For Quick Alerts
  ALLOW NOTIFICATIONS  
  For Daily Alerts

  ನಮ್ಮ ಕನಸು ಇದಾಗಿರಲಿಲ್ಲ; ದರ್ಶನ್ ಜೊತೆಗಿನ ಹಳೆಯ ದಿನಗಳನ್ನು ನೆನೆದ ನಟ ಶರಣ್

  |

  ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾ ರಾಬರ್ಟ್ ರಿಲೀಸ್ ಗೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ತೆಲುಗು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆಬರುತ್ತಿದ್ದು, ಎರಡು ಭಾಷೆಯ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.

  ಡಿ ಬಾಸ್ ಜೊತೆಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡ ಶರಣ್ | Sharan | DBoss | Darshan

  ಇತ್ತೀಚಿಗಷ್ಟೆ ಹುಬ್ಬಳ್ಳಿಯಲ್ಲಿ ರಾಬರ್ಟ್ ಪ್ರಿ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಅಧ್ಯಕ್ಷ ಕಾಮಿಡಿ ಕಿಂಗ್ ಶರಣ್ ಭಾಗಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣದಲ್ಲಿದ್ದ ಶರಣ್ ರಾಬರ್ಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆ ಹತ್ತಿದ ಕಾಮಿಡಿ ಸ್ಟಾರ್ ಸಿನಿಮಾದ ಬಗ್ಗೆ ಮತ್ತು ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಜೊತೆಗಿನ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

  ಕಾರ್ ಓಡಿಸುವಾಗ ದಯವಿಟ್ಟು ಅಕ್ಕ-ಪಕ್ಕ ಬರಬೇಡಿ; ಅಭಿಮಾನಿಗಳಿಗೆ ದರ್ಶನ್ ಮನವಿಕಾರ್ ಓಡಿಸುವಾಗ ದಯವಿಟ್ಟು ಅಕ್ಕ-ಪಕ್ಕ ಬರಬೇಡಿ; ಅಭಿಮಾನಿಗಳಿಗೆ ದರ್ಶನ್ ಮನವಿ

  ಸಿನಿಮಾಗೂ ಬರುವ ಮೊದಲೇ ಇಬ್ಬರು ಸ್ನೇಹಿತರು

  ಸಿನಿಮಾಗೂ ಬರುವ ಮೊದಲೇ ಇಬ್ಬರು ಸ್ನೇಹಿತರು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶರಣ್ ಒಟ್ಟಿಗೆ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರು ಸಿನಿಮಾಗೆ ಎಂಟ್ರಿ ಕೊಡವ ಮೊದಲೇ ಪರಿಚಿತರು. ತುಂಬಾ ಹಳೆಯ ಪರಿಚಯ ಇವರದ್ದು. ಹಳೆಯ ದಿನಗಳನ್ನು ಶರಣ್ ರಾಬರ್ಟ್ ವೇದಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ.

  ನಾವು ದೊಡ್ಡ ನಟರಾಗುತ್ತೇವೆ ಅಂತ ಅಂದುಕೊಂಡಿರಲಿಲ್ಲ

  ನಾವು ದೊಡ್ಡ ನಟರಾಗುತ್ತೇವೆ ಅಂತ ಅಂದುಕೊಂಡಿರಲಿಲ್ಲ

  'ನಾನು ಮತ್ತು ದರ್ಶನ್ ಸರ್ ಇಬ್ಬರು ಸಿನಿಮಾಗೆ ಬರುವ ಮೊದಲೇ ಪರಿಚಯವಿತ್ತು. ಹಳೆಯ ಬಾಂಧವ್ಯ ಮತ್ತು ಸಹೋದ್ಯೋಗಿಗಳು ನಾವು. ನಾವು ಸಿನಿಮಾ ನಟರಾಗಿ, ದೊಡ್ಡ ಸಿನಿಮಾಗಳಲ್ಲಿ ಭಾಗಿಯಾಗುತ್ತೇವೆ ಎನ್ನುವುದು ನಮ್ಮ ಕನಸು ಆಗಿರಲಿಲ್ಲ. ಅವರ ಜೊತೆ ಕಳೆದ ಪ್ರತಿ ಕ್ಷಣ ಮೆಲುಕು ಹಾಕುತ್ತೇನೆ. ಯಾಕೆಂದ್ರೆ ಅದು ಮೊದಮೊದಲ ದಿನಗಳು.' ಎಂದಿದ್ದಾರೆ.

  'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು

  ದರ್ಶನ್ ಕೂದಲೆಳೆಯಷ್ಟು ಬದಲಾಗಿಲ್ಲ

  ದರ್ಶನ್ ಕೂದಲೆಳೆಯಷ್ಟು ಬದಲಾಗಿಲ್ಲ

  'ದರ್ಶನ್ ಸರ್ ಇಷ್ಟು ಎತ್ತರಕ್ಕೆ ಬೆಳೆದ ನಂತರವೂ ಚಿಕ್ಕ ಪುಟ್ಟ ಬದಲಾವಣೆ ಹುಡುಕಿದ್ರು ಸಿಗಲ್ಲ. ಫ್ರೆಂಡ್ಸ್ ಎನ್ನುವ ಟೆಲಿಫಿಲ್ಮ್ ಸಮಯದಲ್ಲಿ ನೋಡಿದ ದರ್ಶನ್ ಸರ್ ಹೇಗೋ ಇವತ್ತು ರಾಬರ್ಟ್ ಎನ್ನುವ ದೊಡ್ಡ ಸಿನಿಮಾ ಮಾಡುತ್ತಿದ್ದರೂ ಸಹ ಅವರಲ್ಲಿ ಕೂದಲೆಳೆಯಷ್ಟು ಸಹ ವ್ಯತ್ಯಾಸ ಕಾಣಲಿಲ್ಲ' ಎಂದು ದರ್ಶನ್ ಬಗ್ಗೆ ಮಾತನಾಡಿದ್ದಾರೆ.

  ನನ್ನ ದೊಡ್ಡ ಆಸೆ ಈ ಸಿನಿಮಾ ಮೂಲಕ ನೆರವೇರಿತು

  ನನ್ನ ದೊಡ್ಡ ಆಸೆ ಈ ಸಿನಿಮಾ ಮೂಲಕ ನೆರವೇರಿತು

  'ನನ್ನ ದೊಡ್ಡ ಆಸೆ ಈ ಸಿನಿಮಾ ಮೂಲಕ ನೆರವೇರಿತು. ದರ್ಶನ್ ಸರ್ ಅವರಿಗೆ ತರುಣ್ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ ಇತ್ತು. ತರುಣ್ ಟ್ಯಾಲೆಂಟ್ ನೋಡಿದಾಗ ದರ್ಶನ್ ಸರ್ ಡೇಟ್ ಸಿಗಬಾರ್ದಾ ಅಂತ ಅಂದುಕೊಂಡಿದ್ದೆ. ಇದು ನೆರವೇರಿದೆ. ಹಾಗಾಗಿ ಇವತ್ತು ದರ್ಶನ್ ಮತ್ತು ಉಮಾಪತಿ ಅವರಿಗೆ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.

  ಶ್ರಮ ಮತ್ತು ಪ್ರೀತಿಯ ಮನಸ್ಸುಗಳು ಇದ್ದ ಕಡೆ ಯಶಸ್ಸು ಇರುತ್ತೆ

  ಶ್ರಮ ಮತ್ತು ಪ್ರೀತಿಯ ಮನಸ್ಸುಗಳು ಇದ್ದ ಕಡೆ ಯಶಸ್ಸು ಇರುತ್ತೆ

  'ಯಶಸ್ಸು ಸುರಕ್ಷಿತವಾದ ಜಾಗ ಹುಡುಕುತ್ತಿರುತ್ತೆ. ಅದಕ್ಕೂ ಒಳ್ಳೆಯ ಜಾಗ ಬೇಕು. ಯಾಕೆಂದರೆ ಅದಕ್ಕೆ ಅಪಾದನೆ ಬರಬಾರದು ಎನ್ನುವುದು. ಎಲ್ಲಿ ಶ್ರಮ ಮತ್ತು ಪ್ರೀತಿಯ ಮನಸುಗಳು ಇರುತ್ತೋ ಅಲ್ಲಿ ಯಶಸ್ಸು ಇರುತ್ತೆ. ಎರಡರ ಸಂಗಮ ಇಲ್ಲಿ ಆಗಿದೆ. ಹಾಗಾಗಿ ಈ ಸಿನಿಮಾ ಯಶಸ್ಸು ಆಗುವುದರಲ್ಲಿ ಎರಡು ಮಾತಿಲ್ಲ' ಎಂದು ರಾಬರ್ಟ್ ಸೂಪರ್ ಹಿಟ್ ಆಗುತ್ತೆ ಎಂದು ಭವಿಷ್ಯ ನುಡಿದರು.

  English summary
  Actor Sharan talks about Darshan and roberrt movie in Robert evans at Hubli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X