»   » ಚೆನ್ನೈನಲ್ಲಿ ಶಾರೂಖ್ ಖಾನ್ ಕನ್ನಡ ಮಾತನಾಡಿದಾಗ!

ಚೆನ್ನೈನಲ್ಲಿ ಶಾರೂಖ್ ಖಾನ್ ಕನ್ನಡ ಮಾತನಾಡಿದಾಗ!

Posted By:
Subscribe to Filmibeat Kannada

ಕನ್ನಡದ ಸೆಲೆಬ್ರಿಟಿಗಳು ಕನ್ನಡ ಮಾತನಾಡಲು ಹಿಂದೆಮುಂದೆ ನೋಡುತ್ತಿರ ಬೇಕಾದರೆ ಬಾಲಿವುಡ್ ಚಿತ್ರ ಜಗತ್ತಿನ ಚಕ್ರವರ್ತಿ ಶಾರೂಖ್ ಖಾನ್ ಕನ್ನಡ ಮಾತನಾಡಲು ಪ್ರಯತ್ನಿಸಿ, ಅಲ್ವಸ್ವಲ್ಪ ಕನ್ನಡ ಮಾತನಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

ಶಾರೂಖ್ ಕನ್ನಡ ಮಾತನಾಡಲು ಟೀಚರ್ ತರ ಅವರಿಗೆ ಸಹಾಯ ಮಾಡಿದ್ದು ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ. ಇದು ನಡೆದದ್ದು ಬೆಂಗಳೂರಿನಲ್ಲಲ್ಲ, ಚೆನ್ನೈನಲ್ಲಿ ಎನ್ನುವುದು ವಿಶೇಷ.

ಶಾರೂಖ್ ಖಾನ್, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ ಪ್ರಮುಖ ಭೂಮಿಕೆಯಲ್ಲಿರುವ, ಫರಾ ಖಾನ್ ನಿರ್ದೇಶನದ 'ಹ್ಯಾಪಿ ನ್ಯೂ ಈಯರ್' ಚಿತ್ರ ಈ ದೀಪಾವಳಿಗೆ ಭರ್ಜರಿ ಎಂಟ್ರಿ ಕೊಡಲು ಸಿದ್ದವಾಗಿದೆ.

ಬಲಿಪಾಡ್ಯಮಿಯ ದಿನವಾದ ಶುಕ್ರವಾರ ಅಕ್ಟೋಬರ್ 24ರಂದು ಚಿತ್ರ ಬಿಡುಗಡೆಯಾಗಲಿದೆ. ಶಾರೂಖ್ ಒಡೆತನದ ರೆಡ್ ಚಿಲ್ಲಿ ಎಂಟರ್ಟೈನ್ಮೆಂಟ್ ಬ್ಯಾನರಡಿಯಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಸುಮಾರು 85 ಕೋಟಿ ರೂಪಾಯಿ ( ಕಲಾವಿದರ ಸಂಭಾವನೆ ಹೊರತು ಪಡಿಸಿ) ನಿರ್ಮಾಣ ವೆಚ್ಚದಲ್ಲಿ ಬರುತ್ತಿರುವ ಈ ಚಿತ್ರದ ಪ್ರಚಾರಕ್ಕೆ ಶಾರೂಖ್ ಚಿತ್ರತಂಡದೊಂದಿಗೆ ದೇಶ, ವಿದೇಶ ಸುತ್ತುತ್ತಿದ್ದಾರೆ.

ಹಾಗೆಯೇ, ಚೆನ್ನೈನಲ್ಲಿ ಚಿತ್ರ ಪ್ರಚಾರಕ್ಕೆಂದು ಬಂದಾಗ ಶಾರೂಖ್ ಕನ್ನಡ ಮಾತಾನಾಡಲು ಪ್ರಯತ್ನಿಸಿದ್ದು, ಮಂಗಳೂರಿನಲ್ಲಿ ಹುಟ್ಟಿದ ಬಗ್ಗೆ ಹೇಳಿದ್ದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಶಾರೂಖ್, ಜ್ಯೂ.ಬಚ್ಚನ್, ದೀಪಿಕಾ ಫುಲ್ ಡ್ಯಾನ್ಸ್

ಚಿತ್ರ ಪ್ರಚಾರಕ್ಕೆಂದು ಬಂದಿದ್ದ ತಂಡ ವೇದಿಕೆಯಲ್ಲಿ ತಮ್ಮ 'ಹ್ಯಾಪಿ ನ್ಯೂ ಈಯರ್' ಚಿತ್ರದ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಕುಣಿದು ಕುಪ್ಪಳಿಸಿ ಎಲ್ಲರನ್ನೂ ರಂಜಿಸಿದರು. ವೇದಿಕೆಯಲ್ಲಿ ಶಾರೂಖ್, ಅಭಿಷೇಕ್, ದೀಪಿಕಾ, ಸೋನು ಸೂದ್ ಮುಂತಾದವರಿದ್ದರು.

