For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿ 'ಕಥಾಸಂಗಮ'ದ ಏಳು ನಿರ್ದೇಶಕರಲ್ಲಿ ನೀವೂ ಒಬ್ಬರಾಗಬೇಕೇ?

  By Suneel
  |

  'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಈಗ ಪುಟ್ಟಣ್ಣ ಕಣಗಾಲ್ ರವರ 'ಕಥಾ ಸಂಗಮ' ಚಿತ್ರದ ಟೈಟಲ್ ಮೂಲಕ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.[ಪುಟ್ಟಣ್ಣ ಕಣಗಾಲ್ 'ಕಥಾ ಸಂಗಮ'ದ ಮೂಲಕ ರಿಷಬ್ ಶೆಟ್ಟಿ ಹೊಸ ಸಾಹಸ]

  ಪುಟ್ಟಣ್ಣ ಕಣಗಾಲ್ 'ಕಥಾ ಸಂಗಮ'ದಲ್ಲಿ ಮೂರು ಕಥೆಗಳಿದ್ದವು. ಆದರೆ ರಿಷಬ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಿರುವ 'ಕಥಾ ಸಂಗಮ' ಚಿತ್ರಕ್ಕೆ ಏಳು ಕಥೆಗಳಿರಲಿವೆ. ಹೀಗಾಗಿ ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಹಲವರಿಂದ ಕಥೆಗಳನ್ನು ಸಂಗ್ರಹಿಸಲು ಮುಂದಾಗಿದ್ದು, ಜೊತೆಗೆ ನಿರ್ದೇಶಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಅಲ್ಲದೇ ಡೈರೆಕ್ಟರ್ ಕ್ಯಾಪ್ ತೊಡಲು ಆಸಕ್ತಿ ಇರುವವರಿಂದ ಅವರ ಕಿರುಚಿತ್ರಗಳು, ಮ್ಯೂಸಿಕ್ ವಿಡಿಯೋಗಳನ್ನು ಆಹ್ವಾನಿಸಿದ್ದಾರೆ.

  ಹೌದು, ನಿಮಗೇನಾದರೂ 'ಕಥಾ ಸಂಗಮ' ಚಿತ್ರದ ಏಳು ನಿರ್ದೇಶಕರಲ್ಲಿ ಒಬ್ಬರಾಗುವ ಆಸೆ ಇದ್ದರೇ ನೀವು ನಿರ್ದೇಶನ ಮಾಡಿರುವ ಕಿರುಚಿತ್ರಗಳು, ಸಾಕ್ಷ್ಯ ಚಿತ್ರಗಳು, ಮ್ಯೂಸಿಕ್ ವಿಡಿಯೋಗಳು, ಕಾರ್ಪೋರೇಟ್ ವಿಡಿಯೋಗಳನ್ನು ರಿಷಬ್ ಶೆಟ್ಟಿ ಅವರಿಗೆ ಕಳುಹಿಸಿಕೊಡಿ. ನಿಮ್ಮ ಚಿತ್ರವು ಅತ್ಯುತ್ತಮವಾಗಿದ್ದು ಆಯ್ಕೆ ಆದಲ್ಲಿ 'ಕಥಾ ಸಂಗಮ' ಚಿತ್ರದ ಏಳು ನಿರ್ದೇಶನರಲ್ಲಿ ನೀವು ಒಬ್ಬರಾಗಬಹುದು. ಈ ಬಗ್ಗೆ ಸ್ವತಃ ರಿಷಬ್ ತಮ್ಮ ಫೇಸ್ ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಅಂದಹಾಗೆ ರಿಷಬ್ ಶೆಟ್ಟಿ ರವರು ಕೇಳಿರುವ ವಿಡಿಯೋಗಳನ್ನು ಕಳುಹಿಸಲು 'Creative Guyz' ಎಂಬ ಆಪ್(App) ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ವಿಳಾಸ ಸಹಿತ ವಿಡಿಯೋಗಳನ್ನು ಸಬ್‌ಮಿಟ್ ಮಾಡಬೇಕು. ಆಪ್ ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ

  English summary
  Director Rishab Shetty has giving golden opportunity for aspiring directors. Movie Directing Aspirants can send their best of work (Music Video, Short Films, Documentaries) and they can get a chance to be one of the 7 directors in 'Kathasangama' movie produceing by Rishab Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X