For Quick Alerts
  ALLOW NOTIFICATIONS  
  For Daily Alerts

  'ಸೋಷಿಯಲ್ ಮೀಡಿಯಾ ಕೀಚಕರ ವಿರುದ್ಧ ದನಿ ಎತ್ತಿದ ಶೀತಲ್ ಶೆಟ್ಟಿ'

  |

  ಮಹಿಳೆಯರನ್ನು ಕೆಟ್ಟದಾಗಿ ಟೀಕಿಸುವುದು, ಟ್ರೋಲ್ ಮಾಡುವುದು ಹಾಗೂ ಬಾಡಿ ಶೇಮಿಂಗ್ ಮಾಡುವುದನ್ನು ನಟಿ, ನಿರೂಪಕಿ ಶೀತಲ್ ಶೆಟ್ಟಿ ಖಂಡಿಸಿದ್ದಾರೆ.

  ಹೆಣ್ಣುಮಕ್ಕಳ ಅಶ್ಲೀಲ ಪೋಸ್ಟ್ ಹಾಕುವ ಟ್ರೋಲ್ ಪೇಜ್ ಗಳಿಗೆ ಶೀತಲ್ ಶೆಟ್ಟಿ ಹೇಳಿದ್ದೇನು? | Filmibeat Kannada

  ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶೀತಲ್ ಶೆಟ್ಟಿ ''ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಅವಮಾನ ಮಾಡುತ್ತಿರುವ ಕೆಟ್ಟ ಅಷ್ಟೆ ಹುಂಬ ಮನಸ್ಥಿತಿಗಳಿಗೆ, ಹಾಗೆ ಅದನ್ನು ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೂ ನನ್ನದೊಂದು ಧಿಕ್ಕಾರ'' ಎಂದು ಕಿಡಿಕಾರಿದ್ದಾರೆ.

  ರಶ್ಮಿಕಾರ ಹಳೆಯ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದ ರಕ್ಷಿತ್ ಶೆಟ್ಟಿರಶ್ಮಿಕಾರ ಹಳೆಯ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದ ರಕ್ಷಿತ್ ಶೆಟ್ಟಿ

  ಇತ್ತೀಚಿಗಷ್ಟೆ ನಟಿ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದ ರಶ್ಮಿಕಾ ವಿರುದ್ಧ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ರಶ್ಮಿಕಾ ಅವರ ಭಾವಚಿತ್ರಗಳನ್ನು ಬಳಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ಫೋಟೋಗಳನ್ನು ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಶೀತಲ್ ಶೆಟ್ಟಿ ನೆಗೆಟಿವ್ ಪ್ರಚಾರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಹೆಣ್ಣಾಗಿ ನನಗೆ ಸಹಿಸಲು ಸಾಧ್ಯವಿಲ್ಲ

  ಹೆಣ್ಣಾಗಿ ನನಗೆ ಸಹಿಸಲು ಸಾಧ್ಯವಿಲ್ಲ

  ''ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ. ನನಗೆ ಇದರಿಂದ ವೈಯಕ್ತಿಕವಾಗಿ ಏನು ಆಗಬೇಕಾಗಿದ್ದು ಇಲ್ಲ. ಆದ್ರೆ ನನ್ನ ಜಾತಿಗೆ ಸಂಬಂಧಿಸಿದ್ದು. ಹೆಣ್ಣಾಗಿ ನನಗೆ ಸಹಿಸಲು ಸಾಧ್ಯ ಆಗದೇ ಇರುವಂತದ್ದು. ನನ್ನಂತೆ ಇದನ್ನ ಓದಿದ, ಇಲ್ಲಿಯವರೆಗೂ ನೋಡ್ಕೊಂಡು ಬಂದಿರುವ ಎಲ್ಲಾ ಹೆಣ್ಣ ಮಕ್ಕಳಿಗೂ ಸಹಿಸುವುದಕ್ಕೆ ಸಾಧ್ಯವಾಗಿರುವುದಿಲ್ಲ. ಅದಕ್ಕೆ ಮಾತನಾಡುವ ಧೈರ್ಯ ಮಾಡುತ್ತಿದ್ದೇನೆ. ತನ್ನ ಆಯ್ಕೆಗಳನ್ನ ದಿಟ್ಟವಾಗಿ ಮಾಡಿಕೊಂಡು ಮುಂದೆ ಹೋಗುತ್ತಿರುವ ಯಾರೋ ಹೆತ್ತ ಹೆಣ್ಣು ಮಕ್ಕಳಿಗೆ, ಬಟ್ಟ ಬಹಿರಂಗವಾಗಿ ಡ*....ಸೂ*, ದೈಹಿಕವಾಗಿ ಅವರುಗಳನ್ನು ಅವಮಾನ ಮಾಡುತ್ತಿರುವ ಕೆಟ್ಟ ಅಷ್ಟೇ ಹುಂಬ ಮನಸ್ಥಿತಿಗಳಿಗೆ, ಹಾಗೆ ಅದನ್ನ ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೂ ನನ್ನದೊಂದು ಧಿಕ್ಕಾರ'' ಎಂದು ಶೀತಲ್ ಶೆಟ್ಟಿ ಕಿಡಿಕಾರಿದ್ದಾರೆ.

