»   » ಶರಣ್ ಮುಂದಿನ ಚಿತ್ರಕ್ಕೆ ಇಷ್ಟೊಂದು ಜನ ನಿರ್ಮಾಪಕರು.!

ಶರಣ್ ಮುಂದಿನ ಚಿತ್ರಕ್ಕೆ ಇಷ್ಟೊಂದು ಜನ ನಿರ್ಮಾಪಕರು.!

Posted By:
Subscribe to Filmibeat Kannada

'ಅಧ್ಯಕ್ಷ' ಶರಣ್ ಅಭಿನಯದ 'ರಾಜ್-ವಿಷ್ಣು' ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಇದರ ಜೊತೆ ಬ್ಯಾಕ್ ಟು ಬ್ಯಾಕ್ ಹೊಸ ಚಿತ್ರಗಳನ್ನ ಶರಣ್ ಒಪ್ಪಿಕೊಂಡಿದ್ದರು. ಇವುಗಳಲ್ಲಿ ಒಂದು ಸಿನಿಮಾಗೆ ಸ್ವತಃ ಶರಣ್ ಅವರೇ ನಿರ್ಮಾಪಕರಾಗಲಿದ್ದಾರೆ. ಶರಣ್ ಜೊತೆಯಲ್ಲಿ ಈ ಚಿತ್ರಕ್ಕೆ ಕನ್ನಡದ ಖ್ಯಾತ ತಂತ್ರಜ್ಞರು ಕೂಡ ಬಂಡವಾಳ ಹಾಕಲಿದ್ದಾರಂತೆ.

ಹೌದು, ಶರಣ್ ಅಭಿನಯಿಸಲಿರುವ ಮುಂದಿನ ಚಿತ್ರಕ್ಕೆ ಕನ್ನಡದ ಖ್ಯಾತ ತಂತ್ರಜ್ಞರು ಸಹ-ನಿರ್ಮಾಪಕರಾಗಲಿದ್ದಾರೆ. Rambo ಚಿತ್ರದ ನಂತರ ಶರಣ್ ನಿರ್ಮಾಪಕರಾಗುತ್ತಿದ್ದು, ಅಟ್ಲಾಂಟಾ ನಾಗೇಂದ್ರ ಅವರು ಶರಣ್ ಜೊತೆಯಲ್ಲಿ ಜಂಟಿ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಇದೇ ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಸಂಕಲನಕಾರ ಕೆ.ಎಂ ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಮತ್ತು ತರುಣ್ ಸುದೀರ್ ಸಹ-ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರಂತೆ.

'ರಾಜ್-ವಿಷ್ಣು' ಜೋಡಿ ಬಾಯಿಗೆ ಮತ್ತೆರಡು ಲಡ್ಡು ಬಂದು ಬಿತ್ತು.!

Sharan New Film Produced by Atlanta Nagendra

ಈ ಚಿತ್ರವನ್ನ ಅನಿಲ್ ಕುಮಾರ್ ಎಂಬುವವರು ನಿರ್ದೇಶನ ಮಾಡುತ್ತಿದ್ದು, ಪಕ್ಕಾ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದೆ. ಟೈಟಲ್ ಇನ್ನು ಅಂತಿಮವಾಗಿಲ್ಲ, ಉಳಿದ ಕಲಾವಿದರ ಹುಡುಕಾಟದಲ್ಲಿರುವ ಚಿತ್ರತಂಡ ಆದಷ್ಟೂ ಬೇಗ ಸಿನಿಮಾ ಶುರು ಮಾಡಲಿದೆಯಂತೆ.

'ರಾಜ್ ವಿಷ್ಣು' ತೆರೆಗೆ ಬರಲು ಕೌಂಟ್‌ಡೌನ್ ಶುರು

English summary
Sharan's new film will start rolling next week. The film is directed by Anil Kumar. It is a home production for Sharan under the Ladoo Cinema House banner. Atlanta Nagendra, arjun janya, KM Prakash, Tharun Sudhir also part of with Sharan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada