೊಂದು 'ರಾಮಾ ರಾಮಾ ರೇ' ಚಿತ್ರದ ಮರಾಠಿ ಅವತರಣಿಕೆ ನಿರ್ಮಿಸಲು ಮುಂದೆ ಬಂದಿದೆ. ನಿರ್ದೇಶಕ ಸತ್ಯಪ್ರಕಾಶ್ ಅವರ ಸತ್ಯ ಪಿಕ್ಚರ್ಸ್ ಸಹಯೋಗದಲ್ಲಿಯೇ ಈ ರೀಮೇಕ್ ಸಿನಿಮಾ ಸೆಟ್ಟೇರುತ್ತಿರುವುದು ವಿಶೇಷ.

  ಯೂಟ್ಯೂಬ್‌ನಲ್ಲಿ 'ರಾಮಾ ರಾಮಾ ರೇ' ಸಿನಿಮಾ ನೋಡಿ ನಿರ್ಮಾಪಕರಿಗೆ ದುಡ್ಡು ಕಳಿಸಿದ ಅಭಿಮಾನಿಯೂಟ್ಯೂಬ್‌ನಲ್ಲಿ 'ರಾಮಾ ರಾಮಾ ರೇ' ಸಿನಿಮಾ ನೋಡಿ ನಿರ್ಮಾಪಕರಿಗೆ ದುಡ್ಡು ಕಳಿಸಿದ ಅಭಿಮಾನಿ

  ಲಾಕ್ ಡೌನ್ ನಂತರ ಆರಂಭ

  ಲಾಕ್ ಡೌನ್ ನಂತರ ಆರಂಭ

  ಲಾಕ್ ಡೌನ್ ತೆರವುಗೊಂಡ ನಂತರ ರೀಮೇಕ್ ಸಂಬಂಧಿಸಿದ ಚಟುವಟಿಕೆಗಳು ಆರಂಭವಾಗಲಿವೆ. ಆ ಬಳಿಕವೇ ಅದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸತ್ಯಪ್ರಕಾಶ್ ಬಯಸಿದ್ದಾರೆ.

  ರಾಕ್ ಲೈನ್ ವೆಂಕಟೇಶ್ ನಿರ್ಮಾಣ

  ರಾಕ್ ಲೈನ್ ವೆಂಕಟೇಶ್ ನಿರ್ಮಾಣ

  ರಾಮಾ ರಾಮಾ ರೇ ತೆಲುಗಿನಲ್ಲಿ 'ಆಟಗಾಧಾರ ಶಿವ' ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು. ರಾಕ್ ಲೈನ್ ವೆಂಕಟೇಶ್ ಈ ಚಿತ್ರದ ಹಕ್ಕುಗಳನ್ನು ಪಡೆದು ತೆಲುಗಿನಲ್ಲಿ ನಿರ್ಮಿಸಿದ್ದರು.

  'ಒಂದಲ್ಲಾ ಎರಡಲ್ಲಾ'ಗೆ 2 ರಾಷ್ಟ್ರ ಪ್ರಶಸ್ತಿ: ನಿರ್ದೇಶಕ ಸತ್ಯಪ್ರಕಾಶ್ ಸಂತಸ'ಒಂದಲ್ಲಾ ಎರಡಲ್ಲಾ'ಗೆ 2 ರಾಷ್ಟ್ರ ಪ್ರಶಸ್ತಿ: ನಿರ್ದೇಶಕ ಸತ್ಯಪ್ರಕಾಶ್ ಸಂತಸ

  ದೊಡ್ಡಣ್ಣ ನಟಿಸಿದ್ದರು

  ದೊಡ್ಡಣ್ಣ ನಟಿಸಿದ್ದರು

  ಉದಯ ಶಂಕರ್, ಹೈಪರ್ ಆದಿ, ಚಮಕ್ ಚಂದ್ರು ಮುಂತಾದವರು ನಟಿಸಿದ್ದ ಚಿತ್ರವನ್ನು ಚಂದ್ರ ಸಿದ್ಧಾರ್ಥ್ ನಿರ್ದೇಶಿಸಿದ್ದರು. ಕನ್ನಡದಲ್ಲಿ ವಾಸುಕಿ ವೈಭವ್ ಅವರ ತಂದೆ ಜಯರಾಮ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಹಿರಿಯ ನಟ ದೊಡ್ಡಣ್ಣ ನಿರ್ವಹಿಸಿದ್ದರು.

  ಸತ್ಯಪ್ರಕಾಶ್ ನಿರ್ದೇಶನದಲ್ಲಿ ಪುನೀತ್

  ಸತ್ಯಪ್ರಕಾಶ್ ನಿರ್ದೇಶನದಲ್ಲಿ ಪುನೀತ್

  ಸತ್ಯಪ್ರಕಾಶ್ ನಿರ್ದೇಶನದ ಎರಡನೆಯ ಸಿನಿಮಾ 'ಒಂದಲ್ಲಾ ಎರಡಲ್ಲಾ' ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು. ಈ ಚಿತ್ರದ ರೀಮೇಕ್ ಹಕ್ಕುಗಳಿಗೂ ಉತ್ತಮ ಬೇಡಿಕೆ ಬಂದಿದೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ಸತ್ಯ ಪ್ರಕಾಶ್ ಅವರಿಗೆ ಒಳ್ಳೆಯ ಅವಕಾಶ ಲಭಿಸಿದೆ. ಫ್ಯಾಂಟಸಿ ಕಥೆಯೊಂದನ್ನು ಸತ್ಯಪ್ರಕಾಶ ಸಿದ್ಧಪಡಿಸಿದ್ದು, ಎರಡು ವಿಭಿನ್ನ ಕಥಾಹಂದರದ ಚಿತ್ರಗಳ ಬಳಿಕ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ.

  English summary
  D Satya Prakash directed Kannada movie Rama Rama Re will be remade in Marathi soon.
  Thursday, May 14, 2020, 17:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X