  ನಾನು ಟಾರ್ಗೆಟ್ ಆಗಬಹುದು

  ನಾನು ಟಾರ್ಗೆಟ್ ಆಗಬಹುದು

  ''ನಾಳೆಯಿಂದ ಈ ಮನಸ್ಥಿತಿಗಳು ನನ್ನನ್ನು ಹೀಗೆ ಕಾಡಬಹುದು ಎನ್ನುವ ಅರಿವಿದ್ದರೂ ನನಗೆ ಯಾಕೋ ಸುಮ್ಮನಿರುವ ಮನಸ್ಸಾಗ್ತಿಲ್ಲ...ಬನ್ನಿ ನೋಡ್ಕೋಳ್ಳೋಣ'' ಎಂದು ಶೀತಲ್ ವಿವರವಾಗಿ ಬರೆದು ಆಕ್ರೋಶ ಹೊರಹಾಕಿದ್ದಾರೆ.

  'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುದು?'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುದು?

  ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ

  ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ

  ಮತ್ತೊಂದು ಪೋಸ್ಟ್‌ನಲ್ಲಿ ಮತ್ತಷ್ಟು ನಟಿಯರನ್ನು ಕೆಟ್ಟದಾಗಿ ಕಾಮೆಂಟ್ ಮಾಡಿರುವ ಫೋಟೋಗಳನ್ನು ಶೀತಲ್ ಹಂಚಿಕೊಂಡು ''ನನ್ನ ಕನ್ನಡ ತಾಯಿ ನನಗೆ ಬೇರೆಯವರನ್ನು ದ್ವೇಷಿಸಲು ಕಲಿಸಿಲ್ಲ. ನನ್ನ ಕನ್ನಡ ನಾಡಲ್ಲಿ ಹೆಣ್ಣನ್ನ ಅಸಹ್ಯವಾಗಿ ನಿಂದಿಸುವ ಪರಿಪಾಠ ಇಲ್ಲ. ದಯವಿಟ್ಟು ಇವುಗಳಿಗೆ ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ. ಇದು ಒಬ್ಬರ ಬಗ್ಗೆ ನಾನು ಮಾತಾಡ್ತಿರೋದಲ್ಲ ನಮ್ಮೆಲ್ಲರ ಪರವಾಗಿ ಮಾತಾಡ್ತಿರೋದು'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಇದು ಸಮಾಜಕ್ಕೆ ಮಾರಕ

  ಇದು ಸಮಾಜಕ್ಕೆ ಮಾರಕ

  ''ಟ್ರೋಲ್ ಪೇಜ್‌ಗಳನ್ನ ನಾನು ಫಾಲೋ ಮಾಡ್ತೀನಿ. ಕ್ರಿಯೇಟಿವ್ ಆಗಿರುವ ಮಜವಾಗಿರೋ ಮೀಮ್‌ಗಳನ್ನ ಎಂಜಾಯ್ ಮಾಡ್ತೀನಿ. ಆದ್ರೆ, ಇದು ಕ್ರಿಯೇಟಿವಿಟಿ ಅಲ್ಲ. ಇದನ್ನು ನೋಡಿ ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ. ದಯವಿಟ್ಟು ಇಂಥವುಗಳನ್ನ ನೋಡಿ ಎಂಜಾಯ್ ಮಾಡಬೇಡಿ. ಇದು ಸಮಾಜಕ್ಕೆ ಮಾರಕ. ಇಂಥವುಗಳನ್ನ ಕಂಡಾಗ ಖಂಡಿಸಿ. ನಮ್ಮ ನಾಡಿನ ಸ್ವಾಸ್ತ್ಯ ಕಾಪಾಡಿ. ನನ್ನ ಬೇಸರ ಟ್ರೋಲ್ ಪೇಜ್‌ಗಳ ವಿರುದ್ಧ ಅಲ್ಲ.'' ಎಂದು ಶೀತಲ್ ಶೆಟ್ಟಿ ಸ್ಪಷ್ಟನೆ ಸಹ ಕೊಟ್ಟಿದ್ದಾರೆ.

  English summary
  Sheetal Shetty Raises Voice Against People Posting Negative Comments on Women, requesting to stop body shaming.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X