For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದು ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ

  |

  ಸ್ಯಾಂಡಲ್ ವುಡ್ ನಟಿ, ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಶ್ರೀವಾಸ್ತವ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. 'ಬ್ಯಾಂಗ್' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದ ಶಾನ್ವಿ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಆಯತಪ್ಪಿಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಸದ್ಯ ಶಾನ್ವಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದೀಗ 'ಬ್ಯಾಂಗ್' ಸಿನಿಮಾದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಅಂದಹಾಗೆ 'ಬ್ಯಾಂಗ್' ಸಿನಿಮಾದ ಚಿತ್ರೀಕರಣ ಜುಲೈ 16ರಿಂದ ಪ್ರಾರಂಭವಾಗಿತ್ತು. ಕೊರೊನಾ 2ನೇ ಅಲೆ ಮುಗಿದ ಬಳಿಕ 'ಬ್ಯಾಂಗ್' ಸಿನಿಮಾದ ಚಿತ್ರೀಕರಣ ಆರಂಭಿಸಲಾಗಿತ್ತು.

  ನಟಿ ಶಾನ್ವಿ ಕೂಡ ಜುಲೈ 16ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೊಂದು ಗ್ಯಾಂಗ್ ಸ್ಟರ್ ಸಿನಿಮಾವಾಗಿದ್ದು, ಆಕ್ಷನ್ ದೃಶ್ಯಗಳು ಹೆಚ್ಚಾಗಿವೆ. ಚಿತ್ರದ ಸ್ಟಂಟ್ ಗಾಗಿ ಶಾನ್ವಿ ಸಾಕಷ್ಟು ತಯಾರಿ ಕೂಡ ನಡೆಸಿದ್ದರು. ಸದ್ಯ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಮಳೆಯಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಈ ವೇಳೆ ಶಾನ್ವಿ ಸ್ಕಿಪ್ ಆಗಿ ಕೆಳಗೆ ಬಿದ್ದಿದ್ದಾರೆ.

  ಈ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ, "ಬ್ಯಾಂಗ್ ಚಿತ್ರದ ಮೇಜರ್ ಆಕ್ಷನ್ ದೃಶ್ಯ ಮಳೆಯಲ್ಲಿ ಚಿತ್ರೀಕರಣವಾಗುತ್ತಿತ್ತು. ಶಾನ್ವಿ 9 ರಿಂದ 10 ಗಂಟೆಗಳ ಕಾಲ ಮಳೆಯಲ್ಲೇ ನಿಂತು ಫೈಟ್ ಮಾಡುತ್ತಿದ್ರು, ಚಿತ್ರೀಕರಣ ಕೂಡ ಅದ್ಭುತವಾಗಿ ನಡೆಯುತ್ತಿತ್ತು. ಆದರೆ ಕಾಲು ಜಾರಿ ಬಿದ್ದಿರು. ಕೈಗೆ ಏಟಾಗಿದೆ. ಸದ್ಯ ಚಿತ್ರೀಕರಣ ನಿಲ್ಲಿಸಿದ್ದೇವೆ. ಶಾನ್ವಿ ಈಗ ಆರಾಮಾಗಿ ಇದ್ದಾರೆ. ಏನು ಸಮಸ್ಯೆ ಇಲ್ಲ" ಎಂದಿದ್ದಾರೆ.

