For Quick Alerts
  ALLOW NOTIFICATIONS  
  For Daily Alerts

  'ನನ್ನ ಜೀವನ ಬದಲಿಸಿದ ದಿನ, ಮರೆಯಲಾಗದ ಕ್ಷಣ'- ಶರಣ್

  |

  ಹಾಸ್ಯನಟನಾಗಿ, ಪೋಷಕ ನಟನಾಗಿ ಹಾಗೂ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಶರಣ್ ಸುಮಾರು 100 ಚಿತ್ರಗಳಲ್ಲಿ ನಟಿಸಿದ ನಂತರ ನಾಯಕನಾಗಿ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಅಲ್ಲಿಂದ ತಮ್ಮ ವೃತ್ತಿ ಜೀವನ ಮತ್ತೊಂದು ಅಯಾಮ ಪಡೆದುಕೊಂಡಿತ್ತು.

  ಆ ಸಂದರ್ಭ, ಆ ದಿನವನ್ನು ನಟ ಶರಣ್ ಸ್ಮರಿಸಿಕೊಂಡಿದ್ದಾರೆ. 'ಇದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ' ದಿನ ಎಂದು ತನ್ನ ಯಶಸ್ಸಿಗೆ ಕೈ ಜೋಡಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

  'ಗುರುಶಿಷ್ಯರು' ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದು ಏಕೆ?'ಗುರುಶಿಷ್ಯರು' ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದು ಏಕೆ?

  ಹೌದು, ಸೆಪ್ಟೆಂಬರ್ 7 ನಟ ಶರಣ್ ಸಿನಿಮಾ ಜೀವನದಲ್ಲಿ ಅತ್ಯಂತ ಸ್ಮರಣೀಯ ದಿನ. ನಾಯಕನಟನಾಗಿ ಅಭಿನಯಿಸಿದ ಚೊಚ್ಚಲ ಸಿನಿಮಾ ತೆರೆಕಂಡ ದಿನ. ಈ ಚಿತ್ರದಿಂದ ಶರಣ್ ಜೀವನ ಬಹುದೊಡ್ಡ ತಿರುವು ಪಡೆದುಕೊಂಡಿತು. ಹಾಸ್ಯನಟನಾಗಿ ಮಾಡ್ತಿದ್ದ ಶರಣ್ ಇಲ್ಲಿಂದ ಹೀರೋ ಆಗಿ ಮುಂದುವರಿದರು. ಇದರ ಪರಿಣಾಮ ಶರಣ್ ಇಂದು ಕನ್ನಡ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿ ಬಳಗ ಹಾಗೂ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಪ್ರತಿಭಾನ್ವಿತ ನಟ ಎನಿಸಿಕೊಂಡಿದ್ದಾರೆ.

  ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ಶರಣ್, ''ಇಂದಿಗೆ Rambo ಚಿತ್ರ ತೆರೆಯ ಮೇಲೆ ಕಂಡುಬಂದು 9 ವರ್ಷಗಳು ಪೂರ್ಣಗೊಂಡಿದೆ. 7/9/2012. ನನ್ನ ಜೀವನದಲ್ಲಿ ಮರೆಯಲಾರದಂತಃ ಹಾಗೂ ನನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ತಿರುವು ನೀಡಿದಂತಃ ದಿನ. Rambo ನನ್ನ ಬದುಕಿಗೆ ಹೊಸ ಆಯಾಮ ಕೊಟ್ಟು ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹೆಚ್ಚು ಮಾಡಿಸಿದ ಒಂದು ಅಕ್ಷಯ ಪಾತ್ರೆ ಎಂದರೆ ತಪ್ಪಾಗಲಾರದು. ಈ ಯಶಸ್ಸಿಗೆ ಕಾರಣಕರ್ತರಾದ ನನ್ನ ಇಡೀ ತಂಡ ಹಾಗೂ ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು'' ಎಂದಿದ್ದಾರೆ.

