For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಕಿರುತೆರೆ ನಟಿ ಗೀತಾ ಭಟ್, ಅಭಿಷೇಕ್ ವಿಚಾರಣೆ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಆಂತರಿಕ ಭದ್ರತಾ ದಳ ಸಹ ತನಿಖೆ ನಡೆಸುತ್ತಿದ್ದು, ಹಲವು ಕಿರುತೆರೆ ಕಲಾವಿದರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.

  ಐಎಸ್‌ಡಿ ಪೊಲೀಸರ ನೋಟಿಸ್ ಹಿನ್ನೆಲೆ 'ಬ್ರಹ್ಮಗಂಟು' ಖ್ಯಾತಿಯ ನಟಿ ಗೀತಾ ಭಟ್ ಮತ್ತು ನಟ ಅಭಿಷೇಕ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಐಎಸ್‌ಡಿ ಪೊಲೀಸರು ಇತ್ತೀಚಿಗಷ್ಟೆ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕಿರುತೆರೆ ಕಲಾವಿದರಿಗೆ ಡ್ರಗ್ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

  ನಿಜಜೀವನದಲ್ಲೂ ಅವಮಾನ ಎದುರಿಸಿದ 'ಬ್ರಹ್ಮಗಂಟು' ಗುಂಡಮ್ಮನ ಕಣ್ಣೀರ ಕಥೆನಿಜಜೀವನದಲ್ಲೂ ಅವಮಾನ ಎದುರಿಸಿದ 'ಬ್ರಹ್ಮಗಂಟು' ಗುಂಡಮ್ಮನ ಕಣ್ಣೀರ ಕಥೆ

  ಈ ಸಂಬಂಧ ನಟ ಲೂಸ್ ಮಾದ ಯೋಗೇಶ್, ಕ್ರಿಕಟರ್ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಎನ್‌ಸಿ ಅಯ್ಯಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

  ಇಂದು ಗೀತಾ ಭಟ್ ಮತ್ತು ಅಭಿಷೇಕ್ ಐಎಸ್‌ಡಿ ಪೊಲೀಸರ ಮುಂದೆ ವಿಚಾರಣೆ ಎದುರಿಸಿದ್ದಾರೆ. ಶಾಂತಿನಗರದಲ್ಲಿರುವ ಐಎಸ್‌ಡಿ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಸಹಕರಿಸುತ್ತಿದ್ದಾರೆ.

  ಸಾಯೋದು ಇದ್ದಿದ್ದೆ ಆದ್ರೆ ಇದ್ದಾಗ ಹೇಗೆ ಬದುಕಿದ್ವಿ ಅನ್ನೋದೇ ಇಲ್ಲಿ ಮುಖ್ಯ | Raami Reddy | Filmibeat Kannada

  ಮತ್ತೊಂದೆಡೆ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂಜನಾ, ರಾಗಿಣಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ಸಹ ನಡೆಸಿದ್ದಾರೆ.

  English summary
  Drugs in Sandalwood: Serial actress Geetha Bhat and Abhishek Attend to ISD police enquiry today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X