  "ಈ ಫೈಟಿಂಗ್ ದೃಶ್ಯಕ್ಕಾಗಿ ಶಾನ್ವಿ 2 ವಾರ ತರಬೇತಿ ಪಡೆದಿದ್ದರು. ಸ್ಟಂಟ್ ಮಾಸ್ಟರ್ ಚೇತನ್ ಇದನ್ನ ಕಂಪೋಸ್ ಮಾಡಿದ್ದಾರೆ. ತುಂಬಾ ಅಧ್ಬುತವಾಗಿ ಮಾಡಿದ್ದಾರ. ಶಾನ್ವಿ ಮತ್ತು ರಘು ದೀಕ್ಷಿತ್ ಇಬ್ಬರೂ ಈ ಫೈಟ್ ದೃಶ್ಯಕ್ಕೆ ಎಷ್ಟು ಟೈಂ ಕೊಡಬೇಕೋ ಅಷ್ಟು ಕೊಟ್ಟು ತಯಾರಿ ನಡೆಸಿ, ಈ ದೃಶ್ಯ ಮಾಡಿದ್ದಾರೆ. ಶಾನ್ವಿ ಬೇಗ ಗುಣಮುಖರಾಗಿ ಚಿತ್ರೀಕರಣಕ್ಕೆ ವಾಪಸ್ ಆಗಲಿ ಎಂದು ಇಡೀ ತಂಡ ಪ್ರಾರ್ಥಿಸಿದೆ" ಎಂದು ಚಿತ್ರತಂಡದ ಸದಸ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

   Shanvi Srivastava got injured in Bang movie shooting

  ಅಂದಹಾಗೆ ಬ್ಯಾಂಗ್ ಸಿನಿಮಾ ಶ್ರೀ ಗಣೇಶ್ ಪರಶುರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗಣೇಶ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಈಗಾಗಲೇ ಹಲವು ಕಿರುಚಿತ್ರಗಳನ್ನು ಮಾಡಿದ್ದ ಗಣೇಶ್ ಬ್ಯಾಂಗ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಯು ಕೆ ಪ್ರೊಡಕ್ಷನ್ ಲಾಂಛನದಲ್ಲಿ ವಸಂತ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.

  ಅಂದಹಾಗೆ ಶಾನ್ವಿ ಮೊದಲ ಬಾರಿಗೆ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗ್ಲಾಮರ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶಾನ್ವಿ ಇದೀಗ ಬ್ಯಾಂಗ್ ಮೂಲಕ ಗ್ಯಾಂಗ್ ಸ್ಟರ್ ಆಗಿ ಚಿತ್ರಾಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಬ್ಯಾಂಗ್ ಸಿನಿಮಾತಂಡ ಕೊನೆಯಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಸದ್ಯದಲ್ಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭ ಮಾಡಬೇಕಿತ್ತು. ಆದರೀಗ ಶಾನ್ವಿಗೆ ಏಟಾದ ಕಾರಣ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

  ವಾರಣಾಸಿ ಮೂಲದ ನಟಿ ಶಾನ್ವಿ ಚಂದ್ರಲೇಖ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟರು. ತೆಲುಗು ಸಿನಿಮಾರಂಗದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಶಾನ್ವಿ ಖ್ಯಾತಿಗಳಿಸಿದ್ದು ಕನ್ನಡದಲ್ಲಿ. ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಬ್ರೇಕ್ ಪಡೆದರು. ಈ ಸಿನಿಮಾ ಶಾನ್ವಿಗೆ ಕನ್ನಡದಲ್ಲಿ ಹೆಚ್ಚು ಅವಕಾಶಗಳನ್ನು ತಂದುಕೊಟ್ಟಿತು.

  ಗೋಲ್ಡನ್ ಸ್ಟಾರ್ ಗಣೇಶ್, ಶ್ರೀಮುರಳಿ, ದರ್ಶನ್ ಮತ್ತು ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿ ಶಾನ್ವಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಶಾನ್ವಿ ಬಳಿ ಬ್ಯಾಂಗ್ ಸೇರಿದಂತೆ ಅನೇಕ ಸಿನಿಮಾಗಳಿವೆ. ಇತ್ತೀಚಿಗಷ್ಟೆ ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಜೊತೆಗೆ ತ್ರಿಶೂಲಂ ಮತ್ತು ಮಲಯಾಳಂ ಸಿನಿಮಾದಲ್ಲೂ ಶಾನ್ವಿ ನಟಿಸುತ್ತಿದ್ದಾರೆ.

  English summary
  Kannada Actress Shanvi Srivastava got injured in Bang movie fighting shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X