»   » ಹೆಸರು ಬದಲಾಯಿಸಿಕೊಂಡ ಶರ್ಮಿಳಾ ಮಾಂಡ್ರೆ

ಹೆಸರು ಬದಲಾಯಿಸಿಕೊಂಡ ಶರ್ಮಿಳಾ ಮಾಂಡ್ರೆ

Posted By:
Subscribe to Filmibeat Kannada
ಹೆಸರಿನಲ್ಲೇನಿದೆ ಬಿಡಿ ಅಂತಾರೆ ತಿಳಿದವರು. ಆದರೆ ಸಿನಿಮಾ ಮಂದಿ ಮಾತ್ರ ಎಲ್ಲಾ ಇರುವುದು ಹೆಸರಿನಲ್ಲೇ ಅಂತಾರೆ. ಈಗ ಶರ್ಮಿಳಾ ಮಾಂಡ್ರೆ ಸಹ ತಮ್ಮ ಹೆಸರಿನಲ್ಲಿ ಅಲ್ಪ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ.

ಸದ್ಯಕ್ಕೆ ಶರ್ಮಿಳಾ ಮಾಂಡ್ರೆ ಅವರು ತೆಲುಗಿನ ಕೆವ್ವು ಕೇಕ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಹಾಸ್ಯನಟ ಅಲ್ಲರಿ ನರೇಶ್ ಚಿತ್ರದ ನಾಯಕ ನಟ. ಅಂದಹಾಗೆ ಶರ್ಮಿಳಾ ಅವರು ಹೆಸರಿನಲ್ಲಿ ಭಾರಿ ಬದಲಾವಣೆಯನ್ನೇನು ಮಾಡಿಕೊಂಡಿಲ್ಲ.

'Sharmila'ಗೆ ಬದಲಾಗಿ ಅವರು 'Sharmiela' Mandre ಎಂದು ಬದಲಾಯಿಸಿಕೊಂಡಿದ್ದಾರೆ. Sharmila ಎಂದು ಬಹಳಷ್ಟು ಮಂದಿ ಇದ್ದಾರೆ. ಅವರಿಗೂ ತಮಗೂ ಏನು ವ್ಯತ್ಯಾಸ ಎಂಬುದು ಗೊತ್ತಾಗಬೇಕಲ್ಲ. ಹಾಗಾಗಿ Sharmiela ಎಂದು ಬದಲಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಅವರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಅಕೌಂಟ್ ಗಳಲ್ಲೂ ಈ ಬದಲಾವಣೆಯನ್ನು ಕಾಣಬಹುದು. ಈ ಹಿಂದೆ ಸಂಜನಾ ಅವರು ತಮ್ಮ ಹೆಸರನ್ನು Sanjjanaa ಎಂದು ಬದಲಾಯಿಸಿಕೊಂಡಿದ್ದರು. ನಟ ಆದಿತ್ಯಾ ಅವರು ಅಷ್ಟೇ 'Aditya'ಗೆ ಬದಲಾಗಿ 'Adityaa' ಎಂದು ಬದಲಾಯಿಸಿಕೊಂಡಿದ್ದಾರೆ.

ಕನ್ನಡದ ಕೃಷ್ಣ, ಸಜನಿ, ನವಗ್ರಹ, ವೆಂಕಟ ಇನ್ ಸಂಕಟ, ಸ್ವಯಂವರ ಹಾಗೂ ಕರಿಚಿರತೆ ಚಿತ್ರಗಳು ಶರ್ಮಿಳಾ ಅವರಿಗೆ ಒಂದಷ್ಟು ಹೆಸರು ತಂದುಕೊಟ್ಟಂತಹವು. ಬಳಿಕ ಅವರು ಲೋಕಲ್ ಜಾಹೀರಾತುಗಳಲ್ಲಿ ಹೆಚ್ಚಾಗಿ ದರ್ಶನ ನೀಡುತ್ತಿದ್ದರು. ಬಳಿಕ ತೆಲುಗು, ತಮಿಳು ಚಿತ್ರರಂಗಕ್ಕೆ ಜಂಪ್ ಆಗಿದ್ದರು. (ಏಜೆನ್ಸೀಸ್)

English summary
Kannada actress Sharmila Mandre changed her name as Sharmiela Mandre. The actresses official Facebook and Twitter page show her name as Sharmiela Mandre.
Please Wait while comments are loading...