twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪನನ್ನು ಸುಖವಾಗಿ ನೋಡಿಕೊಳ್ಳಲು ಆಗಲಿಲ್ಲ: ನೋವಿನ ಕಥೆ ಹೇಳಿದ ಶಂಕರ್ ಅಶ್ವತ್ಥ್

    |

    'ಚಾಮಯ್ಯ ಮೇಷ್ಟ್ರು' ಎಂದೇ ಹೆಸರಾದ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅಭಿನಯ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿಸಿದೆ. ಅವರ ಮಗ ಶಂಕರ್ ಅಶ್ವತ್ಥ್ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡರೂ ಜೀವನೋಪಾಯಕ್ಕಾಗಿ ಕ್ಯಾಬ್ ಓಡಿಸುವ ಮಾರ್ಗವನ್ನು ಕಂಡುಕೊಂಡವರು. ಅದನ್ನು ಅವರು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ.

    Recommended Video

    Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

    ತಮ್ಮ ವೃತ್ತಿಯ ಅನುಭವಗಳ ಜತೆಗೆ ಸಿನಿಮಾಗಳಲ್ಲಿನ ತಮ್ಮ ಅನುಭವ ಹಾಗೂ ತಂದೆಯ ನೆನಪುಗಳ ಬುತ್ತಿಯನ್ನು ಅವರು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೆರೆದಿಡುತ್ತಾರೆ. ಅವರು ಹಂಚಿಕೊಳ್ಳುವ ಹೆಚ್ಚಿನ ಘಟನೆಗಳು ಓದುಗರನ್ನು ಭಾವುಕರನ್ನಾಗಿಸುತ್ತವೆ.

    ನಟ ಅಶ್ವಥ್‌ ಮನೆಗೆ ಬಂದ ಪುನೀತ್: ಅಪ್ಪು ಬಗ್ಗೆ ಅಶ್ವಥ್‌ ಪುತ್ರ ಹೇಳಿದ್ದೇನು?ನಟ ಅಶ್ವಥ್‌ ಮನೆಗೆ ಬಂದ ಪುನೀತ್: ಅಪ್ಪು ಬಗ್ಗೆ ಅಶ್ವಥ್‌ ಪುತ್ರ ಹೇಳಿದ್ದೇನು?

    ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದ ದುಡಿಮೆಯ ಮೂಲಕವೇ ಜೀವನವನ್ನು ಸುಭದ್ರಗೊಳಿಸಿಕೊಳ್ಳಲು ಅಶ್ವತ್ಥ್ ಹಾಗೂ ಶಂಕರ್ ಅಶ್ವತ್ಥ್ ಅವರಿಗೆ ಸಾಧ್ಯವಾಗಲಿಲ್ಲ. ತಂದೆಯನ್ನು ಕೊನೆಯ ಕ್ಷಣದಲ್ಲಿ ಸುಖವಾಗಿ ಇರುವಂತೆ ನೋಡಿಕೊಳ್ಳಲು ತಮ್ಮಿಂದ ಸಾಧ್ಯವಾಗಲಿಲ್ಲ ಎಂದು ಶಂಕರ್ ಅಶ್ವತ್ಥ್ ನೋವು ಹಂಚಿಕೊಂಡಿದ್ದಾರೆ. 'ಕರ್ಣ' ಚಿತ್ರ ಅವರಲ್ಲಿ ಹಿಂದಿನ ದಿನಗಳ ನೆನಪನ್ನು ಮರುಕಳಿಸುವಂತೆ ಮಾಡಿದೆ. ಮುಂದೆ ಓದಿ...

    ವಿಧಿ ಲಿಖಿತವೇ ನಿಶ್ಚಿತ

    ವಿಧಿ ಲಿಖಿತವೇ ನಿಶ್ಚಿತ

    ಅವತ್ತು! ಇವತ್ತು! "ಕರ್ಣ" ಚಿತ್ರ ಹೃದಯ ಮುಟ್ಟಿತು. ಟಿವಿಯಲ್ಲಿ " ಕರ್ಣ" ಸಿನಿಮಾ ನೋಡಿದಾಗ ನನ್ನ ಜೀವನದ ಘಟನೆ ನೆನಪು ಬಂದು ಇದನ್ನು ತಿಳಿಸುತ್ತಿದ್ದೇನೆ. ಈ ವಿಷಯ ನಾನು ತಿಳಿಸಲು ಕಾರಣ ಯಾರಿಂದಲೂ ಲೈಕ್ಸ್ ಗಿಟ್ಟಿಸಕ್ಕಾಗಲಿ ಪ್ರಚಾರಕ್ಕಾಗಲಿ ಅಲ್ಲ. ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಇದನ್ನು ಕೆಲವರು ಒಪ್ಪದೇ ಅತೀ ಬುದ್ಧಿವಂತಿಕೆಯಿಂದ ಯಾವುದರಲ್ಲಿ ಬೇಕಾದರೂ ತಪ್ಪನ್ನು ಹುಡುಕುತ್ತಾರೆ. ಅದೇ ಬುದ್ದಿವಂತರನ್ನು ಇಂದು ಕೊರೊನಾ ಬಗ್ಗೆ ಪ್ರಶ್ನಿಸಿದರೆ? ನೇರವಾದ ಉತ್ತರ ಸಿಕ್ಕಲ್ಲ. ಎಲ್ಲಾ ಭಗವಂತನ ಇಚ್ಛೆ ಎಂದು ಶಂಕರ್ ಅಶ್ವತ್ಥ್ ಬರೆದಿದ್ದಾರೆ.

    ಎಲ್ಲ ಕಡೆಯೂ ಸೋಲು

    ಎಲ್ಲ ಕಡೆಯೂ ಸೋಲು

    ನಾನೂ ಜೀವನದಲ್ಲಿ ಏನೇನೋ ಮಾಡಿದೆ ಆದರೆ ಎಲ್ಲೂ ಉದ್ಧಾರ ಆಗಲಿಲ್ಲ. ಡಿ.ಫಾರ್ಮ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ. ಮೆಡಿಕಲ್ ವ್ಯಾಪಾರ ಮಾಡಿದ್ರೂ ಅಲ್ಲೂ ಸೋಲು. ಕೌನ್ ಬನೇಗ ಕರೋಡ್‌ಪತಿಗೆ ಸೆಲಕ್ಟ್ ಆಗಿ ಇಪ್ಪತ್ತು ವರ್ಷದ ಹಿಂದೆನೇ ನನ್ನ ತಂದೆ ಜೊತೆ ಹೋಗಿದ್ದೆ, ಅಲ್ಲೂ ಟುಸ್. ಸೀರಿಯಲ್ ಬಹಳ ಇಷ್ಟಪಟ್ಟು ತಂದೆಯನ್ನು ಒಪ್ಪಿಸಿ ಕಷ್ಟಪಟ್ಟು ಮಾಡಿದೆ, ಅಲ್ಲೂ ಸೋತೆ. ಯಾವುದಕ್ಕೂ ಜಗ್ಗದೆ ಹಾಗೆ ಜೀವನದಲ್ಲಿ ಮುಂದುವರೆದೆ ಕೊನೆಗೂ ನಾನು ಅಂದುಕೊಂಡಂತೆ ನನ್ನ ತಂದೆಯನ್ನು ಸುಖವಾಗಿ ನೋಡಿಕೊಳ್ಳಲು ಆಗಲಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ.

    ಊಬರ್ ಚಾಲನೆ ಮಾಡುವಾಗ ತಂದೆ ಅಶ್ವಥ್ ಫೋಟೋ ನೋಡಿ ಭಾವುಕರಾದ ಶಂಕರ್ ಅಶ್ವಥ್ಊಬರ್ ಚಾಲನೆ ಮಾಡುವಾಗ ತಂದೆ ಅಶ್ವಥ್ ಫೋಟೋ ನೋಡಿ ಭಾವುಕರಾದ ಶಂಕರ್ ಅಶ್ವಥ್

    ಕರ್ಣನ ನೆನಪಲ್ಲಿ...

    ಕರ್ಣನ ನೆನಪಲ್ಲಿ...

    ಆದರೆ ಬರೀ ವಿಧಿಯನ್ನೇ ನಿಂದಿಸುತ್ತಾ ಸುಮ್ಮನೆ ಕೂರಲಿಲ್ಲ. ಕೈಲಾದದ್ದನ್ನು ಮಾಡುತ್ತಲೇ ಇಲ್ಲಿಯವರೆಗೂ ಬಂದೆ. ಮತ್ತೆ ಈಗಿನ ಸಂದರ್ಭ ಅರವತ್ತು ವಯಸ್ಸಾದವರ ಸಂಕಷ್ಟ ಎಲ್ಲವನ್ನು ಮೆಲಕು ಹಾಕುತ್ತಾ ಇದ್ದೆ. ಅದಿರಲಿ ಇದನ್ನು ಪ್ರಸ್ತಾಪ ಮಾಡುವುದಕ್ಕೆ ಕಾರಣ, 'ಕರ್ಣ' ಚಿತ್ರದಲ್ಲಿ ನಾಯಕ ತನ್ನ ತಂದೆಗೆ ಸಹಾಯ ಮಾಡಲು ವ್ಯಥೆ ಪಡುವುದು, ಹಾಗೂ ತಂದೆಗೆ ಅರವತ್ತು ವಯಸ್ಸಾದರಿಂದ ಕಿಡ್ನಿ ಸ್ವೀಕರಿಸಲು ನಿರಾಕರಿಸುವುದು. ನೋಡಿ ಬರೆಯಬೇಕನ್ನಿಸಿತು ಬರೆದೆ.. ಎಂದು 'ಕರ್ಣ'ನ ನೆನಪಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಕೀಳಾಗಿ ಕಾಣುತ್ತಿದ್ದರು

    ಕೀಳಾಗಿ ಕಾಣುತ್ತಿದ್ದರು

    ಒಂದು ಸಮಯದಲ್ಲಿ ಜನ ಕ್ಯಾಬ್ ಡ್ರೈವರ್, ಟ್ಯಾಕ್ಸಿ ಡ್ರೈವರ್ ಅಂದರೆ ಬಹಳ ಕೀಳು ಎಂದು ಕಂಡಿದ್ದುಂಟು. ಇದು ನನ್ನ ವಿಷಯದಲ್ಲಿ ಅಲ್ಲ, ಆ ಸ್ಥಾನದಲ್ಲಿ ಬೇರೆಯವರನ್ನು ನೋಡಿ ಹೇಳುತ್ತಿದ್ದರು. ಈಗ ನೋಡಿ ಅದೇ ಸ್ಥಾನಕ್ಕೆ ಗೌರವಿಸಿ ನನಗೆ ಅದೇ ಪಾತ್ರ ಮಾಡಲು ಅವಕಾಶ ಕೊಟ್ಟಿದ್ದಾರೆ. ಅಂದರೆ ಭಗವಂತನ ಇಚ್ಚೆಯಿದ್ದರೆ ಒಂದು ಹುಲ್ಲು ಕಡ್ಡಿಯೂ ಅಸ್ತ್ರವಾಗಬಲ್ಲದು ಅವನ ಕೃಪೆ ಇರಬೇಕಷ್ಟೆ ಎಂದು ಇತ್ತೀಚೆಗೆ ಅವರು ಬರೆದುಕೊಂಡಿದ್ದರು.

    ಏನೋ ಹೇಳಲು ಬಂದ ಶಂಕರ್ ಅಶ್ವಥ್ ಗೆ 'ಬೇಡ' ಎಂದು ತಡೆದ ದರ್ಶನ್ಏನೋ ಹೇಳಲು ಬಂದ ಶಂಕರ್ ಅಶ್ವಥ್ ಗೆ 'ಬೇಡ' ಎಂದು ತಡೆದ ದರ್ಶನ್

    English summary
    Actor Shankar Ashwath has shared an emotional note as he was not able to care his father during his last years.
    Thursday, July 2, 2020, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X