  ಮತ್ತೊಂದು ಟ್ವೀಟ್‌ನಲ್ಲಿ. ''ವಿಶೇಷವಾಗಿ ತರುಣ್ ಸುಧೀರ್, ಅಟ್ಲಾಂಟ ನಾಗೇಂದ್ರ, ಅರ್ಜುನ್ ಜನ್ಯ ಹಾಗೂ ಇಡೀ ತಂಡದ ಶ್ರಮದ ಪ್ರತಿಫಲ ಇಂತಹ ಅದ್ಭುತ ಚಿತ್ರ ಆಯಿತು. ನಿಮ್ಮೆಲ್ಲರ ಬೆಂಬಲವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಇಡೀ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು'' ಎಂದು ಸಂತಸ ಹಂಚಿಕೊಂಡಿದ್ದಾರೆ.

  2012 ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಿದ್ದ Rambo ಸಿನಿಮಾ ಇಂದಿಗೆ 9 ವರ್ಷ ಪೂರೈಸಿದೆ. ಎಂ ಎಸ್ ಶ್ರೀನಾಥ್ ನಿರ್ದೇಶಿಸಿದ್ದ ಈ ಚಿತ್ರವನ್ನು ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್ ನಿರ್ಮಾಣ ಮಾಡಿದ್ದರು. ತರುಣ್ ಸುಧೀರ್ ಚಿತ್ರಕಥೆ ಮಾಡಿದ್ದರು. ಮಾಧುರಿ ಇಟಗಿ, ಶರಣ್, ಉಮಾಶ್ರೀ, ತಬಲಾ ನಾಣಿ, ಸಾಧು ಕೋಕಿಲಾ, ರಂಗಾಯಣ ರಘು, ಶ್ರುತಿ, ಎಂಎಸ್ ಉಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದರು.

  Sharan Starrer Rambo Movie Completes 7 Years; Know Interesting Facts about the movie

  ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮಾಡಿದ್ದ ಈ ಚಿತ್ರಕ್ಕೆ 2 ಕೋಟಿವರೆಗೂ ಖರ್ಚು ಆಗಿತ್ತು ಎಂಬ ವರದಿ ಇದೆ. ಬಿಡುಗಡೆ ಬಳಿಕ ಒಳ್ಳೆಯ ಸಕ್ಸಸ್ ಕಂಡ ಸಿನಿಮಾ 5 ಕೋಟಿವರೆಗೂ ಬಿಸಿನೆಸ್ ಮಾಡಿದೆ ಎಂದು ಹೇಳಲಾಗಿದೆ.

  ಇದು ಶರಣ್ ಅಭಿನಯದ 100ನೇ ಸಿನಿಮಾ. 1996ರ ಸಮಯದಲ್ಲಿ ಚಿತ್ರರಂಗ ಪ್ರವೇಶಿಸಿದ ಶರಣ್ ಪೋಷಕ ನಟನೆಗೆ ಖ್ಯಾತಿ ಹೊಂದಿರು. ನಾಯಕನಟನಾಗಿ ಸಕ್ಸಸ್ ಕಂಡ ಶರಣ್ ಅಲ್ಲಿಂದ ಹೀರೋ ಆಗಿ ಮುಂದುವರಿದರು. Rambo ಆದ್ಮೇಲೆ ವಿಕ್ಟರಿ, ಜೈ ಲಲಿತಾ, ಅಧ್ಯಕ್ಷ, ರಾಜರಾಜೇಂದ್ರ, ಬುಲೆಟ್ ಬಸ್ಯಾ, ಜೈ ಮಾರುತಿ 800, ನಟರಾಜ ಸರ್ವಿಸ್, ರಾಜ್ ವಿಷ್ಣು, ಸತ್ಯ ಹರಿಶ್ಚಂದ್ರ, Rambo 2, ವಿಕ್ಟರಿ 2, ಅಧ್ಯಕ್ಷ ಇನ್ ಅಮೆರಿಕಾ ಅಂತಹ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.

  ಸದ್ಯ, ಶರಣ್ ಅಭಿನಯಿಸಿರುವ 'ಅವತಾರ್ ಪುರುಷ' ಬಿಡುಗಡೆ ಸಜ್ಜಾಗಿದೆ. ಸಿಂಪಲ್ ಸುನಿ ಈ ಚಿತ್ರ ನಿರ್ದೇಶಿಸಿದ್ದಾರೆ. ಇದರ ಜೊತೆಗೆ 'ಗುರು ಶಿಷ್ಯರು' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

  English summary
  Kannada actor Sharan Starrer Rambo Movie Completes 7 Years; Know Interesting Facts about the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X