twitter
    For Quick Alerts
    ALLOW NOTIFICATIONS  
    For Daily Alerts

    ಶರಣ್ 'ವಿಕ್ಟರಿ' ಚಿತ್ರದ ವಿರುದ್ಧ ರು.1 ಕೋಟಿ ಕೇಸು

    By Rajendra
    |

    ಕಾಮಿಡಿ ಹೀರೋ ಶರಣ್ ದ್ವಿಪಾತ್ರಾಭಿನಯದ 'ವಿಕ್ಟರಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಹಾಡೊಂದಕ್ಕೆ ತುಪ್ಪದ ಬೆಡಗಿ ರಾಗಿಣಿ ಹೆಜ್ಜೆ ಹಾಕಿದ್ದರು. "ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ..." ಎಂಬ ಹಾಡಿನಲ್ಲಿ ತಮ್ಮ ಮೈಮಾಟ ಮೆರೆದಿದ್ದರು.

    ಈಗ ಈ ಹಾಡನ್ನು ರಚಿಸಿರುವ ಕನ್ನಡ ಕುಮಾರ್ ತಮ್ಮ ಅನುಮತಿ ಇಲ್ಲದೆ ಈ ಹಾಡನ್ನು ಬಳಸಿಕೊಂಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಬುಧವಾರ (ಆ.29) ಅವರು ಕೇಸ್ ದಾಖಲಿಸಿದ್ದು ಚಿತ್ರದ ನಿರ್ಮಾಪಕರ ವಿರುದ್ಧ ರು.1 ಕೋಟಿ ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಚಿತ್ರದ ಪ್ರದರ್ಶನಕ್ಕೂ ತಡೆಕೋರಿದ್ದಾರೆ ಕನ್ನಡ ಕುಮಾರ್. [ವಿಕ್ಟರಿ ಚಿತ್ರ ವಿಮರ್ಶೆ ಓದಿ]

    ಇದೇ ವಿಚಾರವಾಗಿ ಕುಮಾರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಮ್ಮ ದೂರನ್ನು ಸಲ್ಲಿಸಿದ್ದಾರೆ. ಈ ಕೇಸಿನ ವಿಚಾರಣೆ ಗುರುವಾರ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಕನ್ನಡ ಕುಮಾರ್ ಅವರು 1998ರಲ್ಲಿ ಜಾಗೃತಿ ಸೇನೆಯ 'ಅಕ್ಕನ ಮಗಳು' ಎಂಬ ಆಲ್ಬಂ ಕ್ಯಾಸೆಟ್ ಬಿಡುಗಡೆ ಮಾಡಿದ್ದರು.

    ಈ ಕ್ಯಾಸೆಟ್ ನಲ್ಲಿ "ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ" ಎಂಬ ಇವರ ಸ್ವರಚನೆಯ ಹಾಡೂ ಇತ್ತು. ಈಗ 'ವಿಕ್ಟರಿ' ಚಿತ್ರದಲ್ಲಿ ತಮ್ಮ ಹಾಡನ್ನು ಬಳಸಿಕೊಂಡು ಅಶ್ಲೀಲ ಹಾಗೂ ದ್ವಂದ್ವಾರ್ಥ ಕಲ್ಪಿಸುವ ಸಾಹಿತ್ಯ ಸೇರಿಸಿ ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

    ಮೂಲ ಗೀತೆಯ ಸಂಗೀತ ಹಾಗೂ ರಾಗ ಸಂಯೋಜನೆ ಸದಭಿರುಚಿಯಿಂದ ಕೂಡಿದೆ. ಈಗ ಹಾಡಿನ ಸಾಲುಗಳನ್ನು ತಿರುಚಿ ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಎಂದು ಕುಮಾರ್ ದೂರಿದ್ದಾರೆ. 'ವಿಕ್ಟರಿ' ಚಿತ್ರದ ನಿರ್ಮಾಪಕರು ಆಡಿಯೋ ಕಂಪನಿಯ ಅನುಮತಿ ಪಡೆದೇ ಈ ಗೀತೆಯನ್ನು ಬಳಸಿಕೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    English summary
    Comedy Star Sharan lead 'Victory' films Yakka Nin Magalu Nanage Chikkolagalwa song lands in trouble. Lyricist Kannada Kumar, who wrote original song, has filed a case against the makers of the film Victory. Now he has sought Rs 1 crore for not taking his permission to use the song in the film. 
    Thursday, August 29, 2013, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X