For Quick Alerts
  ALLOW NOTIFICATIONS  
  For Daily Alerts

  ಭಜರಂಗಿ-2 ಸೆಟ್ ನಲ್ಲಿ ಮತ್ತೆ ಬೆಂಕಿ ಅವಘಡ, 4 ದಿನಗಳಲ್ಲಿ 3 ವಿಘ್ನ: ಬೇಸರ ವ್ಯಕ್ತಪಡಿಸಿದ ಶಿವಣ್ಣ

  |
  ಭಜರಂಗಿ ಬಂದು ಬೆಂಕಿಯಿಂದ ಕಾಪಾಡ್ದ ಅಂದ್ರು ಶಿವಣ್ಣ | SHIVANNA | A HARSHA | BHAVANA | FILMIBEAT KANNADA

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ಸೆಟ್ ಗೆ ಮತ್ತೆ ಬೆಂಕಿ ಬಿದ್ದಿದೆ. ಮೊನ್ನೆಯಷ್ಟೆ ಚಿತ್ರೀಕರಣ ವೇೆಳೆ ಸೆಟ್ ಗೆ ಬೆಂಕಿ ಬಿದ್ದು ಸೆಟ್ 1 ಗಂಟೆ ಹೊತ್ತಿ ಉರಿದಿತ್ತು. ಈಗ ಎರಡನೆ ಬಾರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಟ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ದಾವಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಶಾಕ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ.

  ಸೆಟ್ ಒಳಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ 200ಕ್ಕು ಹೆಚ್ಚು ಕಲಾವಿದರಿದ್ದರು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಕಳೆದ ಐದು ದಿನಗಳಿಂದ ಬೆಂಗಳೂರಿನ ಹೊರವಲಯ ಮೋಹನ್ ಬಿ ಕೆರೆ ಸ್ಟೂಡಿಯೊದಲ್ಲಿ'ಭಜರಂಗಿ 2' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

  ಇಂಡಸ್ಟ್ರಿಯಲ್ಲಿ ಕೆಟ್ಟ ಹೆಸರು ಬಂದರೆ ಶಾಪ ಎಂದು ಶಿವರಾಜ್ ಕುಮಾರ್ ಹೇಳಿದ್ದೇಕೆ?

  ಆದರೆ ಚಿತ್ರೀಕರಣಕ್ಕೆ ಪದೇ ಪದೇ ವಿಘ್ನ ಎದುರಾಗುತ್ತಿದೆ. ಜನವರಿ 16 ರಂದು ಮೊದಲ ಬಾರಿಗೆ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಜನವರಿ 18ರಂದು ಕಲಾವಿದರಿದ್ದ ಬಸ್ ಹೈ ಓಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅವಘಟ ಸಂಬವಿಸಿತ್ತು. ನೆಲಮಂಗಲ ತಾಲ್ಲೂಕ್ ಶ್ರೀನಿವಾಸಪುರ ಬಳಿ ಘಟನೆ ಈ ನಡೆದಿದ್ದು ಸುಮಾರು 60 ಮಂದಿ ಕಲಾವಿದರು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು.

  ಈಗ ಮೂರನೆ ಬಾರಿ ಬೆಂಕಿ ಕಾಣಿಸಿಕೊಂಡಿದ್ದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ಈ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಶಿವಣ್ಣ "ಶಾಕ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿದೆ. ಯಾರಿಗೂ ಏನು ಆಗಿಲ್ಲ. ಸೆಟ್ ಹೋದರು ಪರವಾಗಿಲ್ಲ. ಆದರೆ ಯಾರಿಗೂ ಏನು ಆಗಿಲ್ಲ. ತುಂಬ ಬೇಸರ ಆಗುತ್ತೆ, ಮೂರನೆ ಸಲ ಹೀಗೆ ಆಗುತ್ತಿದೆ. ನೋವು ಆಗಿದೆ. ಯಾರಿಗೂ ಏನು ಆಗಿಲ್ಲ ಎನ್ನುವುದೆ ಸಮಾಧಾನ. ದೇವರಿದ್ದಾನೆ ಕಾಪಾಡುತ್ತಾನೆ" ಎಂದು ಹೇಳಿದ್ದಾರೆ.

  ಭಜರಂಗಿ-2 ಚಿತ್ರದ ಸ್ಟಂಟ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತಂತೆ. ರವಿ ವರ್ಮ ಕೂಡ ಇದ್ದರು ಎಂದು ಹೇಳಲಾಗುತ್ತಿದೆ. ಸುಮಾರು ಕೋಟಿ ವೆಚ್ಚದಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಸೆಟ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಯಾಕೆ ಪದೇ ಪದೇ ವಿಘ್ನ ಎದುರಾಗುತ್ತಿದೆ ಎನ್ನುವುದು ಚಿತ್ರತಂಡ ದೊಡ್ಡ ಪ್ರಶ್ನೆಯಾಗಿದೆ. ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು ಚಿತ್ರಕ್ಕೆ ನಿರ್ಮಾಪಕ ಜಯಣ್ಣ ಬಂಡವಾಳ ಹೂಡುತ್ತಿದ್ದಾರೆ.

  English summary
  Second time Fire at Shivaraj Kumar starrer Bajrangi-2 set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X