For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಖ್ಯಾತಿಯ ಶೀತಲ್ ಶೆಟ್ಟಿಗೆ 'ಪತಿಬೇಕಂತೆ'.!

  By Harshitha
  |

  ಕನ್ನಡದ ಪ್ರಖ್ಯಾತ ಸುದ್ದಿ ವಾಹಿನಿ ಟಿವಿ9 ಹಾಗೂ ಬಿಟಿವಿಯಲ್ಲಿ ನ್ಯೂಸ್ ಆಂಕರ್ ಆಗಿದ್ದ ಶೀತಲ್ ಶೆಟ್ಟಿ ಈಗ 'ಬಿಗ್ ಬಾಸ್' ಶೀತಲ್ ಎಂದೇ ಹೆಸರುವಾಸಿ. 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ, ಸ್ಯಾಂಡಲ್ ವುಡ್ ನಲ್ಲಿ ಶೀತಲ್ ಶೆಟ್ಟಿಗೆ ಬೇಡಿಕೆ ಕೂಡ ಹೆಚ್ಚಾಗಿದೆ.

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮದ ನಿರೂಪಣೆಯಲ್ಲಿ ತೊಡಗಿರುವ ಶೀತಲ್ ಶೆಟ್ಟಿ, ಅದೇ ಗ್ಯಾಪ್ ನಲ್ಲಿ 'ಮೂಕ ನಾಯಕ', '96', 'ಚೇಸ್', 'ಮಾರ್ಗಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.

  ಇವೆಲ್ಲದರೊಂದಿಗೆ ಶೀತಲ್ ಶೆಟ್ಟಿಗೆ 'ಪತಿಬೇಕಂತೆ'.! ಹಾಗಂದ ಮಾತ್ರಕ್ಕೆ ಏನೇನೋ ಕಲ್ಪನೆ ಮಾಡಿಕೊಳ್ಳುವ ಮೊದಲು ಇದು ಅಪ್ಪಟ ರೀಲ್ ಸುದ್ದಿ ಅನ್ನೋದು ನಿಮಗೆ ನೆನಪಿರಲಿ...

  ಹೊಸ ಸಿನಿಮಾದಲ್ಲಿ ಶೀತಲ್ ಶೆಟ್ಟಿ

  ಹೊಸ ಸಿನಿಮಾದಲ್ಲಿ ಶೀತಲ್ ಶೆಟ್ಟಿ

  ಹೊಸ ಚಿತ್ರವೊಂದರಲ್ಲಿ ನಟಿಸಲು ಶೀತಲ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ 'ಪತಿಬೇಕು.ಕಾಮ್'.!

  ಅಸಹ್ಯಕರ ಸಂದೇಶ ಕಳುಹಿಸಿದವನ ಕಥೆ ಏನಾಯ್ತು.? ಶೀತಲ್ ಶೆಟ್ಟಿ ಏನ್ಮಾಡಿದ್ರು.?ಅಸಹ್ಯಕರ ಸಂದೇಶ ಕಳುಹಿಸಿದವನ ಕಥೆ ಏನಾಯ್ತು.? ಶೀತಲ್ ಶೆಟ್ಟಿ ಏನ್ಮಾಡಿದ್ರು.?

  ಮಹಿಳಾ ಪ್ರಧಾನ ಸಿನಿಮಾ

  ಮಹಿಳಾ ಪ್ರಧಾನ ಸಿನಿಮಾ

  'ಪತಿಬೇಕು.ಕಾಮ್'... ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಶೀತಲ್ ಶೆಟ್ಟಿ ಅವರದ್ದೇ ಪ್ರಮುಖ ಪಾತ್ರ. ಯುವತಿಯೊಬ್ಬಳು ಮದುವೆಗಾಗಿ ನಡೆಸುವ ಪರದಾಟವೇ ಈ ಸಿನಿಮಾದ ಕಥಾಹಂದರ.

  'ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!'ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!

  'ಪತಿಬೇಕು.ಕಾಮ್' ಚಿತ್ರತಂಡದ ಕುರಿತು...

  'ಪತಿಬೇಕು.ಕಾಮ್' ಚಿತ್ರತಂಡದ ಕುರಿತು...

  'ಪತಿಬೇಕು.ಕಾಮ್' ಚಿತ್ರವನ್ನು ರಾಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ತರ್ಲೆ ನನ್ಮಕ್ಳು' ಚಿತ್ರ ನಿರ್ಮಿಸಿದ್ದ ರಾಕೇಶ್ ಹಾಗೂ ಅವರ ಗೆಳೆಯರಾದ ಶ್ರೀನಿವಾಸ್, ಮಂಜುನಾಥ್, ವೀರೇಂದ್ರ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

  ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭ

  ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭ

  ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿದ 'ಪತಿಬೇಕು.ಕಾಮ್' ಚಿತ್ರದ ಚಿತ್ರೀಕರಣ ಜುಲೈ 8 ರಿಂದ ಆರಂಭವಾಗಲಿದೆ.

  English summary
  Sheethal Shetty of 'Bigg Boss' fame, starrer new Kannada movie Titled 'Pathibeku.com' goes on floors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X