ದೀಪಿಕಾಗೆ ಸ್ವಲ್ವ ಮಾತ್ರ ಕನ್ನಡ ಬರುತ್ತಂತೆ

ಇಲ್ಲೇ ಹುಟ್ಟಿ ಬೆಳೆದಿದ್ದರೂ, ದೀಪಿಕಾ ನನಗೆ ಕನ್ನಡ ಸ್ವಲ್ಪ ಮಾತ್ರ ಬರುತ್ತದೆ ಎಂದು ಕನ್ನಡ ಮಾಧ್ಯಮದವರ ಮುಂದೆ ಹೇಳಿದರು. ಕಾರ್ಯಕ್ರಮ ಮುಗಿಸಿ ಶಾರೂಖ್ ಜೊತೆ ಹೊರಗೆ ಬರುತ್ತಿದ್ದ ದೀಪಿಕಾಗೆ ಕನ್ನಡ ಮಾಧ್ಯಮದವರು ಎದುರಾದರು. ಕನ್ನಡ ನನಗೆ ನನಗೆ ಸ್ವಲ್ಪ..ಸ್ವಲ್ಪ ಬರುತ್ತೆ, ಮಾತನಾಡಲು ಟ್ರೈ ಮಾಡುತ್ತೇನೆಂದರು.

ಮಾತು ಮುಂದುವರಿಸಿದ ದೀಪಿಕಾ

ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದು ನಿರರ್ಗಳವಾಗಿ ಕನ್ನಡ ಮಾತನಾಡಿದ ದೀಪಿಕಾ, ನಾನು ಮಂಗಳೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದವಳು. ಹ್ಯಾಪಿ ನ್ಯೂ ಈಯರ್ ಚಿತ್ರ ನೀವೆಲ್ಲಾ ನೋಡಿ ಎಂದು ಕನ್ನಡದಲ್ಲಿ ಮನವಿ ಮಾಡಿದರು. ದೀಪಿಕಾ ಮಾತನಾಡುತ್ತಿರುವಾಗ ಮಧ್ಯೆ ಮಧ್ಯೆ ಮಾತನಾಡುತ್ತಿದ್ದ ಶಾರೂಖ್ ಖಾನಿಗೆ ದೀಪಿಕಾ ವ್ಯಂಗ್ಯವಾಗಿ ಗದರಿಸಿದರೂ ಕೂಡಾ.

ಶಾರೂಖ್ ಕನ್ನಡ ಮಾತನಾಡಿದ್ದು ಹೀಗೆ

ಮಾಧ್ಯಮದವರು ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದಾಗ ದೀಪಿಕಾ, ಶಾರೂಖ್ ಗೆ ಸಾಥ್ ನೀಡಿದರು. ಇದು ಆರು ಜನರ ಕಥೆಯ ಸಿನಿಮಾವಿದು, ಎಲ್ಲರೂ ನೋಡಿ, ನಮಸ್ಕಾರ ಎಂದು ಶಾರೂಖ್ ಕನ್ನಡದಲ್ಲಿ ಹೇಳಿದರು. ಶಾರೂಖ್ ಇಷ್ಟು ಕನ್ನಡದಲ್ಲಿ ಮಾತನಾಡಲು ದೀಪೀಕಾ ಟೀಚರ್ ಆಗಿದ್ದಿದ್ದು ವಿಶೇಷ.

ಕನ್ನಡದಲ್ಲಿ ನಟಿಸಿದ್ದೆ ಎಂದಾಗ ಶಾರೂಖ್ ಹೌದಾ ಅಂದ್ರು

ಕನ್ನಡದಲ್ಲಿ ನಾನು ಈ ಹಿಂದೆ ಉಪೇಂದ್ರ ಜೊತೆ ಐಶ್ವರ್ಯ ಚಿತ್ರದಲ್ಲಿ ನಟಿಸಿದ್ದೆ ಎಂದು ದೀಪಿಕಾ ಹೇಳಿದಾಗ ಶಾರೂಖ್ ಹೌದಾ ಎಂದು ಹುಬ್ಬೇರಿಸಿದರು. ಕನ್ನಡದಲ್ಲಿ ಅವಕಾಶ ಸಿಕ್ಕಿದ್ರೆ ಖಂಡಿತಾ ನಟಿಸುತ್ತೇನೆ ಅಂದ್ರು ದೀಪಿಕಾ.

ನಾನೂ ಕನ್ನಡದಲ್ಲಿ ನಟಿಸುತ್ತೇನೆಂದ್ರು ಶಾರೂಖ್

ಸಾರ್ ನೀವು ಕನ್ನಡದಲ್ಲಿ ನಟಿಸುತ್ತೀರಾ ಎಂದಾಗ why not ಎಂದ ಶಾರೂಖ್, ದೀಪಿಕಾ ಹೇಳಿದ್ರೆ ನಾನು ನಟಿಸುತ್ತೇನೆ. ನಾನು ಹುಟ್ಟಿದ್ದು ಮಂಗಳೂರಿನಲ್ಲಿ, ಆಗ ನನಗೆ ಕನ್ನಡ ಬರುತ್ತಿತ್ತು. ನಂತರ ನಾನು ಹೈದರಾಬಾದಿಗೆ ಶಿಫ್ಟ್ ಆದೆ. ದೀಪಿಕಾ ಮತ್ತು ನಾನು ಅಣ್ಣ ತಂಗಿ ಇದ್ದ ಹಾಗೇ ಎಂದರು. ಬೇರೆ ಬೇರೆ ಭಾಷೆಯಲ್ಲಿ ನಟಿಸಬೇಕೆನ್ನುವುದು ನನ್ನ ಆಸೆ ಕೂಡಾ ಎಂದು ಶಾರೂಖ್ ಹೇಳಿದರು.

English summary
Bollywood Badshah Shahrukh Khan tried to speak in Kannada in Chennai during Happy New Year film promotion. Deepika Padukone helped Shahrukh to speak in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada