ತೆರೆಮರೆಗೆ ಸರಿದ ಇನ್ನೆರಡು ಚಿತ್ರಮಂದಿರಗಳು: ಶಾಂತಲಾ, ಪದ್ಮಾಕ್ಕೆ ವಿದಾಯ

ಮಲ್ಟಿಪ್ಲೆಕ್ಸ್‌ಗಳು ಹೆಚ್ಚಾದಂತೆ ಏಕ ಪರದೆಯ ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚುತ್ತಾ ಅಲ್ಲಿ ಮಾಲ್‌ಗಳು ತಲೆ ಎತ್ತುತ್ತಿರುವುದು ಒಂದೆಡೆಯಾದರೆ, ಕೊರೊನಾ ವೈರಸ್ ಹಾವಳಿ ಅನೇಕ ಚಿತ್ರಮಂದಿರಗಳ ಜೀವ ಕಸಿದುಕೊಂಡಿವೆ. ಅವುಗಳ ಸಾಲಿಗೆ ಮೈಸೂರಿನ ಎರಡು ಹಳೆಯ ಚಿತ್ರಮಂದಿರಗಳು ಸೇರಿಕೊಂಡಿವೆ.

Recommended Video

ಸುದೀಪ್ ಕೈಯಲ್ಲಿ ಇದೊಂದು ಕೆಲಸ ಮಾತ್ರ ಆಗಲ್ಲ | Kiccha Sudeep | Filmibeat Kannada

ಒಂದು ಪ್ರದೇಶದಲ್ಲಿ ಹುಟ್ಟಿ ಬೆಳೆದ ಜನರಿಗೆ ಆ ಪ್ರದೇಶದಲ್ಲಿನ ವಿವಿಧ ಜಾಗಗಳ ಮೇಲೆ ಒಂದು ಬಗೆಯ ವ್ಯಾಮೋಹ, ಪ್ರೀತಿ ಇರುತ್ತದೆ. ಅವುಗಳಲ್ಲಿ ಚಿತ್ರಮಂದಿರಗಳೂ ಸೇರಿವೆ. ತಮ್ಮ ಇಷ್ಟದ ಹೀರೋ, ನಾಯಕಿಯ ಚಿತ್ರಗಳನ್ನು ನೋಡಿದ್ದು, ಕಷ್ಟಪಟ್ಟು ಟಿಕೆಟ್ ತೆಗೆದುಕೊಂಡಿದ್ದು ಮುಂತಾದ ನೆನಪುಗಳು ದಟ್ಟವಾಗಿರುತ್ತದೆ. ಮೈಸೂರಿನಲ್ಲಿ ಬೆಳೆದ ಅನೇಕರಿಗೆ ಅಂತಹ ಆಪ್ತ ಅನುಭವಗಳನ್ನು ನೀಡಿದ ಶಾಂತಲಾ ಮತ್ತು ಪದ್ಮಾ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುವ ಸ್ಥಿತಿ ಎದುರಾಗಿದೆ.

ಪದ್ಮಾ ಚಿತ್ರಮಂದಿರ

ಪದ್ಮಾ ಚಿತ್ರಮಂದಿರ

ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಹುಟ್ಟಿದ ಸುಮಾರು 80 ವರ್ಷದಷ್ಟು ಹಳೆಯದಾದ ಪದ್ಮಾ ಚಿತ್ರಮಂದಿರ ಇನ್ನು ನೆನಪಾಗಿಯಷ್ಟೇ ಉಳಿಯಲಿದೆ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಕನ್ನಡದ ಆರಂಭದ ಪ್ರಮುಖ ಸ್ಟಾರ್‌ಗಳ ಜತೆಗೆ ಇತ್ತೀಚಿನ ಸ್ಟಾರ್ ಕಲಾವಿದರವರೆಗಿನ ಚಿತ್ರಗಳು ಇಲ್ಲಿ ಪ್ರದರ್ಶನ ಕಂಡಿದ್ದವು.

ಶಾಂತಲಾ ಚಿತ್ರಮಂದಿರ

ಶಾಂತಲಾ ಚಿತ್ರಮಂದಿರ

ಹಾಗೆಯೇ ಮೈಸೂರಿಗರಿಗೆ ಚಿರಪರಿಚಿತವಾಗಿದ್ದ ಮತ್ತೊಂದು ಚಿತ್ರಮಂದಿರ ಶಾಂತಲಾದಲ್ಲಿ ಕೂಡ ಇನ್ನು ಮುಂದೆ ಪರದೆಯ ಮೇಲೆ ಸಿನಿಮಾಗಳನ್ನು ನೀಡಲು ಅವಕಾಶ ಸಿಗುವುದಿಲ್ಲ. ನಾಲ್ಕೂವರೆ ದಶಕಗಳ ಕಾಲ ವಿವಿಧ ಸಿನಿಮಾಗಳನ್ನು ಪ್ರದರ್ಶಿಸಿದ್ದ ಶಾಂತಲಾ ಕೂಡ 'ಕೋವಿಡ್'ಗೆ ಬಲಿಯಾಗುತ್ತಿದೆ.

ಭೀತಿಯಲ್ಲಿವೆ ಚಿತ್ರಮಂದಿರಗಳು

ಭೀತಿಯಲ್ಲಿವೆ ಚಿತ್ರಮಂದಿರಗಳು

ಕೊರೊನಾ ವೈರಸ್ ಕಾರಣದಿಂದ ಲಾಕ್ ಡೌನ್ ಘೋಷಣೆಗೂ ಮುನ್ನವೇ ಚಿತ್ರಮಂದಿರಗಳಲ್ಲಿನ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳನ್ನು ತೆರೆಯುವುದು ಬಹಳ ಕಷ್ಟ. ಹೀಗಾಗಿ ಭವಿಷ್ಯದಲ್ಲಿ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಅದಕ್ಕೆ ಮುನ್ನವೇ ಹಲವಾರು ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿವೆ.

ಆರ್ಥಿಕ ಸಂಕಷ್ಟ

ಆರ್ಥಿಕ ಸಂಕಷ್ಟ

ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿ ಸುಮಾರು ನಾಲ್ಕು ತಿಂಗಳೇ ಕಳೆದಿವೆ. ಆದಾಯ ಇಲ್ಲದೆ ಇದ್ದರೂ ಸಿಬ್ಬಂದಿಗೆ ತಿಂಗಳ ವೇತನ ನೀಡಲೇಬೇಕು. ಚಿತ್ರ ಪ್ರದರ್ಶನ ಇಲ್ಲದೆ ಇದ್ದರೂ ಕನಿಷ್ಠ ವಿದ್ಯುತ್ ಬಿಲ್ ಪಾವತಿಸಲೇಬೇಕು. ತಿಂಗಳಿಗೆ 10-15 ಸಾವಿರ ಬಿಲ್ ಕಟ್ಟುವಂತಾಗಿದೆ. ಇದರ ಜತೆಗೆ ಸೂಪರ್ ಕಮರ್ಷಿಯಲ್ ಪ್ರಾಪರ್ಟಿ ಟ್ಯಾಕ್ಸ್‌ನ ಹೊರೆಯನ್ನೂ ಹಾಕಲಾಗಿದೆ. ಹೀಗಾಗಿ ಆರ್ಥಿಕ ಹೊರೆ ತಾಳಲಾರದೆ ಮಾಲೀಕರು ಚಿತ್ರಮಂದಿರ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ.

More from Filmibeat

English summary
Old theatres of Mysuru Shantala and Padma were going to shut after coronavirus pandemic lockdown loss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X